Advertisement

ಬಿಗ್‍ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ.ನೀಡಿದ ನಟ ಸುದೀಪ್

04:44 PM May 09, 2021 | Team Udayavani |

ಬಾಗಲಕೋಟೆ : ಸ್ಯಾಂಡಲ್‍ವುಡ್ ನಟ ಸುದೀಪ್ ಅವರು ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ಅವರ ತಾಯಿ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ನೆರವು ನೀಡುವ ಮೂಲಕ ರಿಯಲ್ ಹೀರೋ ಆಗಿದ್ದಾರೆ.

Advertisement

ಸೋನು ಅವರ ತಾಯಿ ಮಹಾದೇವಿ ಪಾಟೀಲ ಅವರ ಆಸ್ಪತ್ರೆ ಬಿಲ್ ಹಾಗೂ ಔಷಧದ ವೆಚ್ಚವಾಗಿ ಸುದೀಪ್ ಅವರು ಲಕ್ಷಾಂತರ ರೂಪಾಯಿ ಪಾವತಿಸಿದ್ದಾರೆ.

ಸುದೀಪ್ ಅವರ ನೆರವಿಗೆ ಅಳುತ್ತಲೇ ಧನ್ಯವಾದ ಹೇಳಿರುವ ಸೋನು, ತಾಯಿ ಮಹಾದೇವಿ ತೀವ್ರವಾಗಿ ನ್ಯುಮೋನಿಯಾ ಬಾಧಿತರಾಗಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡದಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಅವರನ್ನು ಬಾಗಲಕೋಟೆಯ ಶಕುಂತಲಾ ಆಸ್ಪತ್ರೆಗೆ ದಾಖಲಿಸಿದ್ದೆನು. ಈ ವೇಳೆ ಅಮ್ಮನ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಯಿತು. ಕೋವಿಡ್ ಕರ್ಪ್ಯೂ ಕಾರಣ ಈಗ ಶೂಟಿಂಗ್ ನಿಂತಿದೆ. ಹೀಗಾಗಿ ಎಲ್ಲಿಯೂ ಕೆಲಸವಿಲ್ಲದಂತಾಗಿದೆ. ಹಣ ಸಾವಿರ ಲೆಕ್ಕದಲ್ಲಿ ಆಗಿದ್ದರೆ ಹೇಗಾದರೂ ಹೊಂದಿಸುತ್ತಿದ್ದೆ. ಆದರೆ ಲಕ್ಷಗಟ್ಟಲೆ ಬೇಕಾಯಿತು. ಕೆಲವು ಸ್ನೇಹಿತರ ಬಳಿ ಆರ್ಥಿಕ ನೆರವು ಕೇಳಿದರೂ ಸಿಗಲಿಲ್ಲ. ಸಹಾಯ ಮಾಡುವುದಾಗಿ ಹೇಳಿದವರೂ ಸ್ಪಂದಿಸಲಿಲ್ಲ. ಕೊನೆಗೆ ಸುದೀಪ್ ಅಣ್ಣ ಅವರನ್ನು ಸಂಪರ್ಕಿಸಿದೆನು. ಅವರು ನನ್ನ ಕಷ್ಟಕ್ಕೆ ಸ್ಪಂದಿಸಿದರು’ ಎಂದು ಸೋನು ಪಾಟೀಲ ಹೇಳಿದ್ದಾರೆ.

‘ಸುದೀಪ್ ತಮ್ಮ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ದವಾಖಾನೆಯ ಸಂಪೂರ್ಣ ಬಿಲ್ ಪಾವತಿಸಿದ್ದಾರೆ. ಆ ಮೊತ್ತ ₹ 5 ಲಕ್ಷದಷ್ಟು ಆಗಿದೆ. ಸಂಕಷ್ಟದ ಸಂದರ್ಭದಲ್ಲಿ ಬೆನ್ನಿಗೆ ನಿಂತ ಸುದೀಪ್ ಅಣ್ಣ ಅವರಿಗೆ ಧನ್ಯವಾದ ಅರ್ಪಿಸುವೆ. ಯಾವತ್ತಿಗೂ ಅವರಿಗೆ ಋಣಿ ಆಗಿರುವೆ’ ಎಂದು ಸೋನು ಪಾಟೀಲ ಕಣ್ಣೀರು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next