Advertisement
ಆಟೋ ಚಾಲಕ ಜಾಲ್ಸೂರು ಗ್ರಾಮದ ಅರಿಯಡ್ಕ ನಿವಾಸಿ ಬಾಬು ಪಾಟಾಳಿ (70) ಮೃತರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಾಣಿ- ಮೈಸೂರು ಹೆದ್ದಾರಿಯ ಸುಳ್ಯ ನಗರದ ಹಳೆಗೇಟು ಎಂಬಲ್ಲಿ ದೇವರಾಜ್ ಅವರು ತನ್ನ ಆಮ್ನಿ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆಸಿದ್ದಾರೆ.
ಅಪಘಾತದಲ್ಲಿ ಮೃತರಾದ ಆಟೋ ಚಾಲಕ ಬಾಬು ಪಾಟಾಳಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಸುಳ್ಯದಿಂದ ಆಟೋರಿಕ್ಷಾ ಚಾಲಕರು ಮೆರವಣಿಗೆಯ ಮೂಲಕ ಜಾಲ್ಸೂರಿನ ಪೆಟ್ರೋಲ್ ಬಂಕ್ ತನಕ ಸಾಗಿ ಬಳಿಕ ಮೃತರ ಸ್ವಗೃಹವಾದ ಅರಿಯಡ್ಕಕ್ಕೆ ಕೊಂಡೊಯ್ಯಲಾಯಿತು. ಬಾಬು ಪಾಟಾಳಿ ಅವರು ಆಟೋರಿಕ್ಷಾ ಚಾಲಕರಾಗಿ ಸುಮಾರು 40 ವರ್ಷಗಳ ಕಾಲ ದುಡಿದಿದ್ದು, ಜಾಲೂÕರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನ ಮಂದಿರದ ಅಧ್ಯಕ್ಷರಾಗಿ ಸುಮಾರು ಇಪ್ಪತ್ತು ವರ್ಷ ಸೇವೆ ಸಲ್ಲಿಸಿದ್ದರು.