ನವದೆಹಲಿ: ಗಣ್ಯಾತಿಗಣ್ಯರು, ರಾಜಕಾರಣಿಗಳು, ತಾರೆಯರಿಗೆ ನೂರಾರು ಕೋಟಿ ರೂ.ಗಳನ್ನು ವಂಚಿಸಿರುವ ಸುಕೇಶ್ ಚಂದ್ರಶೇಖರ್ ಕುರಿತ ಸಿನಿಮಾ ಬರಲಿದೆಯಾ?
ಬಾಲಿವುಡ್ ನಿರ್ದೇಶಕ ಆನಂದ್ ಕುಮಾರ್ ಇಂತಹದ್ದೊಂದು ಲೆಕ್ಕಾಚಾರ ಮಾಡಿದ್ದಾರೆಂದು ಮೂಲಗಳು ಹೇಳಿವೆ. ದೆಹಲಿಯ ತಿಹಾರ್ ಜೈಲಿನ ಎಎಸ್‌ಪಿ ಜೈಲರ್ ದೀಪಕ್ ಶರ್ಮ ಪ್ರತಿಕ್ರಿಯಿಸಿ, ಸುಕೇಶ್ ಚಂದ್ರಶೇಖರ್ ಪ್ರಕರಣದ ಬಗ್ಗೆ ಜನರಲ್ಲಿ ಬಹಳ ಕುತೂಹಲವಿದೆ ಎಂದು ಹೇಳಿದ್ದಾರೆ.
ಮದ್ರಾಸ್ ಕೆಫೆ ಸಿನಿಮಾ ನಟಿ ಲೀನಾ ಮಾರಿಯಾ ಪೌಲ್‌ರನ್ನು ವಿವಾಹವಾಗಿರುವ ಸುಕೇಶ್, ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ರೊಂದಿಗೂ ಸಂಬಂಧ ಹೊಂದಿದ್ದು ಖಚಿತವಾಗಿದೆ.
ಜಾಕ್ವೆಲಿನ್ ಸೇರಿದಂತೆ ಅನೇಕ ನಟಿಯರನ್ನು ಬುಟ್ಟಿಗೆ ಹಾಕಿಕೊಂಡು, ಅವರಿಗೂ ಕೋಟ್ಯಂತರ ರೂ. ವಂಚನೆಯ ಹಣವನ್ನು ಕೊಡುಗೆಯಾಗಿ ನೀಡಿದ್ದಾನೆ ಎಂಬ ಆರೋಪಗಳಿವೆ.
Related Articles
ರ್ಯಾನ್‌ಬ್ಯಾಕ್ಸಿ ಎಂಬ ಔಷಧ ಕಂಪನಿಯ ಮಾಜಿ ಮಾಲಿಕ ಶಿವಿಂದರ್ ಸಿಂಗ್ ಪತ್ನಿ ಅದಿತಿ ಸಿಂಗ್‌ಗೆ 200 ಕೋಟಿ ರೂ. ವಂಚಿಸಿದ್ದಾರೆ. ಎಐಎಡಿಎಂಕೆಯ ಶಶಿಕಲಾ ಬಣಕ್ಕೆ ಪಕ್ಷದ ಚಿಹ್ನೆ ಸಿಗುತ್ತದೆ ಎಂದು ಭರವಸೆ ನೀಡಿಯೂ ವಂಚಿಸಿದ್ದಾರೆ. ಅವರಿಂದ ಮೋಸ ಹೋದ ಹಲವಾರು ಮಂದಿ ದೂರು ನೀಡಿದ್ದಾರೆ.
ಈತನ ಬದುಕೇ ಸಿನಿಮಾ ಕಥೆಯಂತಿರುವ ಕಾರಣ ಅದನ್ನೇ ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರಂತೆ!