Advertisement
ಆದರೆ ಈಚಿನ ದಿನಗಳಲ್ಲಿ ಮಣ್ಣಿನ ಆರೋಗ್ಯವನ್ನು ಪರೀಕ್ಷಿಸದೇ ಕೃಷಿಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮಣ್ಣಿನಲ್ಲಿ ಯಾವ ಪೋಷಕಾಂಶಗಳು ಅಧಿಕವಾಗಿವೆ ಮತ್ತು ಕೊರತೆಯಾಗಿವೆ ಎಂಬುದನ್ನು ತಿಳಿಯದೇ ನೆರೆಯ ರೈತರೊಂದಿಗಿನ ಪೈಪೋಟಿ ಮತ್ತು ಹೆಚ್ಚುಬೆಳೆ ಪಡೆಯಬೇಕೆಂಬ ದುರಾಸೆಯಿಂದ ಯಥೇತ್ಛವಾಗಿ ನೀರು ಹಾಗೂ ರಸಗೊಬ್ಬರ ಬಳಸಲಾಗುತ್ತಿದೆ.ಇದರಿಂದ ಮಣ್ಣಿನ ಆರೋಗ್ಯ ಹಾಳಾಗಿ ಇಳುವರಿ ಕಡಿಮೆಯಾಗುತ್ತಿದೆ.
- 90 ದಿನಗಳ ನಂತರ ಸಾಲುಒಡೆಯುವಾಗ 10 ಕೆ.ಜಿ.ಅಜೋಸ್ಪೆçರಿಲಂ , 10 ಕೆ.ಜಿ.ರಂಜಕಕರಗಿಸುವ ಅಣುಜೀವಿಗೊಬ್ಬರಗಳಿಂದ ಪುಷ್ಠಿಕರಿಸಿದ 8ಟನ್ ಸಾವಯವ ಗೊಬ್ಬರ ಮತ್ತು2 ಟನ್ ಎರೆಗೊಬ್ಬರವನ್ನು ಸಾಲಿನಎರಡೂ ಮಗ್ಗುಲಿಗೆ ಹಾಕಬೇಕು.
- ಯಾವುದೇ ಕಾರಣಕ್ಕೂಕಬ್ಬಿನೊಂದಿಗೆ ಗೋವಿಜೋಳ ಸೇರಿದಂತೆ ಏಕದಳ ಬೆಳೆಗಳನ್ನುಬೆಳೆಯಬಾರದು ಕಾರಣ, ಈ ಏಕದಳ ಬೆಳೆಗಳು ತಮ್ಮ ಅಲ್ಪಜೀವಿತಾವಧಿಯಲ್ಲಿಯೇ ಪೋಷಕಾಂಶಗಳನ್ನು ಉಪಯೋಗಿಸಿ ವಾರ್ಷಿಕ ಬೆಳೆಯಾದ ಕಬ್ಬಿಗೆ ಪೋಷಕಾಂಶಗಳ ಕೊರತೆ ಉಂಟುಮಾಡುತ್ತವೆ.
- ಕಬ್ಬಿಗೆ ನೀರನ್ನು ಹಾಯಿಸುವಾಗ ಪ್ರತಿಸಲ ದನಗಳ ಗಂಜಲ ಹಾಗೂ ಸಗಣಿ ನೀರಿನೊಂದಿಗೆ ಕರಗಿಸಿ ಬಿಡಬೇಕು. ಈ ಕ್ರಮವು ಕಬ್ಬಿಗೆ ಅವಶ್ಯವಿರುವ ಪೋಷಕಾಂಶಗಳನ್ನುಒದಗಿಸುವ ಶ್ರೇಷ್ಠ ಮಾರ್ಗವಾಗಿದೆ.
- ಕಬ್ಬಿಗೆ ದೀರ್ಘಾವಧಿಯವರೆಗೆ ಸಾರಜನಕ ಮತ್ತು ಪೋಟ್ಯಾಷ್‌ಗೊಬ್ಬರ ಪೂರೈಸುವುದರಿಂದ ಕಬ್ಬಿನಲ್ಲಿ ಬೆಂಡಾಗುವುದಿಲ್ಲ ಹಾಗೂಒಳ್ಳೆಯ ಸಕ್ಕರೆ ಅಂಶವನ್ನು ಕಬ್ಬಿನಲ್ಲಿ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
- ನೀರು ಸಾಕಷ್ಟಿದೆ ಎಂದು ಕಬ್ಬಿಗೆಮೇಲಿಂದ ಮೇಲೆ ನೀರನ್ನು ಬಿಡಬಾರದು. ಸ್ವಲ್ಪ ಭೂಮಿ ಒಣಗಿ ಬೆಳೆಯು ಬಾಡಿದ ನಂತರ ನೀರನ್ನುಕೊಡಬೇಕು. ಅತಿಯಾದ ನೀರಿನ ಉಪಯೋಗದಿಂದ ಕಬ್ಬಿನಲ್ಲಿ ಸಿಹಿ ಅಂಶ ಕಡಿಮೆಯಾಗಬಹುದು.