Advertisement

ದಾವಣಗೆರೆಯ ಸಕ್ಕರೆ ಕಾರ್ಖಾನೆಯಲ್ಲಿ ಅವಘಡ; 3 ಸಾವು, ಹಲವರಿಗೆ ಗಾಯ

05:14 PM Nov 04, 2021 | Team Udayavani |

ದಾವಣಗೆರೆ : ನಗರದ ಕುಕ್ಕವಾಡ ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಘಟಕದ ಪಿಲ್ಲರ್ ಕುಸಿದು ಇಬ್ಬರು ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಅವಘಡ ಗುರುವಾರ ಸಂಭವಿಸಿದೆ.

Advertisement

ಅವಘಡದಲ್ಲಿ ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದು, ಐವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಕೊಪ್ಪಳ ಮತ್ತು ರಾಯಚೂರು ಮೂಲದ ಮಾನಪ್ಪ,ಬಸ್ಸಪ್ಪ, ಮಜೀದ್  ಎನ್ನುವವರ ಗುರುತು ತಿಳಿದುಬಂದಿದ್ದು,ಗಾಯಾಳುಗಳ ಗುರುತು ಇನ್ನಷ್ಟೇ ತಿಳಿದು ಬರಬೇಕಿದೆ.

ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಹದಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next