Advertisement
1967ರಲ್ಲಿ ಪ್ರಾರಂಭವಾದ ಸುಳ್ಕೋಡು ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಗ್ರಾಮಸ್ಥರ ನೆಚ್ಚಿನ ಶಾಲೆಯಾಗಿ ಮೂಡಿಬಂದಿದೆ.
ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಹಳೆಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸಬೇಕಾದ ಅಗತ್ಯ ಕಂಡುಬಂದಿದೆ. ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಶಾಲೆಯಲ್ಲಿರುವ ಸೌಲಭ್ಯಗಳು
ಸುವರ್ಣ ವಿದ್ಯಾನಿಧಿ ಸ್ಥಾಪನೆ, ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್, ಶಾಲೆಗೆ ಕಾಂಪೌಂಡ್ ಹಾಗೂ ರಸ್ತೆ ನಿರ್ಮಾಣವಾಗಿದೆ.
Related Articles
ಕಳೆದ ವರ್ಷ 1ರಿಂದ 7ನೇ ತರಗತಿ ತನಕ 103 ವಿದ್ಯಾರ್ಥಿಗಳಿದ್ದರು. ಈ ವರ್ಷ 123 ವಿದ್ಯಾರ್ಥಿಗಳಿದ್ದಾರೆ. 2020-21ನೇ ಸಾಲಿನ 1ನೇ ತರಗತಿಯಲ್ಲಿ 15 ವಿದ್ಯಾರ್ಥಿ ಗಳಿದ್ದು, 2021-22ನೇ ಸಾಲಿನಲ್ಲಿ 18 ವಿದ್ಯಾರ್ಥಿಗಳಿದ್ದಾರೆ. 2ನೇ ತರಗತಿಯಲ್ಲಿ ಕಳೆದ ವರ್ಷ 14, ಈ ವರ್ಷ 18, 3ನೇ ತರಗತಿಯಲ್ಲಿ ಈ ವರ್ಷ 14, 4ನೇ ತರಗತಿಯಲ್ಲಿ 20, 5ನೇ ತರಗತಿಯಲ್ಲಿ 18, 6ನೇ ತರಗತಿಯಲ್ಲಿ 23, 7ನೇ ತರಗತಿಯಲ್ಲಿ 12 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
Advertisement
ಇದನ್ನೂ ಓದಿ:ಪಂಜಾಬ್ ರಾಜಕೀಯ ಬೆಳವಣೆಗೆಗೆ ಬಿಗ್ ಟ್ವಿಸ್ಟ್ | ಕುತೂಹಲ ಮೂಡಿಸಿದ ಶಾ-ಕ್ಯಾಪ್ಟನ್ ಭೇಟಿ
ಕೊರತೆಗಳು ಹಲವುಹೈಟೆಕ್ ಶೌಚಾಲಯದ ಕೊರತೆ ಇದೆ. 2000ನೇ ಇಸವಿಯಲ್ಲಿ ಸರ್ವಶಿಕ್ಷಣ ಅಭಿಯಾನದಡಿ ನಿರ್ಮಾಣಗೊಂಡ ಶೌಚಾಲಯವಿದ್ದು, ಅದನ್ನು ಬದಲಾಯಿಸುವ ಅಗತ್ಯ ಇದೆ. ಕಚೇರಿ ಹಾಗೂ ಕಂಪ್ಯೂಟರ್ ಕೊಠಡಿ ಕೊರತೆ ಇದೆ. ಪೀಠೊಪಕರಣಗಳ ಕೊರತೆ ಇದ್ದು, ವಾಚನಾಲಯದ ಅಗತ್ಯತೆ ಇದೆ. ಪ್ರಯೋಗಾಲಯ ನಿರ್ಮಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು. ಪರಿಸರದ ಕಾನ್ಕಿ,ಹುಲಿಪಾರೆ, ಬೀಸಿನಪಾರೆ, ನಂದಿಗದ್ದೆ, ಗೋಳಿಗುಡ್ಡೆ, ಹೆಮ್ಮಕ್ಕಿ, ಹರ್ಕೋಡು ಪರಿಸರದಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಶಿಕ್ಷಕರ ಕೊರತೆ
ಕನಿಷ್ಠ 6 ಶಿಕ್ಷಕರಿರಬೇಕಾದ ಈ ಶಾಲೆಯಲ್ಲಿ ಕೇವಲ 3 ಶಿಕ್ಷಕರಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಅಭಿವೃದ್ಧಿ ಕಾರ್ಯಗಳು ನಡೆದಿವೆ
ಸುಳ್ಕೋಡು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶಾಸಕರು ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇನ್ನಷ್ಟು ಮೂಲಸೌಕರ್ಯಗಳಿಗೆ ಬೇಡಿಕೆಗಳಿದ್ದು, ಅವುಗಳನ್ನು ಈಡೇರಿಸಿದಲ್ಲಿ ಅನುಕೂಲವಾದೀತು.
– ಭಾಸ್ಕರ್ ನಾಯ್ಕ, ಮುಖ್ಯ ಶಿಕ್ಷಕರು ಇನ್ನಷ್ಟು ಬೇಡಿಕೆ
ಶಾಲಾಭಿವೃದ್ಧಿಗೆ ಪೂರಕವಾದ ಅನೇಕ ಕಾರ್ಯಗಳು ನಡೆದಿವೆ. ಇನ್ನಷ್ಟು ಸೌಕರ್ಯಗಳಿಗೆ ಬೇಡಿಕೆಗಳಿದ್ದು, ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
-ಮಾಲತಿ ಗೋಪಾಲ ನಾಯ್ಕ,
ಎಸ್.ಡಿ.ಎಂ.ಸಿ. ಅಧ್ಯಕ್ಷೆ -ಡಾ| ಸುಧಾಕರ ನಂಬಿಯಾರ್