Advertisement
‘ನಾನು, ಗೋಕುಲ್‌ರಾಜ್ ಹಾಗೂ ನಿರ್ದೇಶಕ ಸಂದೀಪ್ ನಾಗಲೀಕರ್ 9 ವರ್ಷದ ಗೆಳೆಯರು. ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಮಾಡಬೇಕು ಎಂಬ ಪ್ಲಾನ್ ಇತ್ತು. ಆರಂಭದಲ್ಲಿ 25 ಲಕ್ಷದಲ್ಲೇ ಸಿನಿಮಾ ಮಾಡಿದರಾಯ್ತು ಎಂಬ ಪ್ಲಾನ್ ಕೂಡ ಇತ್ತು. ಅದೀಗ ಕೋಟಿ ದಾಟಿದೆ. ಆದರೆ, ಎಲ್ಲೂ ರಾಜಿ ಆಗದೆ ಚಿತ್ರ ಮಾಡಿದ್ದು ಖುಷಿಕೊಟ್ಟಿದೆ. ಪಕ್ಕಾ ಪ್ಲಾನಿಂಗ್ ಮಾಡಿಕೊಂಡೇ ಕೆಲಸ ಮಾಡಿದ್ದೇವೆ. ಮೊದಲು ಹಾಡು ಬೇಡ ಅಂದುಕೊಂಡಿದ್ವಿ. ಕಥೆ ಚೆನ್ನಾಗಿ ಬಂದಿದ್ದನ್ನು ನೋಡಿ, ಹಾಡುಗಳಿದ್ದರೆ ಚೆನ್ನಾಗಿರುತ್ತೆ ಅಂತ ಐದು ಹಾಡುಗಳನ್ನು ಮಾಡಲಾಗಿದೆ. ಪುನೀತ್ ರಾಜಕುಮಾರ್ ಒಂದು ಹಾಡು, ಶ್ರೀಮುರಳಿ ಅವರೊಂದು ಹಾಡು ಹಾಡಿರುವುದು ವಿಶೇಷ.
ನಿರ್ದೇಶಕ ಸಂದೀಪ್ ನಾಗಲೀಕರ್ ಅವರಿಗೆ ಇದು ಮೊದಲ ಚಿತ್ರ. ಎಂಜಿನಿಯರ್ ಆಗಿರುವ ಅವರಿಗೆ ಸಿನಿಮಾ ಆಸೆ ಚಿಗುರಿದ್ದರಿಂದ, ಇತ್ತ ಗೆಳೆಯರ ಜತೆಗೂಡಿ ಚಿತ್ರ ಮಾಡಿದ್ದಾರೆ. ‘ಮಹಾನುಭಾವರು’ ಅಂದರೆ, ಎರಡು ರೀತಿ ಆಲೋಚನೆ ಮಾಡಿಕೊಳ್ಳಬಹುದು. ಒಬ್ಬ ನಾಳೆ ಬಗ್ಗೆ ಯೋಚನೆ ಇಲ್ಲದೆ, ಇವತ್ತಿನ ಬಗ್ಗೆ ಮಾತ್ರ ಯೋಚನೆ ಮಾಡಿ, ಬಿಂದಾಸ್ ಆಗಿರಬೇಕು ಅಂತ ಬದುಕ್ತಾ ಇರೋನು. ಇನ್ನೊಬ್ಬ, ಮುಂದಿನ ಭವಿಷ್ಯ ಬಗ್ಗೆ ಯೋಚಿಸೋನು. ಇವರಿಬ್ಬರ ನಡುವಿನ ಕಥೆ ಇಲ್ಲಿ ಹೈಲೈಟ್. ಅರ್ಜುನ್ ಜನ್ಯ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮೊದಲು ನಾನು ಬಿಜಿ ಇದ್ದೇನೆ, 6 ತಿಂಗಳಾಗುತ್ತೆ, ಬೇರೆ ಕಡೆ ಮಾಡಿಸಿಕೊಳ್ಳಿ ಅಂದಿದ್ದರು. ನಾವು ಹಠ ಬಿದ್ದು, ನೀವೇ ಮಾಡಬೇಕು ಅಂದಾಗ, ಚಿತ್ರ ನೋಡಿ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ’ ಎಂದರು ನಿರ್ದೇಶಕರು.
Related Articles
Advertisement
– ವಿಜಯ್ ಭರಮಸಾಗರ