ಶಿರ್ವ: ಕಳೆದ 30 ವರ್ಷಗಳಿಂದ ಸೂಡ ಸರಕಾರಿ ಪ್ರೌಢ ಶಾಲೆಯಲ್ಲಿ ದಾನಿ ಬೆಳ್ಮಣ್‌ನ ಉದ್ಯಮಿ ಎಸ್. ಕೆ. ಸಾಲಿಯಾನ್ ಅವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸಮ್ಮಾನ ಸಮಾರಂಭವು ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಉದ್ಯಮಿ ಎಸ್. ಕೆ. ಸಾಲಿಯಾನ್ ಶೇ. 100 ಫಲಿತಾಂಶ ದಾಖಲಿಸಿದ ಸೂಡ ಸರಕಾರಿ ಪ್ರೌಢ ಶಾಲೆಯ ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೂಡ ಗ್ರಾಮಸ್ಥರ ಪರವಾಗಿ ಅಭಿನಂದಿಸಿ ಪ್ರತಿಭಾ ಪುರಸ್ಕಾರ ನೀಡಿದರು. ಶೇ. 100 ಫಲಿತಾಂಶ ದಾಖಲಿಸಲು ಶ್ರಮಿಸಿದ ಶಿಕ್ಷಕ ವೃಂದದವರನ್ನು ಸಮ್ಮಾನಿಸಿದರು.
ಮುಖ್ಯ ಅತಿಥಿ ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ|ವೈ. ಭಾಸ್ಕರ ಶೆಟ್ಟಿ,ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಭಾಷಾ ಮಾಧ್ಯಮ ಮುಖ್ಯವಲ್ಲ,ಕಠಿಣ ಪರಿಶ್ರಮ,ಪ್ರಾಮಾಣಿಕತೆ ಮತ್ತು ಧನಾತ್ಮಕ ಚಿಂತನೆಗಳ ಮೂಲಕ ಗುರಿಯಿರಿಸಿದಾಗ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಎಸ್.ಕೆ. ಸಾಲ್ಯಾನ್ ಅವರಂತಹ ದಾನಿಗಳ ಮೂಲಕ ಸಮಾಜ ನೀಡುವ ಗೌರವವನ್ನು ಸ್ವೀಕರಿಸಿ ಅದನ್ನು ಮುಂದೆ ಸಮಾಜಕ್ಕೆ ವಾಪಾಸು ನೀಡುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಸಮ್ಮಾನ:
ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಾದ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ|ವೈ. ಭಾಸ್ಕರ ಶೆಟ್ಟಿ, ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಬಾಲಕೃಷ್ಣ ರಾವ್,ಸರಕಾರಿ ಪ್ರೌಢಶಾಲೆಯಿಂದ ವರ್ಗಾವಣೆಗೊಂಡ ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಶಿಕ್ಷಕಿ ಜ್ಯೋತಿ ಸುವರ್ಣ, ಸೂಡ ಶ್ರೀ ಸುಬ್ರಹ್ಮಣ್ಯ ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಸಖೂ ಬಾಯಿ ಅವರನ್ನು ಉದ್ಯಮಿ ಎಸ್.ಕೆ.ಸಾಲ್ಯಾನ್ ಸಮ್ಮಾನಿಸಿದರು. ಸರಕಾರಿ ಸಂಯುಕ್ತ ಪ್ರೌಢಶಾಲೆಯ 3 ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರನ್ನು ಗೌರವಿಸಿದರು. ಪ್ರೌಢಶಾಲೆಯ ವತಿಯಿಂದ ದಾನಿ ಪ್ರಾಯೋಜಕ ಎಸ್.ಕೆ. ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಶಿಕ್ಷಕಿ ವಿದ್ಯಾ ಮತ್ತು ಮಲ್ಲಿಕಾ ಕೆ.ಆರ್ ಸಮ್ಮಾನಿತರ ಪರಿಚಯ ಮಾಡಿದರು.
ಸಮ್ಮಾನಿತರ ಪರವಾಗಿ ಶಿಕ್ಷಕ ರಿತೇಶ್ ಕುಮಾರ್ ಶೆಟ್ಟಿ ,ವೈದ್ಯಾಧಿಕಾರಿ ಡಾ|ಬಾಲಕೃಷ್ಣ ರಾವ್ ಮಾತನಾಡಿದರು. ಜಿಲ್ಲಾ ಡಯೆಟ್‌ನ ಹಿರಿಯ ಉಪನ್ಯಾಸಕ ಸುಬ್ರಹ್ಮಣ್ಯ,ಅಧ್ಯಕ್ಷತೆ ವಹಿಸಿದ್ದ ಶಿರ್ವ ಕೋಡು ಜಯಶೀಲ ಹೆಗ್ಡೆ ಮಾತನಾಡಿದರು. ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಪ್ರಶಾಂತ್ ಶೆಟ್ಟಿ, ಉದ್ಯಮಿಗಳಾದ ಶೀನ ಪೂಜಾರಿ, ವಿವೇಕ್ ಆಚಾರ್ಯ ಶಿರ್ವ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಬಂಡಸಾಲೆ ವೇದಿಕೆಯಲ್ಲಿದ್ದರು.
ಸೂಡ ಶ್ರೀ ಸುಬ್ರಹ್ಮಣ್ಯ ಹಿ.ಪ್ರಾ.ಶಾಲೆಯ ಸಹಸಂಚಾಲಕ ಗಣೇಶ್ ಶೆಣೈ,ನಿವೃತ್ತ ಅಂಗನವಾಡಿ ಶಿಕ್ಷಕಿ ವಸಂತಿ, ಸೋಮನಾಥ ಹೆಗ್ಡೆ, ಹಳೆವಿದ್ಯಾರ್ಥಿಗಳು,ವಿದ್ಯಾರ್ಥಿಗಳ ಹೆತ್ತವರು,ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಭಾಸ್ಕರ್ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕೆ.ಎಸ್. ರಮೇಶ್ ಕಾರ್ಯಕ್ರಮ ನಿರೂಪಿಸಿ, ಶಿವಪ್ರಸಾದ್ ಅಡಿಗ ವಂದಿಸಿದರು.