ಸುಳ್ಯ: ಜಾಲ್ಸೂರು ಭಾಗದಲ್ಲಿ ಕೃಷಿ ತೋಟಕ್ಕೆ ಮತ್ತೆ ಕಾಡಾನೆ ಲಗ್ಗೆ ಇಟ್ಟಿದೆ. ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಒಂಟಿ ಸಲಗವು ಅಲ್ಲಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸುತ್ತಿದ್ದು, ಜಾಲ್ಸೂರು ಗ್ರಾಮದ ನಂಗಾರಿನಲ್ಲಿ ಜ. 6ರಂದು ರಾತ್ರಿ ತೋಟಕ್ಕೆ ಲಗ್ಗೆ ಇಟ್ಟಿದೆ.
ನಂಗಾರಿನ ಕೃಷಿಕ ರವಿಶಂಕರ್ ಭಟ್ ಅವರ ತೋಟದ 5 ತೆಂಗಿನ ಮರ, ಅಡಿಕೆ, ಬಾಳೆ ಕೃಷಿಯನ್ನು ನಾಶಗೊಳಿಸಿದೆ.
ಜ. 5ರಂದು ರಾತ್ರಿ ಜಾಲ್ಸೂರಿನ ಕೆಮನಬಳ್ಳಿ ಪರಿಸರದಲ್ಲಿ ಕೃಷಿಕರ ತೋಟಕ್ಕೆ ದಾಳಿ ನಡೆಸಿತ್ತು. ಹಗಲು ಹೊತ್ತಿನಲ್ಲಿ ಸಮೀಪದ ಕಾಡಿನಲ್ಲಿ ಇರುವ ಕಾಡಾನೆ ರಾತ್ರಿ ತೋಟಗಳಿಗೆ ಲಗ್ಗೆ ಇಡುತ್ತಿದೆ.
ಸುಳ್ಯ ತಾಲೂಕು ಮಂಡೆಕೋಲಿನ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡು ಶನಿವಾರ ರಾತ್ರಿ ಮಂಡೆಕೋಲಿನ ಅಕ್ಕಪ್ಪಾಡಿಯ ಅಪ್ಪಯ್ಯ ಮಣಿಯಾಣಿ ಹಾಗೂ ವಿಶ್ವನಾಥ ಅವರ ತೋಟಕ್ಕೆ ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಅಡಿಕೆ, ಬಾಳೆ ಗಿಡಗಳನ್ನು ಹಾನಿಗೊಳಿಸಿದೆ.