Advertisement

Goa: 4 ವರ್ಷದ ಮಗನ ಹಂತಕಿ ವಿಚಾರಣೆಯಲ್ಲಿ ಹೇಳಿದ್ದೇನು? ಮರಣೋತ್ತರ ಪರೀಕ್ಷೆ ವರದಿ ಬಹಿರಂಗ!

01:05 PM Jan 10, 2024 | Team Udayavani |

ಪಣಜಿ/ಬೆಂಗಳೂರು: ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಮೈಂಡ್‌ ಫುಲ್‌ ಎಐ ಲ್ಯಾಬ್ಸ್‌ ನ ಸಿಇಒ ಸುಚನಾ ಸೇಠ್‌ ಳನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದು, ಏತನ್ಮಧ್ಯೆ ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದೆ.

Advertisement

ಇದನ್ನೂ ಓದಿ:Heart Attack: ಕ್ರಿಕೆಟ್ ಆಡುವ ವೇಳೆ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

ಸರ್ಕಾರಿ ವೈದ್ಯಾಧಿಕಾರಿ ಡಾ.ಕುಮಾರ್‌ ನಾಯ್ಕ್‌, ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಗುವನ್ನು ಸುಮಾರು 36 ಗಂಟೆಗಳ ಮೊದಲೇ ಕೊಲೆ ಮಾಡಲಾಗಿತ್ತು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಮಗುವಿನ ದೇಹದಲ್ಲಿ ಯಾವುದೇ ಗಾಯಗಳಿಲ್ಲ. ಆಕೆ ಮಗುವನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಮಗುವಿನ ದೇಹದ ಮೇಲೆ ಯಾವುದೇ ಗಂಭೀರವಾದ ಗಾಯದ ಗುರುತುಗಳಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು 36 ಗಂಟೆಗಳ ಮೊದಲೇ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬ ಅಂಶ ಬಹಿರಂಗವಾಗಿದೆ.

ಗೋವಾದ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಸುಚನಾ ಸೇಠ್‌ ವಿಚಾರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಯಾವುದೇ ಹರಿತವಾದ ಆಯುಧ ಬಳಸದೇ, ತಲೆದಿಂಬು ಉಪಯೋಗಿಸಿ ಮಗುವನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆತ್ಮಹತ್ಯೆಗೆ ಯತ್ನ:

ಗೋವಾದ ಅಪಾರ್ಟ್‌ ಮೆಂಟ್‌ ನಲ್ಲಿ ಮಗುವನ್ನು ಹತ್ಯೆಗೈದ ನಂತರ ಸುಚನಾ ಸೇಠ್‌ ಆತ್ಮಹತ್ಯೆಗೆ ಯತ್ನಿಸಿದ್ದಳು. ಬ್ಲೇಡ್‌ ಉಪಯೋಗಿಸಿ ಸುಚನಾ ಮಣಿಕಟ್ಟನ್ನು ಕತ್ತರಿಸಿಕೊಳ್ಳಲು ಯತ್ನಿಸಿದ್ದು, ನೆಲದ ಮೇಲೆ ಬಿದ್ದ ರಕ್ತದ ಸ್ಯಾಂಪಲ್‌ ಅನ್ನು ಡಿಎನ್‌ ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ವಿಚಾರಣೆಯಲ್ಲಿ ಸುಚನಾ ಸೇಠ್‌, ತಾನು ಮಗುವನ್ನು ಕೊಂದಿಲ್ಲ ಎಂದು ತಿಳಿಸಿದ್ದು, ಮಗು ಹೇಗೆ ಸಾವನ್ನಪ್ಪಿತ್ತು ಎಂಬುದೇ ತನಗೆ ತಿಳಿದಿಲ್ಲ ಎಂದು ಹೇಳಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗಂಡ-ಹೆಂಡತಿ ನಡುವೆ ವಿರಸ:

ಸುಚನಾ ಸೇಠ್‌ 2010ರಲ್ಲಿ ವೆಂಕಟರಾಮನ್‌ ಎಂಬವರ ಜತೆ ವಿವಾಹವಾಗಿದ್ದಳು. 2019ರಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ಪತಿ ವೆಂಕಟರಾಮನ್‌ ಹೇಳಿಕೆ ಪ್ರಕಾರ, ಮಗುವಿನ ಜನನದ ನಂತರ ಸುಚನಾ ಜಗಳವಾಡುವುದು ಹೆಚ್ಚಳವಾಗಿತ್ತು. ಬಳಿಕ ಇಬ್ಬರು ವಿಚ್ಛೇದಿತರಾಗಿದ್ದು, ಕಳೆದ ಎರಡು ವರ್ಷಗಳಿಂದ ಇಬ್ಬರು ದೂರವಾಗಿದ್ದರು.

ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ಪ್ರಕ್ರಿಯೆಯಲ್ಲಿ ಇರುವಾಗಲೇ, ಪ್ರತಿ ಭಾನುವಾರ ಮಗುವನ್ನು ತಂದೆಯ ವಶಕ್ಕೆ ನೀಡಬೇಕೆಂದು ಫ್ಯಾಮಿಲಿ ಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ ಕಳೆದ ಐದು ವಾರಗಳಿಂದ ಆಕೆ ಮಗುವನ್ನು ನೋಡಲು ಅವಕಾಶ ನೀಡಿರಲಿಲ್ಲ. ಬಹುಶಃ ಆಕೆ ಮಗನ ಜೊತೆ ವೀಕೆಂಡ್‌ ಗಾಗಿ ಗೋವಾಕ್ಕೆ ತೆರಳಿರಬಹುದು ಎಂದು ನಂಬಿದ್ದೇವು ಎಂದು ಪತಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next