ಬೆಳ್ತಂಗಡಿ: ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯ ವತಿಯಿಂದ ಪ್ರಗತಿ ಬಂಧು-ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ನೀಡಲಾಗುತ್ತಿರುವ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮದ 2023-24ನೇ ಸಾಲಿನ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಶ್ರೀ ಕೇತ್ರ ಧರ್ಮಸ್ಥಳದಲ್ಲಿ ಸೋಮವಾರ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಚಾಲನೆ ನೀಡಿದರು.
ಡಾ| ಹೆಗ್ಗಡೆಯವರು ಉದ್ಘಾಟಿಸಿ ಮಾತನಾಡಿ, ಶಿಕ್ಷಣದಲ್ಲಿಂದು ವಿವಿಧ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಅಪಾರ ಅವಕಾಶಗಳಿವೆ. ಆದರೆ ಬಡವರ, ಕೂಲಿ ಕಾರ್ಮಿಕರ ಮಕ್ಕಳು ಇಂತಹ ಶಿಕ್ಷಣ ಪಡೆಯುವುದು ಕಷ್ಟದ ಮಾತು. ಬಡತನ, ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಕೊರತೆಯಿಂದ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳು ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣದಿಂದ ಹೊರಗುಳಿಯುವಂತಾಗಿದೆ.
ಇದನ್ನರಿತು ನಾವು ಬಡ ವಿದ್ಯಾರ್ಥಿಗಳಿಗಾಗಿಯೇ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮ ಜಾರಿಗೆ ತಂದೆವು ಎಂದರು.
ಸುಜ್ಞಾನನಿಧಿ ಕಾರ್ಯಕ್ರಮದಂತೆ ಪ್ರಗತಿಬಂಧು ಸ್ವ-ಸಹಾಯ ಸಂಘದ ಕುಟುಂಬಗಳ ಪ್ರತಿಭಾನ್ವಿತ ಮಕ್ಕಳ ತಾಂತ್ರಿಕ ಹಾಗೂ ವೃತ್ತಿಪರ ಕೋಸ್ ìಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಇದರಂತೆ 3 ವರ್ಷದ ವರೆಗಿನ ಕೋರ್ಸ್‌ಗೆ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ತಲಾ 400 ರೂ. ಹಾಗೂ ಅದರಿಂದ ಮೇಲ್ಪಟ 5 ವರ್ಷದ ವರೆಗಿನ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ಗಳನ್ನು ಕೋರ್ಸ್ ಮುಗಿಯುವವರೆಗೆ ನೇರವಾಗಿ ವಿದ್ಯಾರ್ಥಿಯ ಖಾತೆಗೆ ಪಾವತಿಸಲಾಗುತ್ತಿದೆ. 2023 ಡಿಸೆಂಬರ್ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಹಣಕಾಸು ಪ್ರಾದೇಶಿಕ ನಿರ್ದೇಶಕ ಶಾಂತಾರಾಮ ಆರ್. ಪೈ, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದ ಮಂಗಳೂರಿನ ವೈಭವ್ ಕನ್ಸಲ್ಟೆನ್ಸಿ ಸರ್ವೀಸಸ್‌ನ ವಿನಾಯಕ ಶೆಣೈ, ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್, ಯೋಜನಾಧಿಕಾರಿ ಶೇಖರ್ ವೈ., ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ, ಸಿಎಸ್‌ಸಿ ವಿಭಾಗದ ಯೋಜನಾಧಿಕಾರಿ ಸುಪ್ರೀತ್ ಎಸ್, ಪ್ರಬಂಧಕರಾದ ಸುಮಂಗಲಾ ಮೊದಲಾದವರಿದ್ದರು.
ಸಂಸ್ಥೆಯ ಬೆಳ್ಳಿಹಬ್ಬದ ನೆನಪಿಗಾಗಿ 2007ರಲ್ಲಿ ಪ್ರಾರಂಭಿಸಲಾದ ಈ ಕಾರ್ಯಕ್ರಮದಂತೆ ಈವರೆಗೆ ರಾಜ್ಯದ 72,500 ವಿದ್ಯಾರ್ಥಿಗಳಿಗೆ 87 ಕೋಟಿ ರೂ. ವಿದಾರ್ಥಿವೇತನ ನೀಡಲಾಗಿದೆ. ಸುಜ್ಞಾನನಿಧಿಯಡಿ ಶಿಕ್ಷಣ ಪಡೆದು ಸಾವಿರಾರು ಮಂದಿ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಓರ್ವ ಸಾಮಾನ್ಯ ಬಡಕುಟುಂಬದ ವಿದ್ಯಾರ್ಥಿಯೂ ಡಾಕ್ಟರ್, ಎಂಜಿನಿಯರ್‌ನಂತಹ ಉನ್ನತ ಶಿಕ್ಷಣ ಪಡೆಯಬಹುದೆಂಬುದನ್ನು ಈ ಕಾರ್ಯಕ್ರಮ ನಿರೂಪಿಸಿದೆ. –
ಡಾ| ಡಿ. ವೀರೇಂದ್ರ ಹೆಗ್ಗಡೆ