Advertisement

ಚಿಕ್ಕಮಗಳೂರು : ಜಿಲ್ಲಾಸ್ಪತ್ರೆಗೆ ಸುಧಾಕರ್ ಭೇಟಿ : ಅಧಿಕಾರಿಗಳ ಮೇಲೆ ಗರಂ

04:33 PM Jun 11, 2021 | Team Udayavani

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

Advertisement

ಜಿಲ್ಲಾ ಕೋವಿಡ್ ಅಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳ ಮೇಲೆ ಗರಂ ಆದ ಸಚಿವರು, ಡಿಸ್ ಪ್ಲೇ ಬೋರ್ಡ್ ಎಲ್ಲಿದೆ, ಮಾಡಿರುವ ಕೆಲಸವನ್ನ ತೋರಿಸೋದಾದ್ರು ಹೇಗೆ, ಐಸಿಯು, ವೆಂಟಿಲೇಟರ್ ಬೆಡ್ ಗಳ ಸಂಖ್ಯೆ ಎಲ್ಲಿ ಎಂದು ಅಧಿಕಾರಿಗಳಿಗೆ ಸಚಿವ ಸುಧಾಕರ್ ಕ್ಲಾಸ್ ತೆಗೆದುಕೊಂಡರು.

ಡಿಸ್ ಪ್ಲೇ ಬೋರ್ಡ್ ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಲ್ವಾ?, ಡಿಸಿಯವರೇ ಎಲ್ಲಿದೆ ಆ ಮಾಹಿತಿ ಎಂದು ಜಿಲ್ಲಾಧಿಕಾರಿಗಳ ಮೇಲೂ ಗರಂ ಆಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next