Advertisement
2-3 ವರ್ಷಗಳ ಹಿಂದೆ ಕುಡಿಯುವ ನೀರಿನ ಭವನೆ ಸಾಕಷ್ಟು ಇತ್ತು. ಆದರೆ ಇದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಶಾಸಕ ಸಿದ್ದು ಸವದಿಯವರು ಆಯಾ ಭಾಗದಲ್ಲಿ ಕೊಳವೇ ಬಾವಿಗಳನ್ನು ಕೊರೆಯಿಸಿ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
Related Articles
Advertisement
ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿಯೂ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆಯಸಿರುವುದರಿಂದ ಅಲ್ಲಿಯೂ ಕೂಡಾ ಈ ಭಾರಿ ನೀರಿನ ಭವನೆ ಉಂಟಾಗುವ ಸಾಧ್ಯತೆ ಕಡಿಮೆ ಅಲ್ಲದೇ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯಿಂದಾಗಿ ಕೃಷ್ಣಾ ನದಿಯ ಮೂಲಕ ನೀರು ಕೊಡಿಸುವ ವ್ಯವಸ್ಥೆ ಮಾಡಿದ್ದು, ಅಲ್ಲದೇ ಆಸಂಗಿ ಹಾಗೂ ಜಗದಾಳ ಗ್ರಾಮಗಳಲ್ಲಿ ಬಾವಿ ಹಾಗೂ ಕೊಳವೆ ಬಾವಿಗಳ ಮೂಲಕ ಗ್ರಾಮಪಂಚಾಯತಿಯವರು ನೀರು ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದ ಕೆಲವೊಂದು ಬಡಾವಣೆಗಳಿಗೆ ನೀರಿನ ಸಮಸ್ಯೆ ಆಗಬಹುದು ಆದರೂ ಅಲ್ಲಿ ಸಮರ್ಪಕ ನೀರು ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಾಲೂಕು ಆಡಳಿತ ಹೇಳುತ್ತಿದೆ.
ನೀರು ಪೂರೈಕೆಯಲ್ಲಿ ವಿಶೇಷ ಗ್ರಾಮ ಆಸಂಗಿ: ತಾಲೂಕಿನ ಆಸಂಗಿ ಗ್ರಾಮ ಪಂಚಾಯತಿಯೂ ಕೃಷ್ಣಾ ನದಿ ಕೂಗಳತೆಯಲ್ಲಿ ಹರಿಯುತ್ತಿದ್ದರೆ ಅದರ ಗೋಜಿಗೆ ಹೋಗದೆ ತನ್ನದೇ ಆದ ಬಾವಿ ಹಾಗೂ ಕೊಳವೆ ಬಾವಿಗಳನ್ನು ಬಳಸಿಕೊಂಡು ಆಸಂಗಿ ಗ್ರಾಮಕ್ಕೆ ದಿನನಿತ್ಯ ವರ್ಷದ 12 ತಿಂಗಳು ಕೃಷ್ಣೆ ಬತ್ತಿದರೂ ಕೂಡಾ ನೀರು ಪೂರೈಕೆ ಮಾಡುತ್ತಿದ್ದು, ಇದೊಂದು ವಿಶೇಷವಾಗಿದೆ.
ಅದೇ ರೀತಿ ತಾಲೂಕಿನ ಜಗದಾಳ ಗ್ರಾಮದಲ್ಲಿಯೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಾಲೂ ಇದ್ದರೂ, ಕೂಡಾ ಬೋರ್ ವೆಲ್ ಮೂಲಕ ಪ್ರತಿದಿನ ನೀರ ಪೂರೈಕೆ ವ್ಯವಸ್ಥೆ ಮಾಡಿಕೊಂಡಿದೆ. ಇದರಿಂದ ಈ ಭಾಗದಲ್ಲೂ ಕೂಡಾ ಯಾವುದೇ ನೀರಿನ ತೊಂದರೆ ಇಲ್ಲ.
ಈ ಭಾಗದ ಕೃಷ್ಣಾ ನದಿ ತುಂಬಿರುವುದರಿಂದ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು ಅಲ್ಲದೇ ಕೊಳವೆ ಬಾವಿಗಳು ಹೆಚ್ಚಾಗಿ ಇರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸಮರ್ಪಕ ನೀರು ದೊರೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಅಲ್ಲದೇ ಬೇಸಿಗೆಯ ತಾಪ ಮಾಣ ಹೆಚ್ಚಾಗಿರುವುದರಿಂದ ಸಾರ್ವಜನಿಕ ಸಂಘ ಸಂಸ್ಥೆಗಳು ಪ್ರತಿ ವರ್ಷದಂತೆ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೀರಿಣ ಅರವಟಿಗೆಗಳನ್ನು ಪ್ರಾರಂಭಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಯಾವುದು ಇಲ್ಲ. ಕೆಲವೊಂದು ಕಡೆ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಆಗಿದ್ದು, ಅಂತಹವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ನೀರು ಕೊಡುತ್ತಿದ್ದೇವೆ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಕೊಳವೆ ಬಾವಿ ಕೊರೆಸಲು ಸೂಚಿಸಿದ್ದು, ಅವಶ್ಯವೆನಿಸಿದರೆ ನೀರಿನ ಸಮಸ್ಯೆ ನಿಭಾಯಿಸಲು ಸಿದ್ಧರಿದ್ದೇವೆ. – ಸಿದ್ದು ಕ. ಸವದಿ, ಶಾಸಕರು, ತೇರದಾಳ ಮತ ಕ್ಷೇತ್ರ
ತಾಲೂಕಿನಲ್ಲಿ ನೀರಿನ ಯಾವುದೇ ಸಮಸ್ಯೆ ಇಲ್ಲಾ, ಈ ಕುರಿತು ಈಗಾಗಲೇ ಸಭೆ ಮಾಡಿದ್ದೇವೆ. ಹಿಪ್ಪರಗಿ ಬ್ಯಾರೇಜನ್ ಹಿಂಬಾಗದಲ್ಲಿ5 ಟಿಎಂಸಿ ನೀರಿದ್ದು ನಮ್ಮಲ್ಲಿ ಯಾವುದೇ ನೀರಿನ ಅಭಾವ ಆಗುವುದಿಲ್ಲ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. – ಎಸ್. ಬಿ. ಇಂಗಳೆ ತಹಶೀಲ್ದಾರರು, ರಬಕವಿ-ಬನಹಟ್ಟಿ
ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲಾ, ಆದರೂ ತಾಲೂಕಿನ ಬೋರವೆಲ್ಲಗಳನ್ನು ಹಾಗೂ ಟ್ಯಾಂಕರಗಳನ್ನು ಗುರುತಿಸಿದ್ದು, ಈ ಕುರಿತು ಸಭೆಯನ್ನು ಕೂಡಾ ಮಾಡಲಾಗಿದೆ. ಈ ವರ್ಷ ನೀರಿನ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. – ಸಂಜಯ ಹಿಪ್ಪರಗಿ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತಿ, ರಬಕವಿ-ಬನಹಟ್ಟಿ
– ಕಿರಣ ಶ್ರೀಶೈಲ ಆಳಗಿ