Advertisement

ಸುದೀಪ್‌ ಹೆಸರಲ್ಲಿ ನಕಲಿ ಟ್ವೀಟ್‌

11:42 AM Mar 31, 2017 | |

ಬೆಂಗಳೂರು: ನಟ ಸುದೀಪ್‌ ಅವರ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಇತ್ತೀಚೆಗೆ ಬಿಡುಗಡೆಯಾದ ನಟ ಪುನೀತ್‌ ರಾಜ್‌ಕುಮಾರ್‌ ಅವರ “ರಾಜಕುಮಾರ’ ಚಿತ್ರಕ್ಕೆ ಶುಭ ಕೋರಿ ಟ್ವೀಟ್‌ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

Advertisement

ಟ್ವಿಟರ್‌ನಲ್ಲಿ ಸುದೀಪ್‌ ಹೆಸರಲ್ಲಿ ನಕಲಿ ಖಾತೆ ತೆರೆದ ದುಷ್ಕರ್ಮಿಗಳು, “ಪುನೀತ್‌ ರಾಜ್‌ಕುಮಾರ್‌ ಅವರ ರಾಜ ಕುಮಾರ ಚಿತ್ರವು ಕರ್ನಾಟಕದಲ್ಲಿ ಬಾಹುಬಲಿ ಹಾಗೂ ಹೆಬ್ಬುಲಿಯ ಕಲೆಕ್ಷನ್‌ ಅನ್ನು ಮುರಿದು ಮುನ್ನಡೆಯುತ್ತಿದೆ. ಅದಕ್ಕಾಗಿ ಪುನೀತ್‌ ಹಾಗೂ ರಾಜಕುಮಾರ ಚಿತ್ರತಂಡಕ್ಕೆ ಅಭಿನಂದನೆಗಳು,’ ಎಂದು ಟ್ವೀಟಿಸಿದ್ದರು.

ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಹೇಳಿರುವ ಸುದೀಪ್‌, ಈ ವಿಚಾರಕ್ಕೆ ಸಂಬಂಧಿಸಿ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. “ಈಗ ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿರಬಹುದು. ಆದರೆ, ಮುಂದೆ ಇಂತಹ ಕೃತ್ಯಗಳು ಮುಂದುವರಿಯಬಾರದು ಎಂಬ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ,’ ಎಂದು ಸುದೀಪ್‌ ಹೇಳಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next