Advertisement

ಏ.4 ರೊಳಗೆ ಕಬ್ಬಿನ್ ಬಿಲ್ ಪಾವತಿ ಮಾಡಿ: ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ

09:20 PM Mar 24, 2021 | Team Udayavani |

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ 2020-21 ನೇ ಸಾಲಿಗೆ ಕಬ್ಬು ಪೂರೈಸಿದ ರೈತರಿಗೆ ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬಾಕಿ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಜಿಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿರುವ 8 ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿ ಕಾರ್ಖಾನೆ ಮಾಲೀಕರಿಗೆ ನಿರ್ದೇಶನ ನೀಡಿದರು, ಕಬ್ಬು ಸಾಗಿಸಿದ ರೈತರಿಗೆ ಶೇ.80 ಕ್ಕಿಂತ ಕಡಿಮೆ ಹಣ ಪಾವತಿಸಿರುವ ಸಕ್ಕರೆ ಕಾರ್ಖಾನೆ ಮಾಲೀಕರು, ಏಪ್ರೀಲ್ 7 ರೊಳಗೆ ಬಾಕಿ ಬಿಲ್‍ನ ಹಣ ಪಾವತಿಸಬೇಕು ಎಂದು ನಿರ್ದೇಶನ ನೀಡಿದರು.

ಏಪ್ರೀಲ್ 7 ರೊಳಗೆ ಕಬ್ಬು ಬೆಳೆಗಾರರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತರಿಸುವಲ್ಲಿ ವಿಫಲವಾಗುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕರ್ನಾಟಕ ಭೂಕಂದಾಯ ಕಾಯ್ದೆ 1964 ರಂತೆ ಭೂಕಂದಾಯ ಬಾಕಿ ಎಂದು ಪರಿಗಣಿಸಿ, ವಸೂಲಿ ಮಾಡಲು ಕ್ರಮ ಜರುಗಿಸುವುದಾಗಿ ಹೇಳಿದರು.

ಮಲಘಾಣದ ಮನಾಲಿ ಶುಗರ್ಸ್ ಲಿ. ಶೇಕಡಾ 100 ರಷ್ಟು ಪಾವತಿಸಿದ್ದು, ಕಾರಜೋಳ ಶ್ರೀಬಸವೇಶ್ವರ ಶುಗರ್ಸ್ ಲಿ. 62.40 ರಷ್ಟು ಪಾವತಿಸಿದ್ದು, 6560 ಲಕ್ಷ ರೂ. ಬಾಕಿ ಇರಿಸಿಕೊಂಡಿದೆ. ಯರಗಲ್‍ನ ಶ್ರೀಬಾಲಾಜಿ ಶುಗರ್ಸ್ ಆ್ಯಂಡ್ ಕೆಮಿಕಲ್ ಪ್ರೈ.ಲಿ. 81.87 ರಷ್ಟು ಪಾವತಿಸಿದ್ದು, 3700.21 ಲಕ್ಷ ರೂ. ಬಾಕಿ ಇದೆ. ಮರಗೂರು ಶ್ರೀಭೀಮಾಶಂಕರ ಕೋ-ಆಪ್ ಶುಗರ್ಸ್ ಫ್ಯಾಕ್ಟರಿ 30.94 ರಷ್ಟು ಪಾವತಿಸಿದ್ದು, 80.92 ಲಕ್ಷ ರೂ. ಬಾಕಿ ಇದೆ ಎಂದು ಸಭೆಯಲ್ಲಿ ವಿವರ ನೀಡಿದರು.

ನಾದ ಕೆ.ಡಿ. ಜಮಖಂಡಿ ಶುಗರ್ಸ್ ಲಿ. ಯುನಿಟ್-2, ಶೇ.80.74 ರಷ್ಟು ಪಾವತಿಸಿದ್ದು, 2476.85 ಲಕ್ಷ ರೂ. ಬಾಕಿ ಇದೆ. ಆಲಮೇಲ ಕೆಪಿಆರ್ ಶುಗರ್ಸ್ ಮಿಲ್ಸ್ ಪ್ರೈ.ಲಿ ಶೇ.96.75 ರಷ್ಟು ಪಾವತಿಸಿದ್ದು, 1003.59 ಲಕ್ಷ ರೂ. ಬಾಕಿ ಇದೆ. ಹಾವಿನಾಳ ಇಂಡಿಯನ್ ಶುಗರ್ ಮ್ಯಾನುಫೆಕ್ಚರ್ ಕೋ.ಲಿ ಶೇ.60.10 ರಷ್ಟು ಹಣ ಪಾವತಿಸಿದ್ದು, 3346.88 ಲಕ್ಷ ರೂ. ಬಾಕಿ ಇದೆ. ಕೃಷ್ಣಾ ನಗದ ನಂದಿ ಸಹಕಾರಿ ಸಕ್ಕರೆ ಕಾರ್ಖನೆ 85.03 ರಷ್ಟು ಹಣ ಪಾವತಿಸಿದ್ದು, 3259.38 ಲಕ್ಷ ರೂ. ಬಾಕಿ ಇದೆ. ಕೂಡಲೇ ರೈತರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ ಪಾವತಿಸುವಂತೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next