ವಾಡಿ: ಭೂಸುದಾರಣೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯಿದೆ ವಾಪಸ್ ಪಡೆಯಬೇಕು. ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ಮತ್ತು ನೆರವು ನೀಡಬೇಕು. ಕೊರೊನಾ ಸೊಂಕಿತರು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳ ಶಿಕ್ಷಣದ ಶುಲ್ಕ ಮನ್ನಾ ಮಾಡಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಪ್ರತಿ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ, ಬೆಳೆ, ಗೋದಿ, ಕಡಲೆ ವಿತರಿಸಬೇಕು ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ ಯುಸಿಐ) ಕಮ್ಯುನಿಸ್ಟ್ ಪಕ್ಷದ ವಾಡಿ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಆಗ್ರಹಿಸಿದರು.
ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಸೋಮವಾರ ರಾಜ್ಯಾದ್ಯಂತ ಕರೆ ನೀಡಲಾದ ಮನೆ ಮನೆಯಿಂದ ಪ್ರತಿಭಟನಾ ಆಂದೋಲನ ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಬಿಜೆಪಿ ಸರಕಾರ ಕೋವಿಡ್ ಸೋಂಕು ಮುಂದಿಟ್ಟುಕೊಂಡು ಜನ ಹೋರಾಟಗಳನ್ನು ಹತ್ತಿಡಲು ನೋಡುತ್ತಿದೆ. ಮಹಾಮಾರಿ ಸೊಂಕು ನಿಯಂತ್ರಿಸಲು ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಸೊಂಕು ಜೀವಂತವಾಗಿಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಕೋವಿಡ್ ಹೆಸರಿನಲ್ಲಿ ಜಾರಿಗೊಳಿಸಲಾದ ಲಾಕ್ಡೌನ್ ಮತ್ತು ಕರ್ಫ್ಯೂ ದಿಂದ ದುಡಿಯುವ ಜನರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬಿದ್ದಿದೆ. ಕೆಲವಿಲ್ಲದೆ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಪದೆಪದೆ ಜನರ ಬದುಕನ್ನು ದಿವಾಳಿ ಎಬ್ಬಿಸಲಾಗುತ್ತಿದೆ. ಲಾಕ್ಡೌನ್ ಕರ್ಫ್ಯೂ ಪರಿಹಾರ ನೀಡದೆ ಸರಕಾರ ಜನರನ್ನು ವಂಚಿಸಿದೆ. ಎಲ್ಲಾರಂಗದಲ್ಲೂ ವಿಫಲವಾಗಿರುವ ಬಿಜೆಪಿ ಸರಕಾರ ಜನಸಾಮಾನ್ಯರ ಎದೆಯ ಮೇಲೆ ಬೆಲೆ ಏರಿಕೆಯ ಬರೆ ಎಳಿದಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದೇ ರೀತಿ ಪಕ್ಷದ ಕಾರ್ಯಕರ್ತರು ತಮ್ಮ ಮನೆಗಳಿಂದಲೇ ಬೇಡಿಕೆಗಳುಳ್ಳ ಪೋಸ್ಟರ್ ಹಿಡಿದು ಬಿಜೆಪಿ ಸರಕಾರದ ವಿರುಧ್ಧ ಪ್ರತಿಭಟನೆ ನಡೆಸಿದರು. ರಾಜು ಒಡೆಯರಾಜ, ಪದ್ಮರೇಖಾ ವೀರಭದ್ರಪ್ಪ, ಭೀಮಾಶಂಕರ ಮಾಳಗಿ, ವೆಂಕಟೇಶ ದೇವದುರ್ಗ, ಶರಣರು ಹೇರೂರ, ಗೌತಮ ಪರತೂರಕರ, ಗೋಧಾವರಿ ಕಾಂಬಳೆ, ಗೋವಿಂದ ಯಳವಾರ, ಯೇಸಪ್ಪ ಕೇದಾರ, ವಿಠ್ಠಲ ರಾಠೋಡ, ಗುಂಡಣ್ಣ ಎಂ.ಕೆ, ಮಲ್ಲಿಕಾರ್ಜುನ ಗಂದಿ, ಅರೂಣ ಹೆರಿಬಾನರ ಸೇರಿದಂತೆ ಅನೇಕರು ಮನೆ ಮನೆಯಿಂದ ವಿಶೇಷ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.