ಹಾಳಾಗುವ ರೀತಿಯಲ್ಲಿದೆ.
Advertisement
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿನ ಸ್ವೋದ್ಯೋಗಕ್ಕಾಗಿ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳ ಉದ್ಘಾಟನೆ ಕಾರ್ಯಕ್ರಮ ಮಾ.26ರಂದು ಇಲ್ಲಿ ನಡೆದಿತ್ತು. ಸಚಿವಅಂಗಾರ ಅವರು ಉದ್ಘಾಟಿಸಿದ್ದರು.
ಸುಳ್ಯ ತಾ. ಪಂ. ಕಚೇರಿ ಬಳಿ ಯೋಜನೆ ಉದ್ಘಾಟನೆಗಾಗಿ 12 ಮತ್ಸ್ಯ ವಾಹಿನಿಯ ತ್ರಿಚಕ್ರ ವಾಹನಗಳನ್ನು ತರಲಾಗಿತ್ತು. ಈ ವಾಹನಗಳು ಅನಾಥ ಸ್ಥಿತಿಯಲ್ಲಿರುವ ಬಗ್ಗೆ ಉದಯವಾಣಿ ಸುದಿನದಲ್ಲಿ ಮೇ 24ರಂದು ವರದಿ ಪ್ರಕಟಗೊಂಡಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಎಂಟು ವಾಹನಗಳನ್ನು ಕೆಎಫ್ ಡಿಸಿಯವರು ಮಂಗಳೂರಿನ ಮೀನುಗಾರಿಕ ಕಾಲೇಜಿನ ಶೆಡ್‌ಗೆ
ಕೊಂಡೊಯ್ದಿದ್ದರು. ಆದರೆ ಇನ್ನೂ ನಾಲ್ಕು ವಾಹನಗಳು ಸುಳ್ಯದಲ್ಲೇ ಬಾಕಿಯಾಗಿದೆ. ಈಗ ಈ ನಾಲ್ಕು ವಾಹನಗಳನ್ನು ನಿಲ್ಲಿಸಲಾದ ಸ್ಥಳದಲ್ಲಿ ಹುಲ್ಲು, ಗಿಡಗಳು ಬೆಳೆದು ವಾಹನಗಳನ್ನು ಸುತ್ತುವರಿಯಲು ಆರಂಭಿಸಿದೆ. ಮಳೆಯ ನೀರು ವಾಹನದೊಳಗೆ ಹೋಗಿ ವಾಹನ ತುಕ್ಕು ಹಿಡಿಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಿಸಿಲು, ಮಳೆಗೆ
ವಾಹನಗಳು ಹಾನಿಗೊಳ್ಳುತ್ತಿರುವುದು ಕಂಡುಬಂದಿದೆ.
Related Articles
ಈ ವಾಹನದ ಗುತ್ತಿಗೆ ವಹಿಸಿಕೊಂಡಿದ್ದ ಖಾಸಗಿ ಸಂಸ್ಥೆ ಅವರು ಈ ವಾಹನವನ್ನು ಕರ್ನಾಟಕ ಮೀನುಗಾರಿಕ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರ ಮಾಡಿಲ್ಲ ಎನ್ನುವುದು ಕೆಎಫ್ ಡಿಸಿ ಸಂಸ್ಥೆಯವರು ನೀಡುವ ಮಾಹಿತಿ. ಬೆಂಗಳೂರಿನಲ್ಲಿ ಇದರ ರಿಜಿಸ್ಟ್ರೇಶನ್ ಕೂಡ ಆಗಿಲ್ಲ ಎನ್ನಲಾಗಿದೆ.
Advertisement
ಜತೆಗೆ ಅವರಿಗೆ ಪೂರ್ತಿ ಬಿಲ್ ಕೂಡ ಪಾವತಿಯಾಗಿಲ್ಲ ಎನ್ನಲಾಗಿದ್ದು, ಈ ಎಲ್ಲಾ ಕಾರಣಗಳಿಂದ ಈ ವಾಹನ ಇಲ್ಲೇಬಾಕಿಯಾಗಿದೆ ಎನ್ನುವುದು ಇನ್ನೊಂದು ಮಾಹಿತಿ. ಇದು ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದ ಯೋಜನೆಯಾಗಿದ್ದು, ಒಟ್ಟು ಗೊಂದಲಗಳಿಂದ ಫಲಾನುಭವಿಗಳ ಕೈ ಸೇರಬೇಕಾದ ಹೊಸ ಮತ್ಸ್ಯ ವಾಹಿನಿ ವಾಹನಗಳು ಸೂಕ್ತ ರಕ್ಷಣೆ ಇಲ್ಲದೆ
ಅನಾಥ ಸ್ಥಿತಿಯಲ್ಲಿರುವುದು ದುರಂತದ ಸಂಗತಿ.