Advertisement
ಆಲ್‌ಬರ್ಟ್ ಐನ್‌ಸ್ಟೈನ್ ಶ್ರೇಷ್ಠ ಮಾನವತಾವಾದಿಯಾದುದರೆ ಹಿನ್ನೆಲೆಗಳೇನು? ಭಾವುಕತೆಗಳು ಅವನ ಜೀವನದ ಅತಿ ಸೂಕ್ಷ್ಮ ಶಕ್ತಿ ಹಾಗೂ ಮಿತಿ ಎರಡೂ ಆಗಿತ್ತೇ? ಕೌಟುಂಬಿಕ ವಿಚಾರಗಳಲ್ಲಿನ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದನೇ? ಇತ್ಯಾದಿ ಎಲ್ಲ ಐನ್‌ಸ್ಟೈನ್ ಪಚ್ಛೆ ಹರಳನ್ನು ಹಾಕಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತಿದ್ದವೇ? ಹಾಗೆಯೇ ವೈವಾಹಿಕ ಜೀವನದ ಸಂದರ್ಭ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಅದೇಕೆ ಸೂಕ್ಷ್ಮ ಒಂದಕ್ಕೆ ಕಟ್ಟಿರಿಸಿ ಗೊಂದಲ ಮೂಡಿಸಿತು? ಕ್ರಾಂತಿಕಾರಕ ಬುದ್ಧಿ ಅನಪೇಕ್ಷಿತ ಪ್ರತಿರೋಧಗಳನ್ನುಂಟು ಮಾಡುವ ವಿಷಮ ಶಕ್ತಿಗಳನ್ನು ಎದುರು ಹಾಕಿಕೊಂಡೆ ತೀರುವ ಛಲ ಇತ್ಯಾದಿ ಉತ್ತಮವಾದ ಹವಳವನ್ನು ಧರಿಸಿದ್ದಲ್ಲಿ ಇನ್ನಿಷ್ಟು ಯಶಸ್ಸು ಸಂಪಾದಿಸಿಕೊಡುವಲ್ಲಿ ಸ್ವಕೀಯರೇ ಶತೃಗಳಾಗಿ ಪರಿವರ್ತನೆಗೊಳ್ಳುವುದನ್ನು ನಿಯಂತ್ರಿಸುವಲ್ಲಿ ಸಫಲವಾಗುತ್ತಿತ್ತೇ? ಸತ್ಯ. ಪ್ರತಿ ವ್ಯಕ್ತಿಯ ಜೀವನ ರಸಾಯನ. ಪಂಚಭೂತಾತ್ಮಕವಾದದ್ದು. ಈ ಪಂಚಭೂತಾತ್ಮಕವಾದದ್ದು ಜೀನ್‌ಗಳಿಂದ ಒದಗಿ ಬರುತ್ತದೆ. ಪಿತೃ ಪಿತಾಮಹರ ಜೀವ ವಾಹಿನಿ ತಲೆಮಾರಿನಿಂದ ತಲೆಮಾರಿನವರೆಗೆ ಸಾಗಿ ಬರುತ್ತದೆ. ಕೌತುಕಮಯವಾಗಿದೆ ಜೀವನ. ಆಹಾರವಾಗಿ ಬಂದ ಮೇಕೆ ಮರಿಯನ್ನು ಸಿಂಹ ಕೊಲ್ಲುವುದಿಲ್ಲ. ಕೊಲ್ಲಲು ಬಿಡುವುದೂ ಇಲ್ಲ. ಇದು ಆಶ್ಚರ್ಯ. ಆದರೆ ಸತ್ಯ. ಜನ್ಮ ಜನ್ಮಾಂತರಗಳ ಯಾವುದೋ ವಾಸನಾ ಫಲ. ಸಿಂಹಕ್ಕೆ ಕನಿಕರ. ಇನ್ನು ಮನುಷ್ಯರ ಪಾಡೇನು ಹಾಗಾದರೆ?
Related Articles
Advertisement
ಮುತ್ತುಗಳು ಚಿಪ್ಪಿನ ಕಲ್ಲಿನಲ್ಲಿ ಹರಳುಗಟ್ಟಬೇಕು. ಮುತ್ತುಗಳು ಸೃಷ್ಟಿಯಾಗುವ ವಿಧಾನ ಬಹು ಶಿಷ್ಠವಾದದ್ದು. ಚಂದ್ರನ ಹಳದಿ ಬಣ್ಣ ಪೃಥ್ವಿಯಿಂದ ನಮಗೆ ಹೇಗೆ ಗೋಚರಿಸುತ್ತದೋ ಅಂಥ ಬಣ್ಣದಿಂದ ಕೂಡಿದ ಸಂಪನ್ನ ಮುತ್ತುಗಳು ಈ ಚಿಕ್ಕ ಚಿಪ್ಪಿನ ಪ್ರಾಣೀಯ ಮೂಲಕ ಸೃಷ್ಟಿಗೊಳ್ಳುವಂಥದ್ದು. ಮುತ್ತುಗಳೊಳಗೂ ಬಹಳೇ ರೀತಿಯ ಮುತ್ತುಗಳಿವೆ. ಅದೇ ಜಯ್ ಸ್ಟರ್ ಜನ್ಯ ಮುತ್ತುಗಳು ಉತ್ತಮವಾದದ್ದು. ಇತ್ತೀಚೆಗೆ ಕಲ್ಚರ್ಡ್ ಮುತ್ತುಗಳು ಕೃತಕವಾಗಿ ಜಯ್‌ಸ್ಟರ್‌ನಲ್ಲಿ ಘನೀರ್ಭವಿಸಿದ ಹಾಗೆ ಬರುತ್ತದೆ. ಇದು ದಧಿ ಶಂಖ ತುಷಾರಾಭಂ ಆದ ಚಂದ್ರನನ್ನು ಸೂಕ್ತವಾಗಿ ಸಂಭ್ರಮಿಸುವಂಥದ್ದಲ್ಲ. ಮುತ್ತುಗಳ ಸೃಷ್ಟಿಯ ಬಗೆಗೆ ಅನೇಕಾನೇಕ ನಂಬುಗೆಗಳು ಕಥೆಯ ಪದರುಗಳಂತೆ ಅನಿಸುವ ಕವಿ ಸಮಯಗಳೂ ಉಂಟು. ಆದರೆ ಚಿಪ್ಪಿನ ಮುತ್ತು ಒಂದು ತೂಕ ಮೇಲೆಯೇ. ಆದರೆ ಚಂದ್ರನ ಗಟ್ಟಿತನಕ್ಕೆ ಹೇಗೆ ಎಷ್ಟು ಬೇಕೆಂಬುದನ್ನು ಅರಿತೇ ಮುತ್ತನ್ನು ಬೆಳ್ಳಿಯಲ್ಲಿ ಕೂಡ್ರಿಸಿ ತೊಡಬೇಕು.
ನಮ್ಮ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಮುತ್ತು ಒಳಿತಾಗಿತ್ತು. ಆದರೆ ಅವರು ಧರಿಸಿದ್ದರೋ ಇಲ್ಲವೋ ಎಂಬುದು ತಿಳಿದಿಲ್ಲ. ಅವರ ಕುರಿತಾದ ಜೀವನ ಚರಿತ್ರೆಯಲ್ಲಿ ಈ ಬಗೆಗೆ ಉಲ್ಲೇಖಗಳಿಲ್ಲ. ರುದ್ರಾûಾಮಣಿಯನ್ನು ಅವರು ಧರಿಸುತ್ತಿದ್ದದ್ದು ಕೆಲವು ಚಿತ್ರಗಳಲ್ಲಿ ಕಂಡುಬರುತ್ತಿತ್ತು. ದಾಡ್ಯìತೆ ಇದ್ದರೂ ಗೊಂದಲಗಳು ಮಕ್ಕಳ ಯೋಗಕ್ಷೇಮದ ವಿಚಾರದಲ್ಲಿ ಬಿಕ್ಕಟ್ಟುಗಳು, ತೀವ್ರತರವಾದ ಅಂಜುಬುರುಕುತನ, ಇನ್ನಿಲ್ಲದ ನಾಚಿಕೆ ಇತ್ಯಾದಿ ಸಂಕಟಗಳು ಚಂದ್ರನ ಮೂಲಕ ನಿಯಂತ್ರಣಕ್ಕೊಳಬೇಕಾದಾಗ ಮುತ್ತು ಅನಿವಾರ್ಯ. ಇಂಗ್ಲೆಂಡಿನ ಪ್ರಿನ್ಸ್ ಚಾರ್ಲ್ಸ್‌ಎದುರಿಸಿದ ಬಿಕ್ಕಟ್ಟುಗಳ ನಿವಾರಣೆಗೆ ಮುತ್ತು ಅವಶ್ಯವಾಗಿತ್ತು. ಲಾಲೂ ಪ್ರಸಾದ್ ಜಾತಕದಲ್ಲಿ ಚಂದ್ರ ಅದ್ಭುತವಾಗಿದ್ದರೂ ಮುತ್ತನ್ನು ಧರಿಸಿದರೇ ತೊಳಲಾಟಗಳೇ ಅಧಿಕವಾಗುತ್ತದೆ. ಶನೈಶ್ಚರ ವ್ಯತಿರಿಕ್ತವಾಗಿ ವ್ಯತಿರಿಕ್ತ ಸ್ಥಿತಿ ತರುತ್ತಾನೆ. ಈಗ ಅವರಿಗೆ ಶನಿಕಾಟವಿದೆ ಗೆಲುವಿನ ಅಲೆಯಲ್ಲಿದ್ದರೂ ಅಧಿಕಾರ ನಿತೀಶ್ ಬಳಿ. ಒಂದು ಕಾಲದ ಕಡು ವಿರೋಧಿ ಆದರೆ ವರ್ತಮಾನ ಕಡುವಿರೋಧಿಯನ್ನೇ ಪರಮೋನ್ನತ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳ್ಳಿರಿಸುವ ಕೈಂಕರ್ಯವನ್ನು ಲಾಲೂ ಪ್ರಸಾದ್ ಪಾಲಿಗೆ ತಂದೊದಗಿಸಿದೆ. ಶನೈಶ್ಚರನ ಪ್ರಭಾವ ಹಗರಣಗಳ ಹೊರೆ ಇದ್ದಾಗಲೂ ಚಂದ್ರ ಅವರನ್ನು ಕೇಂದ್ರ ರೈಲ್ವೇ ಸಚಿವರನ್ನಾಗಿಸಿದ. ಆದರೆ ರಾಹುಭಕ್ತಿ ಬಂದಾಗ ಈಗ ಶನಿಕಾಟದ ತನಕ ಲಾಲು ಹಿಂದೆ ಬಿದ್ದಿದ್ದರು. ಆದರೆ ಕುಜದಶಾ ಬರುತ್ತಿದ್ದಂತೆ ಮತ್ತೆ ಮುಖ್ಯರಾಗಿದ್ದರೂ ಜೊತೆಗಿರುವ ಶುಕ್ರ ಪೂರ್ಣಪ್ರಮಾಣದ ಚೈತನ್ಯ ಒದಗಿಸುವುದು ಕಷ್ಟ. ಮುತ್ತನ್ನು ಧರಿಸಲೇ ಬಾರದು. ಮುತ್ತನ್ನು ಧರಿಸಿದರೆ ಶನೈಶ್ಚರ ಹಾರಿ ಹಿಡಿಯುವ ವ್ಯಾಘ್ರನಾಗುತ್ತಾನೆ.
ಹವಳ
ಶುಕ್ರನ ಭಾದೆಯ ಕಾರಣದಿಂದ ಒಳ್ಳೆಯವನಾಗಬೇಕಾದ ಕುಜನು ಮದುವೆಯಾದ ಜೀವನದಲ್ಲಿ ಹುಳಿ ಹಿಂಡುತ್ತಾನೆ. ಸ್ವಮೋಹವೇ ಬಾಧೆಯಾಗುವ ಅನಾವಶ್ಯಕ ಕೋಪ ಹಿಂದೆ ಮುಂದೆ ನೋಡದೆ ಮುಂದಕ್ಕೆ ಧಾವಿಸುವ ಇತ್ಯಾದಿ ಪ್ರಮಾದಗಳನ್ನು ಸೃಷ್ಟಿಸುವ ಜನರಿಗೆ ಹವಳ ಬೇಕು. ಆದರೆ ಜಾತಕ ಕುಂಡಲಿಯ ಸ್ವರೂಪ ಗಮನಿಸದೆ ಮುಂದರಿದು ತೊಡಲು ಮುಂದಾಗಬಾರದು. ತಾಮ್ರದಲ್ಲಿ ಧರಿಸಬೇಕು. ಭಾರತದ ಪ್ರಸ್ತುತ ವರ್ತಮಾನವನ್ನು ಸಾಡೆಸಾತಿಯ ವಿಫುಲ ತೊಂದರೆಗಳನ್ನು ಕಳಕೊಳ್ಳುತ್ತ ಧಾಡ್ಯìತೆಗಾಗಿ ನಮ್ಮ ಪ್ರಧಾನಿ ಮೋದಿ ಹವಳ ಧರಿಸುವುದು ಉತ್ತಮ. ನಮ್ಮವರೇ ಆದ ಗಿರೀಶ್ ಕಾರ್ನಾಡ್ ಹವಳ ಧರಿಸುವುದು ಸೂಕ್ತ. ಶಕ್ತಿ ಮತ್ತು ಮಿತಿ ಎರಡನ್ನೂ ಹೊಂದಿರುವ ಶನೈಶ್ಚರನ ಪ್ರಭಾವ ತಗ್ಗಿಸಲು ಹವಳ ನೆರವಾಗುತ್ತಿತ್ತು. ಏರಬೇಕಾದ ಎತ್ತರ ಇನ್ನೂ ಹೆಚ್ಚೇ ಒದಗಿಬರುತ್ತಿತ್ತು. ನಮ್ಮವರೇ ಆದ ಮಾಜಿ ಪ್ರಧಾನಿ ದೇವೇಗೌಡರು ಹವಳ ತೊಡದಿರುವುದೇ ಸೂಕ್ತ. ತೊಟ್ಟರೆ ಯಾತನಾಮಯವಾಗುವ ರಾಹುದೋಷ ನಿಶ್ಚಿತ.
ಒಟ್ಟಿನಲ್ಲಿ ಹವಳ ಬಲು ಬೆಲೆಬಾಳುವ ರತ್ನಗಳಲ್ಲಿ ಒಂದಲ್ಲವಾದರೂ ಇದಕ್ಕೆ ಇದರದೇ ಆದ ಸಕಾರಾತ್ಮಕವಾದ ಬಲವಾದ ಮಿಡಿತಗಳು ಸಂವೇದನೆಗಳನ್ನುಂಟುಮಾಡುವ ಶಕ್ತಿ ಇದೆ. ಬಹುತೇಕವಾಗಿ ಕ್ಯಾಲಿÒಯಂ ಸಂಯುಕ್ತ ಘಟಕಗಳು ಹವಳದಲ್ಲಿ ಅಡಕವಾಗಿದ್ದು ಇವುಗಳನ್ನು ಸ್ರವಿಸಿ ಕಟ್ಟುವ ಮೃದ್ವಂಗಿಗಳುಂಟು. ಭಾರತದಲ್ಲೂ ವಿಶಿಷ್ಟವಾದ ಹವಳದ ನಿಕ್ಷೇಪರಾಶಿಗಳು ಪ್ರಸಿದ್ಧವಾಗಿಯೇ ಇತ್ತಾದರೂ ಈಗ ಭಾರತದಲ್ಲಿರುವುದು ಅಪರೂಪ. ನಮ್ಮ ಕರ್ನಾಟಕದಲ್ಲೇ ಭಟ್ಕಳದ ಸಮೀಪ ಮಾವಿನ ಕುರ್ವೆ ದ್ವೀಪ ಸಮೂಹದಲ್ಲಿ ಹವಳಗಳಿವೆ ಎಂಬುದನ್ನು ಕೇಳಿದ್ದೇವೆ.
ಮುಂದಿನ ವಾರ ಇನ್ನುಳಿದ ರತ್ನಗಳ ಬಗೆಗೆ ಚರ್ಚೆಗೆ ಪುಷ್ಟಿ ಕೊಡುವ ಟಿಪ್ಪಣಿಗಳನ್ನು ವಿಶ್ಲೇಸೋಣ. ನವರತ್ನಗಳು ಬಿಡಿಬಿಡಿಯಾಗಿ ಧರಿಸಲು ಯೋಗ್ಯ ಆದರೆ ಅವಸರ ಮಾಡದೆ ತಿಳಿದು ಕೂಲಂಕಷವಾಗಿ ಅರಿತುಕೊಂಡೇ ಧರಿಸುವ ವಿಚಾರ ಕೈಗೊಳ್ಳಬೇಕು. ರತ್ನಗಳನ್ನು ಧರಿಸಿ ಗೆದ್ದವರುಂಟು. ಕೊಹಿನೂರ್ ಅಂತ ರತ್ನಗಳು ಸಾಮ್ರಾಜ್ಯ ಉರುಳಿಸಿದ್ದೂ ಉಂಟು.