Advertisement

ಪಲಿಮಾರು ಶ್ರೀಗಳಿಂದ ಸುಧಾ ಮಂಗಲೋತ್ಸವ

09:00 AM Apr 26, 2018 | Team Udayavani |

ಉಡುಪಿ: ಪಲಿಮಾರು ಮತ್ತು ಭಂಡಾರಕೇರಿ ಮಠಾಧೀಶರಾಗಿದ್ದ, ಹಿರಿಯ ತಪಸ್ವಿ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ 18ನೇ ಆರಾಧನಾ ಮಹೋತ್ಸವ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಕಳೆದ 12 ವರ್ಷಗಳಿಂದ ಶಾಸ್ತ್ರ ಪಾಠ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಧಾ ಮಂಗಲೋತ್ಸವವನ್ನು ಬುಧವಾರ ನಡೆಸಿದರು.

Advertisement

ಬ್ರಹ್ಮಸೂತ್ರ-ಅನುವ್ಯಾಖ್ಯಾನ-ಶ್ರೀಮನ್ನ್ಯಾಯ ಸುಧಾ ಮಂಗಲೋತ್ಸವ ಪ್ರವಚನ ನಡೆಯಿತು. ವಿವಿಧ ದರ್ಶನಗಳನ್ನು ವಿಶ್ಲೇಷಿಸಿದ ಶ್ರೀಪಾದರು ಮಧ್ವಾಚಾರ್ಯರು ತೋರಿಸಿದ ತತ್ವಜ್ಞಾನದ ಮರ್ಮವನ್ನು ಸಭೆಗೆ ವಿವರಿಸಿದರು. ಶ್ರೀ ಪೇಜಾವರ ಹಿರಿಯ – ಕಿರಿಯ, ವ್ಯಾಸರಾಜ, ಕಾಣಿಯೂರು, ಸೋದೆ, ಭೀಮನಕಟ್ಟೆ ಮಠಾಧೀಶರು, ಅದಮಾರು ಕಿರಿಯ, ಬನ್ನಂಜೆ ಶ್ರೀ ರಾಘವೇಂದ್ರತೀರ್ಥ ಶ್ರೀಪಾದರು, ಪ್ರಯಾಗ ಮಠಾಧೀಶರು ಆಶೀರ್ವಚನ ನೀಡಿದರು. ಮಂಗಳವಾರ ಉತ್ತರಾದಿ ಮಠಾಧೀಶರ ಸಮ್ಮುಖ ವಿದ್ಯಾರ್ಥಿಗಳು ಪರೀಕ್ಷೆ ನೀಡಿದರು. ಬುಧವಾರ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೋತ್ಸವದ ಅಂಗವಾಗಿ ಹಿರಿಯ ವಿದ್ವಾಂಸ, ಅವರ ಶಿಷ್ಯ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಗೆ ಪರವಿದ್ಯಾಮಾನ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಶ್ರೀ ವಿದ್ಯಾಮಾನ್ಯ ತೀರ್ಥರು ಇಹಲೋಕ ತ್ಯಜಿಸಿದ ದಿನ ಏಕಾದಶಿ ಗುರುವಾರ ಬೆಳಗ್ಗಿನಿಂದ ಸಂಜೆ 7 ಗಂಟೆವರೆಗೆ ಅಖಂಡ ಭಾಗವತ ಪ್ರವಚನ ನಡೆಯಲಿದೆ.


Advertisement

Udayavani is now on Telegram. Click here to join our channel and stay updated with the latest news.

Next