Advertisement
ಈ ಆರು ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂಬ ಚರ್ಚೆ ಸುಳ್ಯಕ್ಕೂ ಮಹತ್ವದ್ದು. ದಕ್ಷಿಣ ಕನ್ನಡ ಕ್ಷೇತ್ರದ ಜತೆಗೆ ಉಳಿದ ಐದು ಕಡೆ ಫಲಿತಾಂಶ ಏನಾಗಬಹುದೆಂಬ ಕಾತರ, ಕುತೂಹಲ ಇಲ್ಲಿನ ಜನರಿಗಿದೆ. ಈ ಎಲ್ಲ ಕ್ಷೇತ್ರಗಳಿಗೂ ಸುಳ್ಯಕ್ಕೂ ಇರುವ ರಾಜಕೀಯ ನಂಟು ಇದಕ್ಕೆ ಕಾರಣ.
ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ಕೊಡಗು-ಮೈಸೂರು, ಹಾಸನ ಮತ್ತು ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರಗಳ ಮೇಲೆ ಸುಳ್ಯದವರು ನಿಗಾ ಇರಿಸಿದ್ದಾರೆ. ಅಲ್ಲಿನ ದಿನ ನಿತ್ಯದ ಬೆಳವಣಿಗೆಗಳ ತಿಳಿದುಕೊಳ್ಳುತ್ತಾರೆ. ಇವುಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಸುಳ್ಯದವರೇ ಸ್ಪರ್ಧಿಗಳಾದರೆ ಉಳಿದ ಮೂರು ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿಗೆ ತಾಗಿವೆ. ಸುಳ್ಯದ ಮೂವರು ಸ್ಪರ್ಧಿಗಳು
ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರದಿಂದ, ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಚಾರ್ವಾಕ ಗ್ರಾಮದ ಕರಂದ್ಲಾಜೆ ನಿವಾಸಿ ಶೋಭಾ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ, ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನಳಿನ್ ಕುಮಾರ್ ಕಟೀಲು ದ.ಕ.ದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಯ ಫಲಿತಾಂಶದ ಬಗೆಗಿಯರುವ ಕುತೂ ಹಲದಷ್ಟೇ ಉಳಿದೆರಡು ಕಡೆಗೂ ಇದೆ.
Related Articles
Advertisement
ಸಕಲೇಶಪುರದ ಗಡಿ ಶಿರಾಡಿ ಗ್ರಾಮಕ್ಕೆ ತಾಗಿದೆ. ಕೊಡಗು -ಮೈಸೂರು ಕ್ಷೇತ್ರದ ಅನೇಕ ಗ್ರಾಮಗಳು ಸುಳ್ಯದ ಗಡಿಯಲ್ಲಿವೆ. ಸಂಪಾಜೆ, ಚೆಂಬು,ಪೆರಾಜೆ ಪ್ರದೇಶಗಳು ಸುಳ್ಯ ಗಡಿಯಲ್ಲಿವೆ. ಕಿರಣ್ ಪ್ರಸಾದ್ ಕುಂಡಡ್ಕ