Advertisement

ಸುಳ್ಯ ನ.ಪಂ.: ಎಲ್ಲೆಡೆ ಶಾಂತಿಯುತ ಮತದಾನ

10:45 PM May 29, 2019 | Team Udayavani |

ಸುಳ್ಯ: ನಗರ ಪಂಚಾಯತ್‌ 20 ವಾರ್ಡ್‌ಗಳಿಗೆ ಬುಧವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಒಟ್ಟು ಶೇ. 75.68 ಮತದಾನವಾಗಿದೆ. 20 ವಾರ್ಡ್‌ಗಳ 53 ಅಭ್ಯರ್ಥಿಗಳ ಹಣೆಬರಹ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 31ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Advertisement

ಬೆಳಗ್ಗಿನಿಂದ ಮಧ್ಯಾಹ್ನ ತನಕ ಮೂರು ನಾಲ್ಕು ಮತಗಟ್ಟೆ ಹೊರತುಪಡಿಸಿದರೆ ಉಳಿದೆಲ್ಲ ಮತಗಟ್ಟೆಗಳಲ್ಲಿ ಜನಸಂದಣಿ ವಿರಳವಾಗಿತ್ತು. ನಗರದ ಕೆಲವೆಡೆ ಬೆಳಗ್ಗೆ ಕೆಲ ಹೊತ್ತು ಹನಿ ಮಳೆಯಾಗಿದೆ. ದಿನಪೂರ್ತಿ ಮೋಡ ಕವಿದ ವಾತಾವರಣ ಕಂಡು ಇತ್ತು. ಮಳೆಯ ಲಕ್ಷಣದಿಂದ ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ಮಂದಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದರು. ಕಲ್ಲುಮುಟ್ಲು, ಜಯನಗರ, ಶಾಂತಿನಗರದಲ್ಲಿ ಸರತಿ ಸಾಲಿನಲ್ಲಿ ಮತ ಚಲಾವಣೆ ದೃಶ್ಯ ಕಂಡು ಬಂದರೆ, ಉಳಿದೆಡೆ ಆಗೊಮ್ಮೆ-ಈಗೊಮ್ಮೆ ಮತ ಚಲಾವಣೆಗೆ ಬರುತ್ತಿದ್ದ ದೃಶ್ಯ ಕಂಡು ಬಂತು.

ಎರಡು ಗಂಟೆಗೊಮ್ಮೆ ಹೆಚ್ಚಳ
ಬೆಳಗ್ಗೆ 7ರಿಂದ 9 ಗಂಟೆ ತನಕ 15.47 ಶೇ., 11 ಗಂಟೆಗೆ 33.47 ಶೇ., ಮಧ್ಯಾಹ್ನ 1 ಗಂಟೆಗೆ 49.88 ಶೇ., ಅಪರಾಹ್ನ 3 ಗಂಟೆಗೆ 61.73 ಮತ ಚಲಾವಣೆ ಆಗಿತ್ತು. ಮತದಾನ ಪ್ರಕ್ರಿಯೆ ಅಂತ್ಯವಾದಾಗ 75.68 ರಷ್ಟು ಮತದಾನ ದಾಖಲಾಗಿತ್ತು. ಬೆಳಗ್ಗಿನಿಂದ ಸಂಜೆ ತನಕ ಎರಡು ಗಂಟೆಗೊಮ್ಮೆ ಶೇ.15 ರಿಂದ 20ರಷ್ಟು ಮತ ಚಲಾವಣೆ ಆಗಿತ್ತು.

ಕನಿಷ್ಠ-ಗರಿಷ್ಠ ಮತದಾನ
20 ವಾರ್ಡ್‌ಗಳ ಪೈಕಿ ಕೊೖಕುಳಿ ವಾರ್ಡ್‌ 2ರಲ್ಲಿ 86.47 ಮತ ಚಲಾವಣೆಗೊಂಡು ಗರಿಷ್ಠ ಮತದಾನವಾಗಿದೆ. 606 ಮತದಾರರ ಪೈಕಿ 524 ಮಂದಿ, ವಾರ್ಡ್‌-8 ಕುರುಂಜಿಬಾಗ್‌ನಲ್ಲಿ 63.64 ಶೇ. ಮತ ಚಲಾವಣೆಗೊಂಡು ಕನಿಷ್ಠ ಮತದಾನವಾಗಿದ್ದು, 462 ಪೈಕಿ 294 ಮಂದಿ ಹಕ್ಕು ಚಲಾಯಿಸಿದ್ದಾರೆ.

ಒಟ್ಟು ವಾರ್ಡ್‌20
ಒಟ್ಟು ಮತಗಟ್ಟೆ20
ಒಟ್ಟು ಮತ14,093
ಚಲಾವಣೆ10,666
ಶೇಕಡಾವಾರು75.68

Advertisement

ಬಿಗಿ ಬಂದೋಬಸ್ತ್
ಈ ಚುನಾವಣೆಯಲ್ಲಿ 7 ಹೆಚ್ಚುವರಿ ಇವಿಎಂ ಬಳಸಲಾಗಿತ್ತು. ಪಿಆರ್‌ಒ, ಎಪಿಆರ್‌ಒಗಳಾಗಿ ಪುತ್ತೂರು ತಾಲೂಕಿನ ಸಿಬಂದಿ ಕರ್ತವ್ಯ ನಿರ್ವಹಿಸಿದ್ದು, ಪೋಲಿಂಗ್‌ ಸಿಬಂದಿ, ಡಿಗ್ರೂಪ್‌ ಸಿಬಂದಿಯಾಗಿ ಸುಳ್ಯ ತಾಲೂಕಿನವರು ಕಾರ್ಯ ನಿರ್ವಹಿಸಿದರು. ಮತಗಟ್ಟೆ ಸಿಬಂದಿ ಚುನಾವಣ ಆಯೋಗದ ವತಿಯಿಂದಲೇ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.ಪ್ರತಿ ಮತಗಟ್ಟೆಗೆ ಎಆರ್‌ಒ-1, ಎಪಿಆರ್‌ಒ-2, ಪೋಲಿಂಗ್‌ ಸಿಬಂದಿ-2, ಡಿಗ್ರೂಪ್‌-1 ಹಾಗೂ 3 ಮಂದಿ ಆರಕ್ಷಕ ಸಿಬಂದಿ ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ್‌ ಕುಂಞಿ ಅಹ್ಮದ್‌, ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಕುಮಾರ್‌, ಚುನಾವಣಾಧಿಕಾರಿಗಳಾದ ದೇವರಾಜ ಮುತ್ಲಾಜೆ ಮತ್ತು ಮಂಜುನಾಥ ಎನ್‌. ಅವರು ವಿವಿಧ ಮತಗಟ್ಟೆಗೆ ತೆರಳಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next