Advertisement

ಮಗುವಿನೊಂದಿಗೆ ತಾಯಿ ಆತ್ಮಹತ್ಯೆ ಯತ್ನ: ಮಗು ಸಾವು

12:50 PM Nov 07, 2019 | keerthan |

ಶಿವಮೊಗ್ಗ:  ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ತಾಯಿಯೋರ್ವರು ಮಗುವಿನೊಂದಿಗೆ ಬಾವಿಗೆ ಬಿದ್ದು ಆತ್ಮಹತ್ಯೆ ಪ್ರಯತ್ನ ನಡೆಸಿದ್ದು, ತಾಯಿಯನ್ನು ರಕ್ಷಿಸಲಾಗಿದ್ದು, ಮಗು ಮೃತಪಟ್ಟಿದೆ.

Advertisement

ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ ಗುರುವಾರ ಘಟನೆ ನಡೆದಿದೆ.

ಕೌಶಿಕ್ (3) ಘಟನೆಯಲ್ಲಿ ಮೃತಪಟ್ಟ ಮಗು.  ಚೈತ್ರಾ (23) ಪ್ರಾಣಾಪಾಯದಿಂದ ಪಾರಾದ ತಾಯಿ.

ಕೌಟುಂಬಿಕ ಸಮಸ್ಯೆಯ ಕಾರಣದಿಂದ ಬೇಸತ್ತು ಚೈತ್ರಾ ಮಗುವಿನೊಂದಿಗೆ ಬಾವಿಗೆ ಹಾರಿದ್ದರು.  ಕೂಡಲೇ ಗ್ರಾಮಸ್ಥರು ಇಬ್ಬರನ್ನು ರಕ್ಷಿಸಲು ಯತ್ನಿಸಿದರಾದರೂ ಮಗು ಅಷ್ಟರಲ್ಲಾಗಲೇ ಮೃತಪಟ್ಟಿತ್ತು.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next