Advertisement

ಲಾಹೋರ್‌ನಲ್ಲಿ ಆತ್ಮಾಹುತಿ ದಾಳಿ: 23 ಬಲಿ

04:05 AM Jul 25, 2017 | Team Udayavani |

ಲಾಹೋರ್‌: ಲಾಹೋರ್‌ನಲ್ಲಿರುವ ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್‌ ಶರೀಫ್ ಅವರ ಗೃಹ ಕಚೇರಿ ಬಳಿ ಸೋಮವಾರ ಆತ್ಮಾಹುತಿ ದಾಳಿ ನಡೆದಿದೆ. ದಾಳಿಯಲ್ಲಿ ಪೊಲೀಸರೂ ಸೇರಿ 23 ಮಂದಿ ಸಾವಿಗೀಡಾಗಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಪೊಲೀಸರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿ ಎನ್ನಲಾಗಿದೆ. ಸಿಎಂ ನಿವಾಸದ ಬಳಿಯ ಆರಾ# ಕರೀಮ್‌ ಟವರ್‌ ಬಳಿ ಪೊಲೀಸರು ಮತ್ತು ಲಾಹೋರ್‌ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಒತ್ತುವರಿ ತೆರವುಗೊಳಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next