Advertisement

ಮಂಗಳೂರಿನಲ್ಲಿ ಸುಶೇಗ್ ಟ್ರಸ್ಟ್ ನಿಂದ ಆತ್ಮಹತ್ಯೆ ತಡೆಗೆ ಸಹಾಯವಾಣಿ

09:20 PM Sep 09, 2017 | Sharanya Alva |

ಮಂಗಳೂರು:ಜಗತ್ತಿನಾದ್ಯಂತ ಪ್ರತಿವರ್ಷ 8 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ, ಇದರಲ್ಲಿ 1,35,000 ಜನ ಭಾರತದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬ ಅಂಕಿ ಅಂಶ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ 2012ರ ಅಂಕಿಅಂಶದಲ್ಲಿ ಬಹಿರಂಗಪಡಿಸಿದೆ. ಭಾರತದಲ್ಲಿ ಪ್ರತಿ ಒಂದು ಗಂಟೆಗೆ 15 ಜನರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

Advertisement

ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ದಕ್ಷಿಣ ಭಾರತದ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದೆ. 2014ರಲ್ಲಿ 570 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಗಾಗಿದ್ದಾರೆ. ಅಷ್ಟೇ ಅಲ್ಲ ಪ್ರತಿವರ್ಷ ಮಂಗಳೂರು ನಗರದಲ್ಲಿಯೂ ಆತ್ಮಹತ್ಯೆಗೆ ಯತ್ನಿಸುತ್ತಿರುವವ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. 2015ರಲ್ಲಿ 225 ಮಂದಿ, 2016ರಲ್ಲಿ 231 ಜನರು ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಂಗಳೂರು ಸಿಟಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಹತ್ಯೆ ತಡೆಗೆ ಸಹಾಯವಾಣಿ:
ಮಂಗಳೂರು ಜಿಲ್ಲೆಯಲ್ಲಿಯೂ ಆತ್ಮಹತ್ಯೆಗೆ ಶರಣಾಗುವವರ ಹಾಗೂ ಆತ್ಮಹತ್ಯೆಗೆ ಯತ್ನಿಸುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸುವವರ ಮನವೊಲಿಸಿ ಆತ್ಮಹತ್ಯೆಯಿಂದ ಪಾರಾಗುವಂತೆ ಮಾಡುವ ನಿಟ್ಟಿನಲ್ಲಿ ಮಂಗಳೂರಿನ ಸುಶೇಗ್ ಚಾರಿಟೇಬಲ್ ಟ್ರಸ್ಟ್ ಸೈಂಟ್ ಆಗ್ನೇಸ್ ಕಾಲೇಜಿನ ಸೈಕಾಲಜಿ ವಿಭಾಗ, ಸೈಂಟ್ ಅಲೋಶಿಯಸ್ ಕಾಲೇಝಿನ ಸೋಶಿಯಲ್ ರೋರ್ಕ್ ಮತ್ತು ಕೌನ್ಸೆಲಿಂಗ್ ವಿಭಾಗ ಹಾಗೂ ರೋಶಿನಿ ನಿಲಯದ ಸಹಭಾಗಿತ್ವದೊಂದಿಗೆ ಲೈಫ್ ಲೈನ್ ಅನ್ನು ಸ್ಥಾಪಿಸಿದೆ.

ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಈ ಸಹಾಯವಾಣಿ ಸ್ಥಾಪಿತವಾಗಿದೆ. ಯಾರು ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಚಿಂತಿಸುತ್ತಾರೋ ಅವರಿಗೆ ಸೂಕ್ತ ಮಾರ್ಗದರ್ಶನ, ಸಲಹೆ ನೀಡುವ ಮೂಲಕ ಆತ್ಮಹತ್ಯೆಯನ್ನು ತಡೆಯುವುದು ಲೈಫ್ ಲೈನ್ ಉದ್ದೇಶವಾಗಿದೆ ಎಂದು ಸುಶೇಗ್ ಚಾರಿಟೇಬಲ್ ಟ್ರಸ್ಟ್ ತಿಳಿಸಿದೆ.

ಈ ಲೈಫ್ ಲೈನ್ ವಾರದಲ್ಲಿ ದಿನದ 24ಗಂಟೆಯೂ ಕಾರ್ಯಾಚರಿಸುತ್ತದೆ. ಮಾನಸಿಕವಾಗಿ ಒತ್ತಡಕ್ಕೊಳಗಾದವರು, ಪರಿಹಾರ ಸಿಗದವರು ಲೈಫ್ ಲೈನ್ ಗೆ (0824 2983444) ಕರೆ ಮಾಡಬಹುದು. 

Advertisement

ಸುಶೇಗ್ ಚಾರಿಟೇಬಲ್ ಟ್ರಸ್ಟ್ ಗೆ ದೇಣಿಗೆಯನ್ನೂ ನೀಡಬಹುದಾಗಿದೆ. ದಾನಿಗಳು ಸುಶೇಗ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಪೋರೇಶನ್ ಬ್ಯಾಂಕ್ ಖಾತೆ ವಿವರ ಇಲ್ಲಿ ನೀಡಲಾಗಿದೆ.
ಖಾತೆ ಹೆಸರು: Susheg charitable Trust susheg Lifeline
ಖಾತೆ ಸಂಖ್ಯೆ: 520101022731532
ಐಎಫ್ ಎಸ್ ಸಿ ಕೋಡ್: CORPOOO3506
ವಿಳಾಸ: corporation Bank, Narmada Building, Falnir Road, Mangalore-575001
ಪ್ಯಾನ್ ನಂಬರ್: AAOTS7268J

Advertisement

Udayavani is now on Telegram. Click here to join our channel and stay updated with the latest news.

Next