Advertisement
ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 2017ನೇ ಸಾಲಿನಲ್ಲಿ 133 ಜನರು ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಅಸ್ವಾಭಾವಿಕವಾಗಿ ಮೃತಪಟ್ಟಿದ್ದಾರೆ.
ದೇಶಾದ್ಯಂತ ಕಾರಾಗೃಹಗಳಲ್ಲಿ ಅಸ್ವಾಭಾವಿಕವಾಗಿ ಸಾಯುತ್ತಿರು ವವರ ಪ್ರಮಾಣದಲ್ಲಿ ಶೇ.15 ರಷ್ಟು ಹೆಚ್ಚಾಗಿದ್ದು, 2015 ರಲ್ಲಿ 115 ಜನರು ಮೃತಪಟ್ಟಿದ್ದರು. ಕೋರ್ಟ್‌ಗೆ ಹಾಜರಿ ಮೊದಲೇ 58 ಸಾವು
ಪೊಲೀಸರ ವಶದಲ್ಲಿದ್ದು, ಮೃತಪಟ್ಟವರಲ್ಲಿ 58 ಮಂದಿಯನ್ನು ಬಂಧಿಸಲಾಗಿತ್ತೇ ಹೊರತು ಅವರನ್ನು ನ್ಯಾಯಾಲಯಕ್ಕೆ ಹಾಜ ರು ಪಡಿಸಲಾಗಿರಲಿಲ್ಲ. ಅದಕ್ಕೂ ಮೊದಲೇ ಅವರು ಮೃತಪಟ್ಟಿದ್ದಾರೆ.
42 ಮಂದಿ ಶಿಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Related Articles
ಪೊಲೀಸ್ ಕಸ್ಟಡಿಯಲ್ಲಿ ಸಾವಿಗೆ ಸಂಬಂಧಿಸಿದಂತೆ ಒಟ್ಟು 62 ಪ್ರಕರಣಗಳು ದಾಖಲಾಗಿದ್ದು, 33 ಪೊಲೀಸರನ್ನು ಬಂಧಿಸಲಾಗಿದೆ, 27 ಮಂದಿಯ ವಿರುದ್ಧ ಚಾರ್ಜ್‌ಶೀಟ್ ಹಾಕಲಾಗಿದೆ, ಮತ್ತು ನಾಲ್ವರನ್ನು ಖುಲಾಸೆಗೊಳಿಸಲಾಗಿದ್ದು, ಉಳಿದ ವರಿಗೆ ಯಾವುದೇ ಶಿಕ್ಷೆ ಆಗಿಲ್ಲ.
Advertisement
ರಾಜ್ಯ: 3ನೇ ಸ್ಥಾನಎನ್ಸಿಆರ್ಬಿ ಅಂಕಿ-ಅಂಶಗಳ ಪ್ರಕಾರ 2017ನೇ ಸಾಲಿನಲ್ಲಿ ರಾಜ್ಯದಲ್ಲಿ 10 ಅಸ್ವಾಭಾವಿಕ ಕಸ್ಟೋಡಿಯಲ್ ಸಾವು ದಾಖಲಾ ಗಿದ್ದು, ಒಟ್ಟು 114 ಮಂದಿ ಜೈಲಿನಲ್ಲಿ ಮೃತಪಟ್ಟಿದ್ದಾರೆ. 136 ವಿದೇಶಿ ಕೈದಿಗಳು
ರಾಜ್ಯದ ಕಾರಾಗೃಹದಲ್ಲಿ ಒಟ್ಟು 136 ವಿದೇಶಿ ಕೈದಿಗಳಿದ್ದು, 6 ಮಂದಿ ಆಪರಾಧಿಗಳು ಮತ್ತು 130 ವಿಚಾರಣಾಧೀನರು. ಸಿಬ್ಬಂದಿ ಕೊರತೆ
ರಾಜ್ಯ ಕಾರಾಗೃಹ ಸಿಬ್ಬಂದಿ ಕೊರತೆ ಸೂಚ್ಯಂಕದಲ್ಲಿ 4ನೇ ಸ್ಥಾನ ದಲ್ಲಿದೆ. ಒಟ್ಟು 3,094 ಜೈಲು ಹುದ್ದೆಗಳಿದ್ದು,1,708 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ತುಂಬಿ ತುಳುಕುತ್ತಿವೆ ಕಾರಾಗೃಹಗಳು
ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದ್ದು. ರಾಜ್ಯದ ಕಾರಾಗೃಹಗಳಲ್ಲಿ ಶೇ.106 ರಷ್ಟು ದಟ್ಟಣೆ ವರದಿಯಾಗಿದೆ. ಕಾರಣಗಳೇನು?
· ವಿಚಾರಣೆಯಲ್ಲಿ ವಿಳಂಬ
· ಶಿಕ್ಷೆಯ ಭೀತಿ
· ಚಿತ್ರಹಿಂಸೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳುವುದು
· ಆರೋಗ್ಯ ಮತ್ತು ನೈರ್ಮಲ್ಯದ ನಿರ್ಲಕ್ಷ್ಯ
· ಜೈಲಿನ ವಾತಾವರಣ
· ಅವ್ಯವಸ್ಥಿತ ಆಡಳಿತ