Advertisement

Sullia: ಮನೆ, ಅಂಗಡಿಗಳಿಗೆ ನುಗ್ಗಿ ಚಿನ್ನ, ನಗದು, ಸಾಮಗ್ರಿ ಕಳವು

11:50 PM Jul 17, 2023 | Team Udayavani |

ಸುಳ್ಯ: ಸುಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ಕನಕಮಜಲು, ಜಾಲ್ಸೂರು ಪರಿಸರದಲ್ಲಿ ರವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕನಕಮಜಲಿನ ಮನೆಯಿಂದ, ಜಾಲ್ಸೂರು ಹಾಗೂ ನೋಬನಗರದಲ್ಲಿ ಅಂಗಡಿಗಳಿಂದ ಕಳ್ಳತನ ಕೃತ್ಯ ನಡೆದಿದೆ.

Advertisement

ಪ್ರಕರಣ 1: ಕನಕಮಜಲು
ಕನಕಮಜಲು ಗ್ರಾಮದ ಸಣ್ಣ ಮೂಲೆ ಬುಡ್ಲೆಗುತ್ತು ಯುರೇಶ್‌ ಅವರ ಮನೆಯಿಂದ ಕಳ್ಳತನ ನಡೆದಿದೆ. ಯುರೇಶ್‌ ಅವರ ಮನೆ ಸಮೀಪದ ಸಂಬಂಧಿಯೊಬ್ಬರು ನಿಧನ ಹೊಂದಿದ ಹಿನ್ನಲೆಯಲ್ಲಿ ರಾತ್ರಿ ಮನೆಗೆ ಬಾಗಿಲು ಹಾಕಿ ಅಂತ್ಯಕ್ರಿಯೆಗೆ ತೆರಳಿದ್ದರು. ಈ ವೇಳೆ ಮನೆಯ ಹಿಂಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು 30 ಪವನ್‌ಗೂ ಅಧಿಕ ಚಿನ್ನಾಭರಣ ಕಳವುಗೈದಿದ್ದಾರೆ. ಎದುರಿನ ಬಾಗಿಲು ತೆರೆಯಲು ಯತ್ನಿಸಿ ಸಾಧ್ಯವಾಗದೇ ಇದ್ದಾಗ ಹಿಂಬಾಗಿಲನ್ನು ಒಡೆದು ಒಳನುಗ್ಗಿರುವುದು ಕಂಡುಬಂದಿದೆ.

ಪ್ರಕರಣ 2: ಜಾಲ್ಸೂರಿನಲ್ಲಿ
ಜಾಲ್ಸೂರಿನ ಸಿಂಡಿಕೇಟ್‌ ಬ್ಯಾಂಕ್‌ ಸಮೀಪದ ಜೋಗಿ ಅವರ ಅಂಗಡಿಯ ಬೀಗ ಮುರಿದು ಕಳ್ಳರು ಡ್ರಾವರ್‌ನಲ್ಲಿದ್ದ ಚಿಲ್ಲರೆ ಹಣ ಸೇರಿದಂತೆ 2 ಸಾವಿರ ನಗದು, ಅಂಗಡಿ ಸಾಮಗ್ರಿಗಳನ್ನು ಕಳವುಗೈದಿದ್ದಾರೆ.

ಪ್ರಕರಣ 3: ಕೋನಡ್ಕಪದವಿನಲ್ಲಿ
ಜಾಲ್ಸೂರು ಗ್ರಾಮದ ವಿನೋಬ ನಗರದಲ್ಲಿರುವ ಕೋನಡ್ಕ ಪದವಿನ ಸುಂದರ್‌ ನಾಯಕ್‌ ಅವರ ಗೂಡಂಗಡಿಯ ಬೀಗ ಮುರಿದು ಮಾರಾಟದ ಕೊಡೆ, ಮತ್ತಿತರ ಸಾಮಗ್ರಿಗಳನ್ನು ಕಳವುಗೈದಿದ್ದಾರೆ.

ಬೆರಳಚ್ಚು ತಜ್ಞರಿಂದ ಪರಿಶೀಲನೆ
ಕಳವು ಕೃತ್ಯ ನಡೆದ ಸ್ಥಳಗಳಿಗೆ ಮಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಡಿಶನಲ್‌ ಎಸ್ಪಿ ಧರ್ಮಪ್ಪ, ಪುತ್ತೂರು ಡಿವೈಎಸ್ಪಿ ಡಾ| ಗಾನಾ ಪಿ. ಕುಮಾರ್‌, ವೃತ್ತನಿರೀಕ್ಷಕ ನವೀನ್‌ಚಂದ್ರ ಜೋಗಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳು, ಸಿಬಂದಿ ಘಟನ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಒಂದೂವರೆ ತಿಂಗಳಿನಲ್ಲಿ
ನಿರಂತರ ಕಳ್ಳತನ
ಜಾಲ್ಸೂರು, ಕನಕಮಜಲು ವ್ಯಾಪ್ತಿ ಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ನಿರಂತರ ಕಳ್ಳತನ ಪ್ರಕರಣ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಗ್ರಾ.ಪಂ.ನಲ್ಲೂ ಕಳ್ಳತನಕ್ಕೆ ಯತ್ನ ನಡೆದಿತ್ತು. ಪೊಲೀಸ್‌ ಇಲಾಖೆ ಬೀಟ್‌ ವ್ಯವಸ್ಥೆ, ಗಸ್ತು ವ್ಯವಸ್ಥೆ ಬಿಗಿ ಗೊಳಿಸಿ ಕಳ್ಳತನ ಪ್ರಕರಣ ನಡೆಯದಂತೆ ಮುಂಜಾಗ್ರತೆ ವಸಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ

ಸೂಕ್ತ ಗಸ್ತು, ಬೀಟ್‌ ವ್ಯವಸ್ಥೆಗೆ ಕ್ರಮ: ಎಸ್ಪಿ
ಸುಳ್ಯದ ಕಜನಕಮಜಲು, ಜಾಲ್ಸೂರು ಭಾಗದಲ್ಲಿ ನಡೆದಿರುವ ಕಳ್ಳತನ ಕೃತ್ಯದ ಸ್ಥಳಗಳಿಗೆ ಪೊಲೀಸರು, ತಜ್ಞರು, ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದೆ. ನಿರಂತರ ಕಳ್ಳತನ ಆಗುತ್ತಿರುವ ಹಿನ್ನಲೆಯಲ್ಲಿ ಸೂಕ್ತ ಗಸ್ತು, ಬೀಟ್‌ ವ್ಯವಸ್ಥೆಗೆ ಸೂಚಿಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಾಂತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next