Advertisement
ಕೋವಿಡ್ ಸೋಂಕಿನಿಂದ ಉಂಟಾಗಿರುವ ವಿವಿಧ ರೀತಿಯ ಆಘಾತಗಳಿಂದಾಗಿ ಒಟ್ಟು 1.53 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಕೇಂದ್ರ (ಎನ್‌ಸಿಆರ್‌ಬಿ)ದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Related Articles
Advertisement
ಟಾಪ್ ಐದು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೊನೆಯ ಸ್ಥಾನದಲ್ಲಿದ್ದು, ಶೇಕಡಾವಾರು ಲೆಕ್ಕಾಚಾರದಲ್ಲಿ ಶೇ.8 ಆಗಿದೆ. ಜೀವ ಕಳೆದು ಕೊಂಡವರ ಪೈಕಿ ಶೇ. 22 ಜನ ವಿದ್ಯಾರ್ಥಿಗಳಾಗಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ (ಎನ್‌ಸಿಆರ್‌ಬಿ) ದಾಖಲೆಗಳಲ್ಲಿ ತಿಳಿಸಲಾಗಿದೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವವರು ವೃತ್ತಿಪರರು. ಇವರ ಪ್ರಮಾಣ ಶೇ. 16.5ರಷ್ಟಿದೆ. ಆನಂತರದ ಸ್ಥಾನಗಳಲ್ಲಿ ದಿನಗೂಲಿ ನೌಕರರು (ಶೇ. 15.67), ನಿವೃತ್ತ ನೌಕರರು (ಶೇ. 11.9), ನಿರುದ್ಯೋಗಿಗಳು (ಶೇ. 11.65) ಇದ್ದಾರೆ. ದೇಶದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಶೇ.3.1ರಷ್ಟಾಗಿದೆ.