Advertisement

4000 ಮೆ.ಟನ್‌ ಕಬ್ಬು ನುರಿಸಲು ಯತ್ನಿಸಿ: ಜೊಲ್ಲೆ

03:13 PM Sep 29, 2020 | sudhir |

ಚಿಕ್ಕೋಡಿ: ಕಳೆದ ಎರಡು ಹಂಗಾಮುಗಳು ಕಷ್ಟಕರವಾಗಿದ್ದವು. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಒಳ್ಳೆಯ ದಿನಗಳಿದ್ದು ಎಲ್ಲರೂ ನಿತ್ಯ 4000 ಮೆ.ಟನ್‌ ಕಬ್ಬು ನುರಿಸಲು ಪ್ರಯತ್ನಿಸಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸೋಮವಾರ ನಿಪ್ಪಾಣಿ ಹಾಲಸಿದ್ಧ ನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 34ನೇ ಬಾಯ್ಲರ್‌ ಪ್ರದೀಪನ ಸಮಾರಂಭದಲ್ಲಿ ಮಾತನಾಡಿದ ಅವರು, ಮೊದಲಿನ ಕಾರ್ಖಾನೆಯ ಆಡಳಿತ ಹಾಗೂ ಕಳೆದ ಎರಡು ವರ್ಷಗಳಲ್ಲಿನ ಕಾರ್ಖಾನೆಯ ಆಡಳಿತದ  ಕುರಿತು ಎಲ್ಲರಿಗೂ ಗೊತ್ತಿದೆ. ಸಂಕಷ್ಟದಲ್ಲಿಯೂ ಕಾರ್ಖಾನೆಯಲ್ಲಿ ಎರಡು ಗೋದಾಮು ಹಾಗೂ ಒಂದು ಮೊಲ್ಯಾಸಿಸ್‌ ಟ್ಯಾಂಕ್‌ ನಿರ್ಮಿಸಲಾಗಿದೆ.

Advertisement

ಸಾಲ ಕಡಿಮೆ ಮಾಡುತ್ತ ಕಾರ್ಖಾನೆಯ ಬೆಳವಣಿಗೆಯತ್ತ ಗಮನ ಹರಿಸಲಾಗಿದೆ. ಬೀರೇಶ್ವರ ಸಂಸ್ಥೆಯಿಂದ ಸುಮಾರು 100 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ಕಾರ್ಖಾನೆಯ ಸಿಬ್ಬಂದಿ ಹಾಗೂ ಕಾರ್ಮಿಕರತ್ತ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಇತಿಹಾಸ ದಲ್ಲಿ ಎಂದೂ ಮುಗಿಯದ ಸಿಬ್ಬಂದಿ-ಕಾರ್ಮಿಕರ ವಿಷಯವನ್ನು ನಮ್ಮ ಆಡಳಿತದಲ್ಲಿ ಪರಿಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಪದೋನ್ನತಿ ಹಾಗೂ
ಬೋನಸ್‌ ವಿಷಯಗಳೂ ಸಹ ನೆರವೇರಿಸಲಾಗುವುದು. ಆರೋಗ್ಯ ವಿಮೆ ಕುರಿತು ಚರ್ಚಿಸಲಾಗುತ್ತಿದೆ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ರೈತರ ಕಬ್ಬಿನ ಬಿಲ್ಲು, ಕಾರ್ಮಿಕರ ವೇತನ ನಿಗದಿತ ಸಮಯದಲ್ಲಿ ಸಂದಾಯ ಮಾಡಲಾಗುತ್ತಿದೆ. ಬಹುತೇಕ ಕಾರ್ಖಾನೆಯ ಮೇಲೆಯೇ ಬಹಳಷ್ಟು ಕಾರ್ಮಿಕರು ಅವಲಂಬಿತರಾಗಿದ್ದಾರೆ. ಕಾರ್ಖಾನೆಯು ಉಳಿದು ಬೆಳೆದರೆ ನೀವೂ ಸಹ ಬೆಳೆಯುವಿರಿ.
ಕಾರ್ಖಾನೆಯ ಏಳ್ಗೆಗೆ ಎಲ್ಲರೂ ಸೇರಿ ಶ್ರಮಿಸೋಣ ಎಂದರು. ಕಾರ್ಖಾನೆಯ ಚೇರಮನ್‌ ಚಂದ್ರಕಾಂತ ಕೋಠಿವಾಲೆ ಮಾತನಾಡಿ,
ಪ್ರಸಕ್ತ ಹಂಗಾಮಿನಲ್ಲಿ ಸುಮಾರು 5.50 ಲಕ್ಷದಿಂದ 6 ಲಕ್ಷ ಮೆ.ಟನ್‌ ಕಬ್ಬು ನುರಿಸುವ ನಿಟ್ಟಿನಲ್ಲಿ ಕಾರ್ಮಿಕರು ಸ್ವಂತ ಕಾರ್ಖಾನೆ ಎಂದು ತಿಳಿದು ಒಗ್ಗಟ್ಟಿನಿಂದ ಪರಿಶ್ರಮಿಸಬೇಕು ಎಂದರು.

Advertisement

ಇದನ್ನೂ ಓದಿ:ಸ್ಟೇ ಹಂಗ್ರಿ ಆ್ಯಂಡ್‌  ಸ್ಟೇ ಫ‌ೂಲಿಶ್‌; ಖ್ಯಾತ ಆ್ಯಪಲ್‌ ಕಂಪೆನಿ ಹುಟ್ಟಿಕೊಂಡಿದ್ದೇಗೆ?

ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಬಾಯ್ಲರ್‌ ಪ್ರದೀಪನಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಎಂ.ಪಿ. ಪಾಟೀಲ, ಸಂಚಾಲಕ ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡಾ ಪಾಟೀಲ, ಸುಕುಮಾರ ಪಾಟೀಲ, ಅವಿನಾಶ ಪಾಟೀಲ, ಸಮಿತ ಸಾಸನೆ, ರಾಜಾರಾಮ ಖೋತ, ಕಲ್ಲಪ್ಪಾ ನಾಯಿಕ, ಉಜ್ವಲಾ ಶಿಂಧೆ, ಮನೀಷಾ ರಾಂಗೋಳೆ, ಸಂಚಾಲಕ ಮಲ್ಲಾಪ್ಪಾ ಪಿಸೂತ್ರೆ, ಪಪ್ಪು ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next