Advertisement

ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ: 60 ಸಾವಿರ ಟನ್‌ ಕಬ್ಬಿನ ಸಿಪ್ಪೆ ಭಸ್ಮ

12:36 PM Apr 02, 2022 | Team Udayavani |

ಆಳಂದ: ತಾಲೂಕಿನ ಭೂಸನೂರ ಗ್ರಾಮದ ಬಳಿಯ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ ಬಗ್ಯಾಸ್‌ಗೆ (ಕಬ್ಬಿನ ಸಿಪ್ಪೆಗೆ ) ಗುರುವಾರ ಸಂಜೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟವಾದ ಘಟನೆ ಸಂಭವಿಸಿದೆ.

Advertisement

ಸಕ್ಕರೆ ಕಾರ್ಖಾನೆಯ ಬಯಲು ಪ್ರದೇಶದಲ್ಲಿನ ನುರಿಸಿದ ಸುಮಾರು 60 ಸಾವಿರ ಟನ್‌ನಷ್ಟು ಕಬ್ಬಿನ ಸಿಪ್ಪೆಗೆ ಬೆಂಕಿ ತಗುಲಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಾರ್ಖಾನೆಯಿಂದ ಸಿಪ್ಪೆ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ.

ಹಿಟಾಚಿಯ ಬೆಂಕಿ ತಗುಲಿದ ಬೆಂಕಿಗೆ 60 ಸಾವಿರ ಟನ್‌ ಬಗ್ಯಾಸ್‌, ಎರಡು ಹಿಟಾಚಿ, ಒಂದು ಜೆಸಿಪಿ, 2 ಲಾರಿಗಳು ಸುಟ್ಟು ಕರಕಲಾಗಿವೆ. ಕಾರ್ಖಾನೆಯ ಕಾರ್ಮಿಕ ವರ್ಗ ಹಾಗೂ ಕಲಬುರಗಿ, ಅಫಜಲಪುರ, ಆಳಂದ ಭಾಗದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿ, ಭಾರೀ ಅನಾಹುತ ತಪ್ಪಿಸಿದರು. ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಸಿಪ್ಪೆಯ ಕೆನ್ನಾಲಿಗೆ ಹಾಗೂ ಹೊಗೆ ಬಾನೆತ್ತರಕ್ಕೆ ಹೋಗಿತ್ತು. ಸ್ಥಳಕ್ಕೆ ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು, ಕಬ್ಬು ಅಭಿವೃದ್ಧಿ ಅಧಿಕಾರಿ ಶಿವಾನಂದ ವಿ. ನಂದಗಾಂವ ಹಾಗೂ ಸಿಬ್ಬಂದಿ ಹಾನಿ ಕುರಿತು ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next