ಬೆಂಗಳೂರು:ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ವಿಚ್ಚೇದನ ಪ್ರಕರಣದ ವಿಚಾರಣೆಗೆ ಗುರುವಾರವೂ ಇಬ್ಬರೂ ಗೈರುಹಾಜರಾಗಿದ್ದು, ಸುದೀಪ್ ಪರವಾಗಿ ಸಹೋದರಿ ಸುಜಾತ ಹಾಜರಾಗಿದ್ದರು. ಆದರೆ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಇದೇ ಕೊನೆಯ ಅವಕಾಶ ಎಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೋರ್ಟ್ ಹೇಳಿದ್ದೇನು?
ಸುದೀಪ್ ಮತ್ತು ಪ್ರಿಯಾ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಅವರಿಬ್ಬರು ರಾಜೀ ಸಂಧಾನವಾಗಿದ್ದರೆ ತಿಳಿಸಿ, ಇಲ್ಲವೇ ರಾಜೀಯಾಗಿದ್ದರೆ ಮಾಹಿತಿ ಕೊಡಿ. ಇಲ್ಲವಾದರೆ ವಿಚ್ಚೇದನದ ಬಗ್ಗೆ ಅರ್ಜಿಯಲ್ಲಿನ ಅಂಶಗಳ ಬಗ್ಗೆ ಕೋರ್ಟ್ ನಿಂದಲೇ ವಿಚಾರಣೆ ನಡೆಸಿ ತೀರ್ಪು ನೀಡುವುದಾಗಿ ಅಭಿಪ್ರಾಯವ್ಯಕ್ತಪಡಿಸಿದೆ.
2015ರ ಸೆಪ್ಟೆಂಬರ್ ನಲ್ಲಿ ಇಬ್ಬರು ಪರಸ್ಪರ ಸಹಮತದ ಮೇರೆಗೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ದಂಪತಿ ವಿಚಾರಣೆಗೆ ಹಾಜರಾಗಿಲ್ಲ. ಇಂದಿನ ವಿಚಾರಣೆಗೆ ಸುದೀಪ್, ಪತ್ನಿ ಪ್ರಿಯಾ, ಅವರ ಪರ ವಕೀಲರು ಗೈರು ಹಾಜರಾಗಿದ್ದರು.
ಸುದೀಪ್ ದಂಪತಿ ವಿಚ್ಚೇದನದ ಬಗ್ಗೆ ಮತ್ತಷ್ಟು ಕಾಲಾವಕಾಶ ನೀಡಬೇಕೆಂದು ಸುದೀಪ್ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದು, ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಇದು ಕೊನೆಯ ಅವಕಾಶ ಎಂದು ಹೇಳಿ ಜೂನ್ 14ಕ್ಕೆ ವಿಚಾರಣೆ ಮುಂದೂಡಿದರು.