Advertisement

ಪಾರದರ್ಶಕ ಚುನಾವಣೆಗೆ ಸೂಕ್ತ  ಕ್ರಮ

05:42 PM Apr 19, 2018 | Team Udayavani |

ಹುಕ್ಕೇರಿ: ಚುನಾವಣೆ ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸಲು ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು ಸಶಸ್ತ್ರ ಸೇನಾ ಬಲ, ಕೇಂದ್ರ ಮೀಸಲು ಪಡೆ ಎರಡು ಕ್ಷೇತ್ರಗಳಲ್ಲಿ ಕಾರ್ಯನಿರತವಾಗಿವೆ ಎಂದು ಚುನಾವಣಾಧಿಕಾರಿ ವಿ.ವಿ. ಕುಲಕರ್ಣಿ ಹೇಳಿದರು.

Advertisement

ತಹಶೀಲ್ದಾರ ಕಚೇರಿಯಲ್ಲಿ ಚುನಾವಣಾ ಸಿದ್ಧತೆಯ ಕುರಿತು ನಡೆದ ಸುದ್ಧಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಉಮೇದುವಾರಿಕೆ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಏ. 24ರವರೆಗೆ ನಾಮಪತ್ರ ಸಲ್ಲಿಸಬಹುದು. ಏ. 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ. 27ರಂದು ನಾಮಪತ್ರಗಳ ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿದೆ
ಎಂದರು. ಹುಕ್ಕೇರಿ ಮತಕ್ಷೇತ್ರದಲ್ಲಿ 220 ಮತಗಟ್ಟೆಗಳಿದ್ದು, ಈ ಪೈಕಿ 22 ಸೂಕ್ಷ್ಮ, 2 ಅತೀಸೂಕ್ಷ್ಮಮತಗಟ್ಟೆಗಳಿವೆ. ಕ್ಷೇತ್ರದಲ್ಲಿ ಒಟ್ಟು 1,90,910 ಮತದಾರರಿದ್ದಾರೆ. ಇನ್ನು ಯಮಕನಮರಡಿ ಕ್ಷೇತ್ರದಲ್ಲಿ 234 ಮತಗಟ್ಟೆಗಳಿದ್ದು, ಈ ಪೈಕಿ 22 ಸೂಕ್ಷ್ಮ ಮತಗಟ್ಟೆಗಳಿವೆ. ಒಟ್ಟು 1,84,454 ಮತದಾರರಿದ್ದಾರೆ.ಹುಕ್ಕೇರಿ ಮತಕ್ಷೇತ್ರ ವ್ಯಾಪ್ತಿಯ ಸಂಕೇಶ್ವರಲ್ಲಿ 2 ಹುಕ್ಕೇರಿಯಲ್ಲಿ 3, ಗುಡಸ ಗ್ರಾಮದಲ್ಲಿ 1 ಹಾಗೂ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಯಮಕನಮರಡಿ ಮತಗಟ್ಟೆಗಳನ್ನು ಪಿಂಕ್‌ ಮತಗಟ್ಟೆ ಎಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳೆಯರೇ
ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸುವ 7 ಪಿಂಕ್‌ ಮತಗಟ್ಟೆಗಳನ್ನು ಹುಕ್ಕೇರಿ ಹಾಗೂ ಯಮಕನಮರಡಿ ಕ್ಷೇತ್ರಗಳಲ್ಲಿ ಗುರುತಿಸಲಾಗಿದೆ. ಹುಕ್ಕೇರಿ ಹಾಗೂ ಯಮಕನಮರಡಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಮತಗಟ್ಟೆಗಳಲ್ಲಿ ರ್‍ಯಾಂಪ್‌ ನಿರ್ಮಾಣ, ಶೌಚಾಲಯಗಳ ರಿಪೇರಿ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಕಾರಿಗಳಾದ ಜಿ.ಪದ್ಮಾವತಿ, ಅಶೋಕ ಗುರಾಣಿ, ಗ್ರೇಡ್‌ 1 ತಹಶೀಲದಾರ ಕೆ.ಕೆ.ಬೆಳವಿ, ಬಸವರಾಜ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next