Advertisement
ನಗರದ ಶಾಸಕರ ಕಾರ್ಯಾಲಯದಲ್ಲಿ ವಸತಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಮೇ 10ರಂದು ಮಂಗಳವಾರ ವಸತಿ ಸಚಿವ ವಿ. ಸೋಮಣ್ಣ ನಗರಕ್ಕೆ ಆಗಮಿಸಲಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಜಿ+2 ಮಾದರಿಯ 624 ಹಾಗೂ 1248 ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಅಲೆಮಾರಿ ಸಮುದಾಯಕ್ಕೆ ಈಗಾಗಲೇ ಮಂಜೂರಾದ 4448 ಮನೆಗಳ ಜೊತೆಗೆ ಹೆಚ್ಚುವರಿಯಾಗಿ 845 ಮನೆಗಳಿಗೆ ಇದೇ ಸಂದರ್ಭದಲ್ಲಿ ಹಕ್ಕುಪತ್ರ ವಿತರಿಸಲಾಗುವುದು. ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಗಳ ಅಡಿಯಲ್ಲಿ ಗ್ರಾಮಾಂತರಕ್ಕೆ 1200 ಮನೆಗಳಿಗೆ ಮಂಜೂರಾತಿ ನೀಡಲಾಗಿದ್ದು, ಹೆಚ್ಚುವರಿಯಾಗಿ 1000 ಮನೆ ನಿರ್ಮಾಣಕ್ಕೆ ಮನವಿ ಮಾಡಲಾಗುವುದು ಎಂದರು.
Related Articles
Advertisement
ನಗರಸಭೆ ಸದಸ್ಯ ಎಂ.ಡಿ. ಸಣ್ಣಪ್ಪ ಮಾತನಾಡಿ, ಜನಗಳಿಗೆ ನೀರು, ಆಶ್ರಯ ರಹಿತರಿಗೆ ಸೂರು ಕಲ್ಪಿಸುವ ದೃಷ್ಟಿಯಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಮೀರಿಸುವ ಶಾಸಕರನ್ನು ಇದುವರೆಗೂ ಹಿರಿಯೂರು ಕ್ಷೇತ್ರ ಕಂಡಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದವರಿಗೂ ಶಾಸಕರ ಸ್ಪಂದನೆ ಮಾದರಿ ಎಂದು ಬಣ್ಣಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮಾತನಾಡಿ, ವಾಣಿವಿಲಾಸ ಸಾಗರಕ್ಕೆ 100 ಟಿಎಂಸಿ ನೀರು ಹಾಗೂ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಶಾಸಕರು ಮುಂದಾಗಬೇಕು. ಇದುವರೆಗೆ ರೈತರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿರುವ ಶಾಸಕರು ಇನ್ನು ಮುಂದೆಯೂ ನಮ್ಮ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಗಮನ ನೀಡಬೇಕೆಂದರು.
ನಗರಸಭೆ ಸದಸ್ಯ ಕೇಶವಮೂರ್ತಿ, ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್ ಮಾತನಾಡಿದರು. ನಗರಸಭೆ ಸದಸ್ಯರಾದ ಮಹೇಶ್ ಪಲ್ಲವ, ಗಣೇಶ್ ಕದ್ರು, ಮಾಜಿ ಸದಸ್ಯ ಬಿ.ಕೆ. ಕರಿಯಪ್ಪ, ಚಿರಂಜೀವಿ, ಕೆ.ಪಿ. ಶ್ರೀನಿವಾಸ್, ನಿತ್ಯಾನಂದ ಯಾದವ್, ಓಂಕಾರ್, ಶೋಭಾ, ಸರವಣ, ಘಾಟ್ ರವಿ, ಕೃಷ್ಣಮೂರ್ತಿ, ರಾಜಣ್ಣ ಮತ್ತಿತರರು ಇದ್ದರು.
ಶಾಸಕಿಯಾಗಿ ಅಲ್ಪ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸುಧಾಕರ್ ಅವರು ಇಡೀ ರಾಜಕೀಯ ಜೀವನದಲ್ಲೇ ಮಾಡಿಲ್ಲ. ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ನೋಡಿ ಅಸೂಯೆಯಿಂದ ಮಾಜಿ ಸಚಿವರು ಸುಳ್ಳು ಆರೋಪ ಮಾಡುತ್ತಾ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಮತದಾರರ ಮುಂದೆ ಅವರ ನಾಟಕ ನಡೆಯದು. -ಪೂರ್ಣಿಮಾ ಶ್ರೀನಿವಾಸ್, ಶಾಸಕಿ