ಜೈಪುರ: ನಾನ್ ಸ್ಟ್ರೈಕ್ ಭಾಗದಲ್ಲಿರುವ ಬ್ಯಾಟ್ಸ್ ಮನ್ ಬೌಲರ್ ಚೆಂಡನ್ನು ಎಸೆಯುವ ಮೊದಲೇ ತನ್ನ ಕ್ರೀಸ್ ಅನ್ನು ಬಿಟ್ಟಿದ್ದರೆ ಆ ಬ್ಯಾಟ್ಸ್ ಮನ್ ಅನ್ನು ಬೌಲರ್ ರನೌಟ್ ಮಾಡಬಹುದಾಗಿರುವ
‘ಮಂಕಡ್’ ವಿಧಾನ ಈ ಬಾರಿಯ ಐಪಿಎಲ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಇದಕ್ಕೆಲ್ಲಾ ಮೂಲ ಸೋಮವಾರ ರಾತ್ರಿ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ ನಡುವಿನ ಮೊದಲ ಮುಖಾಮುಖಿ ಪಂದ್ಯದಲ್ಲಿ ಚೇಸಿಂಗ್ ಮಾಡುತ್ತಿದ್ದ ರಾಜಸ್ಥಾನ ರಾಯಲ್ ತಂಡದ ಆಟಗಾರ ಇಂಗ್ಲೆಂಡಿನ
ಜಾಸ್ ಬಟ್ಲರ್ ಅವರನ್ನು ‘ಮಂಕಡ್’ ರೀತಿಯಲ್ಲಿ ರನೌಟ್ ಮಾಡಿದ್ದು. ಈ ಹಂತದಲ್ಲಿ 69 ರನ್ ಗಳಿಸಿ ಉತ್ತಮ ಆಟವಾಡುತ್ತಿದ್ದ ಬಟ್ಲರ್ ಈ ಅನಿರೀಕ್ಷಿತ ಘಟನೆಯಿಂದ ವಿಚಲಿತಗೊಂಡರು ಮಾತ್ರವಲ್ಲದೇ ಮೈದಾನದಿಂದ ಪೆವಿಲಿಯನ್ ಗೆ ಸಾಗುವವರೆಗೆ ತಮ್ಮ ಅಸಮಧಾನವನ್ನು ಹೊರಹಾಕುತ್ತಲೇ ಇದ್ದಿದ್ದು ವಿಶೇಷವಾಗಿತ್ತು.
ಘಟನೆಯ ಕುರಿತಾಗಿ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಕಿಂಗ್ಸ್ ಇಲೆವನ್ ಕಪ್ತಾನ ಮತ್ತು ಬೌಲರ್ ರವಿಚಂದ್ರನ್ ಅಶ್ವಿನ್ ಅವರು,
‘ಈ ಘಟನೆಯ ಕುರಿತಾಗಿ ನನಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ’ ಎಂದಿದ್ದಾರೆ.
‘ಆ ಎಸೆತಕ್ಕಾಗಿ ನನ್ನ ಕೈಯಿಂದ ಚೆಂಡು ಇನ್ನೂ ಹೊರಬಿದ್ದಿರಲಿಲ್ಲ, ಅಷ್ಟರಲ್ಲೇ ಬಟ್ಲರ್ ಕ್ರೀಸ್ ಬಿಟ್ಟಿರುವುದನ್ನು ನಾನು ಗಮನಿಸಿದೆ ಮತ್ತು ಪಂದ್ಯದ ನಿಯಮಗಳಿಗೆ ಅನುಸಾರವಾಗಿಯೇ ನಾನು ನನ್ನ ಕೆಲಸನ್ನು ಮಾಡಿದ್ದೇನೆ. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ಬ್ಯಾಟ್ಸ್ ಮನ್ ಗಳು ಈ ಎಲ್ಲಾ ವಿಷಯಗಳ ಕುರಿತಾಗಿ ಜಾಗರೂಕರಾಗಿರಬೇಕಾಗಿರುತ್ತದೆ’ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಬಟ್ಲರ್ ಅವರು ‘ಮಂಕಡ್’ ವಿಧಾನದಲ್ಲಿ ಔಟಾಗುವ ಸಮಯದಲ್ಲಿ 43 ಎಸೆತಗಳಲ್ಲಿ 69 ರನ್ನುಗಳನ್ನು ಗಳಿಸಿ ಭರ್ಜರಿಯಾಗಿ ಆಟವಾಡುತ್ತಿದ್ದರು. ಮತ್ತು ಅವರು ಕ್ರೀಸಿನಲಿದ್ದಷ್ಟು ಹೊತ್ತು ಕಿಂಗ್ಸ್ ಇಲೆವನ್ ತಂಡದ ಗೆಲುವು ಕಠಿಣವಾಗಿತ್ತು. ಆದರೆ ಬಟ್ಲರ್ ಔಟಾಗುವುದರೊಂದಿಗೆ ಪಂದ್ಯದ ಚಿತ್ರಣವೇ ಬದಲಾಯಿತು ಮತ್ತು ಅಂತಿಮವಾಗಿ ಕಿಂಗ್ಸ್ ಇಲವನ್ ತಂಡ 14 ರನ್ನುಗಳೊಂದಿಗೆ ವಿಜಯಿಯಾಯಿತು.
ಆದರೆ ಮಂಕಡ್ ಮಾದರಿಯಲ್ಲಿ ಬಟ್ಲರ್ ಅವರನ್ನು ಔಟ್ ಮಾಡಿರುವ ಅಶ್ವಿನ್ ವರ್ತನೆಗೆ ಸಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹೆಚ್ಚಿನ ವಿದೇಶಿ ಕ್ರಿಕೆಟಿಗರು ಅಶ್ವಿನ್ ಅವರ ಈ ಕ್ರಮಕ್ಕೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಈ ನಿಯಮದ ಕುರಿತಾಗಿ ಕ್ರಿಕೆಟ್ ಧಿಗ್ಗಜ ಸರ್ ಡಾನ್ ಬ್ರಾಡ್ ಮನ್ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವ ಸಾಲುಗಳು ಹೀಗಿವೆ…
Views of Sir Don Bradman on
#Mankading #Ashwin #Butler #RRvKXIP #KXIPvRR pic.twitter.com/AFevLXK5P0