ವರ್ಷಗಳಿಂದ ಒಂದರ್ಥದಲ್ಲಿ ಅಜ್ಞಾತವಾಸದಲ್ಲಿದ್ದವರು. ಈಗ ಇಬ್ಬರ ಚಿತ್ರವೂ ಇವತ್ತು ಬಿಡುಗಡೆಯಾಗುತ್ತಿದೆ. “ಸಿಲಿಕಾನ್ ಸಿಟಿ’ ಎಂಬ ಚಿತ್ರದ ಮೂಲಕ ಕಿಟ್ಟಿ ಬರುತ್ತಿದ್ದರೆ, “ಟೈಗರ್’ ಆಗಿ ಪ್ರದೀಪ್ ಎಂಟ್ರಿ ಕೊಡುತ್ತಿದ್ದಾರೆ. ಈ ಎರಡು ಚಿತ್ರಗಳಿಗೆ ಕಂಬ್ಯಾಕ್ ಸಿನಿಮಾ ಎಂದು ಕರೆಯಬಹುದಾ? ಈ ಗ್ಯಾಪ್‌ನಲ್ಲಿ ಇಬ್ಬರೂ ಏನು ಮಾಡುತ್ತಿದ್ದರು? ಸಕ್ಸಸ್ ಇಲ್ಲದೆ ಮನಸ್ಥಿತಿ ಹೇಗಿತ್ತು? ಈ ಚಿತ್ರಗಳು ಇಮೇಜ್ ಬದಲಿಸುತ್ತವೆ ಎಂಬ ನಂಬಿಕೆ ಇದೆಯಾ? ಈ ಚಿತ್ರಗಳಿಂದ ಚಿತ್ರರಂಗದಲ್ಲಿ ಗಟ್ಟಿ ನೆಲೆ ಸಿಗಬಹುದೆಂಬ ಖಾತ್ರಿ ಇದೆಯಾ? ಮುಂದಿನ ಜರ್ನಿ ಯಾವ ತರಹದಿರುತ್ತದೆ? ಎಂಬಂತಹ ಹಲವಾರು ಪ್ರಶ್ನೆಗಳು ಅವರಿಬ್ಬರ ಬಗ್ಗೆ ಕಾಡುವುದು ಉಂಟು. ಈ ಪ್ರಶ್ನೆಗಳನ್ನು ಅವರೆದುರು ಇಟ್ಟಾಗ, ಅವರಿಂದ ಬಂದ ಉತ್ತರಗಳು ಹೀಗಿವೆ.
Advertisement
ಇದು ನನ್ನ ಕಂ ಬ್ಯಾಕ್ ಸಿನಿಮಾನೂ ಅಲ್ಲ. ಇದು ನನ್ನ ರೀ-ಇಂಟ್ರಡಕ್ಷನ್ನೂ ಅಲ್ಲ. ಅದೊಂದು ಹೊಸ ಅವತಾರ, ಬೇರೆ ರೂಪ ಅನ್ನಬಹುದು. ಸುದೀಪ್ ಸರ್ ಹೇಳಿದಂಗೆ, ಪರ್‌ಫೆಕ್ಟ್ ಇಂಟ್ರಡಕ್ಷನ್ ಅಂತಾನೂ ಅಂದುಕೊಳ್ಳಬಹುದು. ಒಟ್ನಲ್ಲಿ ಏನಾದ್ರೂ ಆಗಲಿ, ನಾನು ಹೊಸ ತರಹ ಕಾಣಿಸಿಕೊಳ್ಳಬೇಕಿತ್ತು. ಅದು “ಟೈಗರ್’ನಲ್ಲಾಗಿದೆ.
ಮಾತ್ರ ಆ ಸತ್ಯ ಗೊತ್ತಿತ್ತು.
Related Articles
Advertisement
ಸಕ್ಸಸ್ ಇಲ್ಲದಿದ್ದರೂ, ಸಮಾಧಾನವಾಗಿದ್ದೆ. ಕಾರಣ, ಸಿನಿಮಾ ನೋಡಿದ ಮೇಲೆ ವಿಮರ್ಶೆ ಬರೆಯೋರು, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ತಿಳಿಸೋರೆಲ್ಲಾ ನನ್ನ ನಟನೆ ಬಗ್ಗೆ ಒಳ್ಳೇ ಮಾತಾಡಿದ್ದರೂ, ಸಿನಿಮಾ ಚೆನ್ನಾಗಿಲ್ಲ ಅಂತ ಬರೆಯೋರು. ಆಡಿಯನ್ಸ್ ಕೂಡ ಅದನ್ನು ಓದಿ, ಥಿಯೇಟರ್‌ಗೂ ಹೋಗುತ್ತಿರಲಿಲ್ಲ. ಆಗ ನನ್ನ ಮನಸ್ಥಿತಿ ಹೇಗಾಗಿರಬೇಡ ಹೇಳಿ? ಆದರೂ ನಾನು ತಾಳ್ಮೆ ಕಳೆದುಕೊಳ್ಳಲಿಲ್ಲ. ಯಾವುದೋ ಒಂದು ಸಬೆjಕ್ಟ್ ಸಿಕ್ಕೇ ಸಿಗುತ್ತೆ. ಒಂದು ಸಕ್ಸಸ್ ಸಿಗೋವರೆಗೂ ನಾನು ಎಫರ್ಟ್ ಹಾಕಲೇ ಬೇಕು ಅಂತಾನೇ, ಸಿನಿಮಾ ಮಾಡುತ್ತಲೇ ಬಂದೆ. ಎಲ್ಲವೂ ಹಾಗೇ ಬಂದು, ಹಾಗೆ ಹೋದವು. ಸೋತರೂ ಕೂಡ ನಾನು ಎಫರ್ಟ್ ಹಾಕುವುದನ್ನು ಮಾತ್ರ ಬಿಡಲಿಲ್ಲ. ಆ ಎಫರ್ಟ್ ಇಂದು “ಟೈಗರ್’ ಮೂಲಕ ವಿಶ್ವಾಸ ತುಂಬಿದೆ. ಮೊದಲ ಚಿತ್ರ ಗೆದ್ದಿದ್ದರೆ, ನಾನೊಬ್ಬ ನಟ ಆಗೋಕೆ ಸಾಧ್ಯವಾಗುತ್ತಿರಲಿಲ್ಲ. ಈಗ ಆಗಿದ್ದೆಲ್ಲ ಒಳ್ಳೆಯದ್ದಕ್ಕೆ ಅಂದುಕೊಂಡಿದ್ದೇನೆ. ಸೋಲು ನನಗೊಂದು ಪಾಠ ಕಲಿಸಿದೆ. ಅದೇ ಈಗ ಗೆಲುವಿಗೆ ಮುನ್ನುಡಿ ಬರೆಯಲಿದೆ.
ನನಗೆ ಈ “ಟೈಗರ್’ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತದೆ ಎಂಬ ಬಗ್ಗೆ ಗೊತ್ತಿಲ್ಲ. ವಿಮರ್ಶೆಗಳು ಹೇಗಿರುತ್ತವೋ ಗೊತ್ತಿಲ್ಲ. ಆದರೆ, ಇಷ್ಟು ವರ್ಷಗಳಲ್ಲಿ ಮಾಡಿದ ಸಿನಿಮಾಗಳಿಗೆ ಹೋಲಿಸಿದರೆ, ಹಂಡ್ರೆಡ್ ಪರ್ಸೆಂಟ್ ನಾನು ಈ ಚಿತ್ರದ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ. ನನ್ನ ಎಫರ್ಟ್ ನಾನು ಹಾಕಿದ್ದೇನೆ. ಸೋಲು-ಗೆಲುವು ನನ್ನ ಕೈಯಲಿಲ್ಲ. ಜನರು ಕೊಡುವ ಫಲಿತಾಂಶಕ್ಕೆ ತಲೆಬಾಗುತ್ತೇನೆ. ಒಂದಂತೂ ಸತ್ಯ, ಎಲ್ಲೋ ಒಂದು ಕಡೆ, “ಟೈಗರ್’ ನನಗೊಂದು ಹೊಸ ಇಮೇಜ್ ಕಲ್ಪಿಸಿ, ಇಲ್ಲಿ ಗಟ್ಟಿನೆಲೆ ಕಾಣಿಸುತ್ತದೆ ಎಂಬ ಅದಮ್ಯ ವಿಶ್ವಾಸ ನನಗಿದೆ.
ನಾನೀಗ “ಟೈಗರ್’ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಮುಂದಿನ ಸಿನಿ ಜರ್ನಿ ಬಗ್ಗೆ ಯೋಚಿಸಿಲ್ಲ. ಕಳೆದ ಮೂರು ವರ್ಷಗಳಿಂದಲೂ ಹಗಲು-ರಾತ್ರಿ ಇದಕ್ಕಾಗಿಯೇ ಲೈಫ್ ಕಳೆದಿದ್ದೇನೆ. ಸಾಕಷ್ಟು ಕನಸು ಕಂಡಿದ್ದೇನೆ. ಈ ಚಿತ್ರ ರಿಲೀಸ್ ಬಳಿಕ ನಾನು ಬೇರೆ ಸಿನಿಮಾ ಬಗ್ಗೆ ಯೋಚಿಸುತ್ತೇನೆ. ನನಗೂ ಆಸೆಗಳಿವೆ. ಆದರೆ, ಈ “ಟೈಗರ್’ ಹೇಗೆ ಜನರ ಮನಸ್ಸನ್ನು ಗೆಲ್ಲುತ್ತೆ ಎಂಬುದನ್ನು ನೋಡಿ ಆಮೇಲೆ ಮುಂದಿನ ಹೆಜ್ಜೆ ಇಡುತ್ತೇನೆ.
ನನಗೆ ಕಲಾತ್ಮಕ, ಕಮರ್ಷಿಯಲ್ ಸಿನಿಮಾಗಳ ವ್ಯತ್ಯಾಸ ಗೊತ್ತಿಲ್ಲ. ಸಿನಿಮಾ ಅಂದರೆ ಒಂದೇ ಅಷ್ಟೇ. ಈ ಎರಡರಲ್ಲೂ ಎಲ್ಲವೂ ಇರಬೇಕು. ಅದು ಇದ್ದರೆ ಮಾತ್ರ ಸಿನಿಮಾ. ನನಗೆ ಹೊಸ ಪ್ರಯೋಗ ಅಂದರೆ, ಕಥೆಯಲ್ಲಿ ಹೊಸತಿರಬೇಕು. ನಟನೆಯಲ್ಲಿ ಹೊಸತನ್ನು ಕೊಡಬೇಕು ಇದು ನನ್ನ ಪ್ರಕಾರ ಪ್ರಯೋಗ. ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ಒಂದೊಂದು ಸಿನಿಮಾ ಪ್ರಯೋಗವೇ ಆಗಿರುತ್ತೆ.
ವಿಜಯ್ ಭರಮಸಾಗರ