Advertisement

Sullia ಹಲ್ಲೆ ಪ್ರಕರಣ: ಶಿಕ್ಷೆ ವಿಧಿಸಿದ ನ್ಯಾಯಾಲಯ

09:44 PM Dec 10, 2023 | Team Udayavani |

ಸುಳ್ಯ: ನಿವೃತ್ತ ಯೋಧ, ಸುಳ್ಯ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಪ್ರಕರಣದ ಆರೋಪಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Advertisement

2018ರ ನ. 20ರಂದು ಬೆಳಗ್ಗೆ ಮಂಡೆಕೋಲು ಗ್ರಾಮದ ಪೇರಾಲು ಎಂಬಲ್ಲಿ ಮಾಜಿ ಸೈನಿಕ ಅಡ್ಡಂತಡ್ಕ ದೇರಣ್ಣ ಗೌಡರು ಪೇರಾಲು ಅಂಚೆ ಕಚೇರಿಯ ಬಳಿ ರಸ್ತೆಯಲ್ಲಿ ನಿಂತುಕೊಂಡಿದ್ದ ಸಮಯ ನಾಗೇಶ ಅವರು ಹಿಂಬದಿಯಿಂದ ಬಂದು ಏಕಾಏಕಿ ಅವ್ಯಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ದೇರಣ್ಣ ಗೌಡರ ತಲೆಗೆ ಹೊಡೆದು, ಜೀವ ಬೆದರಿಕೆ ಒಡ್ಡಿದ್ದು ಹಲ್ಲೆಯ ಪರಿಣಾಮ ದೇರಣ್ಣ ಗೌಡರಿಗೆ ಗಾಯವಾಗಿತ್ತು. ದೇರಣ್ಣ ಗೌಡರು ಪಂಚಾಯತ್‌ ಸದಸ್ಯರಾಗಿದ್ದ ಸಮಯದಲ್ಲಿ ಮಂಡೆಕೋಲು ಪಂಚಾಯತ್‌ಗೆ ಕಾಯ್ದಿರಿಸಿದ ಜಾಗವನ್ನು ನಾಗೇಶರು ತನ್ನ ಹೆಸರಿಗೆ ಅಕ್ರಮವಾಗಿ ಮಾಡಿಸಿಕೊಂಡಿರುವುದಾಗಿ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಿರಂತರ ಹೋರಾಟ ನಡೆಸಿದ ಕಾರಣಕ್ಕೆ ದ್ವೇಷಗೊಂಡು ಈ ಕೃತ್ಯ ನಡೆಸಿದ್ದಾಗಿದೆ ಎಂದು ಆರೋಪಿಯ ವಿರುದ್ಧ ದೋಷಾರೋಪಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಸುಳ್ಯದ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಬಿ.ಮೋಹನ್‌ ಬಾಬುರವರು ಕಲಂ 504, 506 ರಲ್ಲಿ ಆರೋಪ ಸಾಬೀತಾಗದೆ ಆ ಆರೋಪದಿಂದ ದೋಷಮುಕ್ತಗೊಳಿಸಿ, ಕಲಂ 324 ರಡಿಯಲ್ಲಿ ಅಪರಾಧ ಎಸಗಿರುವುದು ಸಾಬೀತಾಗಿರುತ್ತದೆ ಎಂದು ಶಿಕ್ಷೆ ವಿಧಿಸಿರುತ್ತಾರೆ.

ಕಲಂ 324ರ ಅಪರಾಧಕ್ಕೆ ನ್ಯಾಯಾಲಯವು 10,000 ರೂ. ಜುಲ್ಮಾನೆ ವಿಧಿಸಿ, ಜುಲ್ಮಾನೆ ಕಟ್ಟದ ಪಕ್ಷದಲ್ಲಿ 6 ತಿಂಗಳ ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ಆದೇಶ ಮಾಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next