Advertisement

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

12:18 AM May 25, 2024 | Team Udayavani |

ಸುಳ್ಯ: ಸುಳ್ಯದ ಕಲ್ಲುಮುಟ್ಲು ಡ್ಯಾಂನ ಗೇಟ್‌ ತೆರವು ಮಾಡಿ ನೀರು ಹೊರಕ್ಕೆ ಬಿಟ್ಟ ಪರಿಣಾಮ ಹೀರು ಸಂಗ್ರಹಗೊಂಡಿದ್ದ ಡ್ಯಾಂ ಮೇಲ್ಭಾಗದಲ್ಲಿ ಮಣ್ಣು ಕುಸಿತಗೊಂಡ ಘಟನೆ ಸಂಭವಿಸಿದೆ.

Advertisement

ಬೇಸಗೆಯಲ್ಲಿ ಡ್ಯಾಂ ಗೇಟ್‌ ಅಳವಡಿಸಿದ್ದರಿಂದ ಅಣೆಕಟ್ಟಿನಲ್ಲಿ ಸುಮಾರು 10-15 ಅಡಿ ಎತ್ತರದಲ್ಲಿ ನೀರು ಸಂಗ್ರಹಗೊಂಡು ಎರಡು ಭಾಗದಲ್ಲಿ ಕೃಷಿ ತೋಟಗಳು ಕಳೆದ 6 ತಿಂಗಳ ಕಾಲ ಪೂರ್ಣ ಪ್ರಮಾಣದಲ್ಲಿ ಜಲಾವೃತಗೊಂಡಿದ್ದವು.

ಡ್ಯಾಂನಲ್ಲಿ ನೀರು ಶೇಖರಣೆಯಿಂದ ಸುಳ್ಯ ನಗರ ನಿವಾಸಿಗಳಿಗೆ ಹಾಗೂ ನದಿಯ ಆಸು-ಪಾಸಿನ ಕೃಷಿಕ ರಿಗೂ ಪ್ರಯೋಜನವಾಗಿತ್ತು. ನಾಗಪಟ್ಟಣ ದಿಂದ ಮೇಲೆ ಅರಂಬೂರು ಪೆರಾಜೆ ವರೆಗೆ ನೀರು ಸಂಗ್ರಹಗೊಂಡು ನದಿ ಬದಿಯ ತೋಟಗಳು ಜಲಾವೃತ ಗೊಂಡಿದ್ದವು ಎನ್ನುತ್ತಾರೆ ಕೃಷಿಕರು.

ನದಿ ಬದಿಯ ಮಣ್ಣು ಕುಸಿತಇದೀಗ ನಿರಂತರ ಮಳೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದ್ದರಿಂದ ಡ್ಯಾಂ ಗೇಟ್‌ ತೆರವು ಮಾಡಿ ನೀರು ಹೊರಕ್ಕೆ ಬಿಡಲಾಗಿದೆ. ಪರಿಣಾಮ ನದಿ ಬದಿಯಲ್ಲಿ ಮಣ್ಣು ಕುಸಿತಗೊಳ್ಳುತ್ತಿದ್ದು, ನದಿ ಬದಿಯ ಮಣ್ಣು ಮರ ಸಮೇತ ನದಿಗೆ ಬೀಳುತ್ತಿದೆ. ಜತೆಗೆ ಕೆಲವೆಡೆ ಕೃಷಿ ಬೆಳೆಗಳು ನದಿಗುರುಳುತ್ತಿರುವ ಘಟನೆ ಸಂಭವಿಸುತ್ತಿವೆ. ಮಳೆಗಾಲದಲ್ಲಿ ಹೆಚ್ಚಿನ ಮಳೆಗೆ ಇನ್ನಷ್ಟು ಕುಸಿತ ಸಂಭವಿಸುವ ಮೊದಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next