ಮಣಿಪಾಲ: ಪತ್ರಿಕೆಗಳ ಅಪರಾಧ ಪುಟ ತೆರೆದರೆ ದಿನಂಪ್ರತಿ ಎರಡೋ ಮೂರೋ ಆತ್ಮಹತ್ಯೆ ಪ್ರಕರಣಗಳು ಗಮನ ಸೆಳೆಯುತ್ತವೆ. ನಿಜ, ಈಗೀಗ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸುಶಿಕ್ಷಿತರು ಮತ್ತು ವಿದ್ಯಾರ್ಥಿಗಳೇ ಇದರಲ್ಲಿ ಹೆಚ್ಚು ಸಂತ್ರಸ್ತರು ಎಂಬುದು ಆತಂಕದ ಸಂಗತಿ. ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೋ ಬಿಡುಗಡೆ ಮಾಡಿರುವ ಅಂಕಿಅಂಶವೊಂದು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಎಷ್ಟು ಆತಂಕಕಾರಿಯಾಗಿವೆ ಎಂಬುದನ್ನು ತೋರಿಸುತ್ತದೆ.
ಆತ್ಮಹತ್ಯೆಯ ತಾಣವಾಗುತ್ತಿರುವ ಕೋಚಿಂಗ್ ಹಬ್
ರಾಜಸ್ಥಾನದ ಕೋಟ ನಗರವು ಉನ್ನತ ಶಿಕ್ಷಣದ (ಜೆಇಇ, ನೀಟ್) ಕೋಚಿಂಗ್‌ಗೆ ಖ್ಯಾತ ಹೆಸರು. ಜತೆಗೆ ಈಗ ವಿದ್ಯಾರ್ಥಿಗಳ ಆತ್ಮಹತ್ಯೆ ಕಾರಣದಿಂದಲೂ ಕುಖ್ಯಾತಿ ಗಳಿಸುತ್ತಿದೆ.
ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ: 5
ಕಳೆದ 8 ತಿಂಗಳಲ್ಲಿ ಆತ್ಮಹತ್ಯೆ: 23
2017-2022 ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು: 46
ಪ್ರತೀವರ್ಷ ಕೋಟ ನಗರಕ್ಕೆ ಉನ್ನತ ಶಿಕ್ಷಣ ಕೋಚಿಂಗ್‌ಗೆ ಬರುವ ವಿದ್ಯಾರ್ಥಿಗಳು: ಕನಿಷ್ಠ 2 ಲಕ್ಷ
2021 ದೇಶದಲ್ಲಿ ಪ್ರತಿದಿನ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ: 36
2014ರಿಂದೀಚೆಗೆ ದೇಶದ 135 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾದ ವಿದ್ಯಾರ್ಥಿ ಆತ್ಮಹತ್ಯೆ: 137
2018 2022: 91ಪ್ರಕರಣಗಳು
ಕಳೆದ 66 ತಿಂಗಳಲ್ಲಿ (2018ರಿಂದ 2023 ಜುಲೈ ವರೆಗೆ) ದೇಶದ ಅತ್ಯುನ್ನತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಾದ ಐಐಟಿ ಮತ್ತು ಎನ್‌ಐಟಿಗಳಲ್ಲಿ ದಾಖಲಾದ ವಿದ್ಯಾರ್ಥಿ ಆತ್ಮಹತ್ಯೆ: 64
ಅಂದರೆ ತಿಂಗಳಿಗೆ ಕನಿಷ್ಠ ಒಬ್ಬರಂತೆ.
ಪುರುಷರೇ ಹೆಚ್ಚು
ಅಂಕಿಅಂಶಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು. ಆದರೆ 18 ವರ್ಷದ ಕೆಳಗಿನವರಲ್ಲಿ, ಯುವಕರಿಗಿಂತ ಹೆಚ್ಚು ಯುವತಿಯರೇ ಆತ್ಮಹತ್ಯೆ ಮಾಡಿಕೊಂಡಿರುವುದು ದಾಖಲಾಗಿದೆ.
2017 2021ರ ಅವಧಿಯಲ್ಲಿ 94 ಮಂದಿ ಲೈಂಗಿಕ ಅಲ್ಪಸಂಖ್ಯಾಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 18-30 ವಯೋಮಾನದವರೇ ಹೆಚ್ಚು.