ಪಣಜಿ: ತನ್ನ ಸ್ವಂತ ನಾಲ್ಕು ವರ್ಷದ ಮಗನನ್ನು ಹತ್ಯೆಗೈದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಸುಚನಾ ಸೇಠ್ ಪ್ರಕರಣದಲ್ಲಿ ಹೊಸ ಅಪ್ಡೇಟ್ ಹೊರಬಿದ್ದಿದೆ.
ಆರೋಪಿಯ ಮಾನಸಿಕ ಮೌಲ್ಯಮಾಪನ ವರದಿಯು ಆಕೆಯ ಮಾನಸಿಕ ಸ್ಥಿತಿಯು ಸಂಪೂರ್ಣವಾಗಿ ಉತ್ತಮವಾಗಿದೆ ಎಂದು ಬಹಿರಂಗಪಡಿಸಿದೆ. ಆರೋಪಿ ಪರ ವಕೀಲ ಅರುಣ್ ಬ್ರಾಸ್ ಡಿ ಸಾ ಅವರು ಗೋವಾ ಪೊಲೀಸರು ಸಲ್ಲಿಸಿದ ಮಾನಸಿಕ ಫಿಟ್ನೆಸ್ ವರದಿ ತಪ್ಪು ಎಂದು ಪ್ರತಿಪಾದಿಸಿದರು ಮತ್ತು ಆರೋಪಿಯ ಮಾನಸಿಕ ಸ್ಥಿತಿ ಸರಿಯಾಗಿಲ್ಲ ಎಂದು ವಾದಿಸಿದ್ದಾರೆ.
ಆರೋಪಿ ಸುಚನಾ ಸೇಠ್ ಅವರ ವಕೀಲರು ಸೆಠ್ ಅವರ ಮಾನಸಿಕ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲು ಮನೋವೈದ್ಯರ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ನ್ಯಾಯಾಲಯವನ್ನು ಕೋರಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಸೇಠ್ ಸಂಪೂರ್ಣ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎಂದರು. ಮಗುವಿನ ಹತ್ಯೆಗೆ ಸಂಬಂಧಿಸಿದಂತೆ ಸೇಠ್ ಬಂಧನದಲ್ಲಿದ್ದಾರೆ. ಆಕೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಸುಚನಾ ತಂದೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಸಲಹೆಯ ಮೇರೆಗೆ ಮಾನಸಿಕ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಪರೀಕ್ಷೆಯಲ್ಲಿ ಆರೋಪಿ ಸುಚನಾ ಸೇಠ್ ಮಾನಸಿಕ ಸ್ಥಿತಿ ಉತ್ತಮವಾಗಿದೆ ಎಂದು ತಿಳಿದುಬಂದಿದೆ. ಆದರೆ, ಇದೀಗ ಪೊಲೀಸರು ಸಲ್ಲಿಸಿರುವ ವರದಿ ತಪ್ಪು ಎಂದು ವಕೀಲ ಅರುಣ್ ಬ್ರಾಸ್ ಡಿ ಸಾ ಹೇಳಿದ್ದಾರೆ. ಆದರೆ, ಸರಕಾರಿ ವಕೀಲರು ಆ ವಾದವನ್ನು ಅಲ್ಲಗಳೆದಿದ್ದಾರೆ.
ಆರೋಪಿ ಸೇಠ್ ನಾಲ್ಕು ವರ್ಷದ ತನ್ನ ಮಗನೊಂದಿಗೆ ಜನವರಿ 06 ರಂದು ಗೋವಾಕ್ಕೆ ಬಂದಿದ್ದರು. ಮಗುವನ್ನು ಕೊಂದು ಬೆಂಗಳೂರಿಗೆ ಹೋಗುತ್ತಿದ್ದಾಗ ಜನವರಿ 08 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಬಂಧಿಸಲಾಯಿತು. ಅವಳು ಹುಡುಗನ ದೇಹವನ್ನು ಚೀಲದಲ್ಲಿ ತುಂಬಿಕೊಂಡು ಪ್ರಯಾಣ ಬೆಳೆಸಿದ್ದಳು. ಆಕೆ ಗೋವಾದಿಂದ ಬೆಂಗಳೂರಿಗೆ ಪ್ರಯಾಣಿಸಲು ಕ್ಯಾಬ್ ಬುಕ್ ಮಾಡಿದ್ದಳು, ಕ್ಯಾಬ್ ಡ್ರೈವರ್ ಸಹಾಯದಿಂದ ಆರೋಪಿ ಸುಚನಾ ಸೇಠ್‍ಳನ್ನು ಬಂಧಿಸಲು ಸಾಧ್ಯವಾಯಿತು.
ಇದನ್ನೂ ಓದಿ: Gyanvapi, ಮಥುರಾ ಮಸೀದಿ ವಿವಾದ ಬಗೆಹರಿಸಲು ಹೀಗೆ ಮಾಡಿ… ಅಜ್ಮೀರ್ ದರ್ಗಾ ಮುಖ್ಯಸ್ಥರ ಸಲಹೆ