Advertisement
ಮುಂಗಾರಿನಲ್ಲಿ ಮಳೆ ಬಿದ್ದಾಗ ಚಳಿ ಎಂದೆನಿಸಿದರೂ ಮಳೆ ಒಂದೆರಡು ದಿನ ನಿಂತರೆ ಬಿಸಿಲು ಇಲ್ಲದಿದ್ದರೂ ಸೆಖೆಯ ಅನುಭವ ಆಗುತ್ತದೆ. ಹೀಗಾಗಲು ಮುಖ್ಯ ಕಾರಣ ವಾತಾವರಣದಲ್ಲಿ ಅಧಿಕ ತೇವಾಂಶ ಇರುವುದೇ ಆಗಿರುತ್ತದೆ. ಹೇಳಿಕೇಳಿ ಮುಂಗಾರು ಬೇಸಿಗೆಯ ಮಳೆ ಆದುದರಿಂದ ನಾವು ಈ ಅವಧಿಯಲ್ಲಿ ಕಿಟಕಿಗಳನ್ನು ಸಾಕಷ್ಟು ತೆರೆದಿಟ್ಟುಕೊಳ್ಳುವುದೂ ಅತ್ಯಗತ್ಯ. ಹಾಗಾಗಿ, ಮಳೆಯನ್ನು ಮನೆಯೊಳಗೆ ಬಾರದಂತೆ ತಡೆಯುತ್ತಲೇ ಸಾಕಷ್ಟು ತಂಪಾದ ಹೊರಗಾಳಿ ಮನೆಯನ್ನು ಪ್ರವೇಶಿಸುವಂತೆ ನಮ್ಮ ಮನೆಯ ಕಿಟಕಿ ಬಾಗಿಲುಗಳಿಗೆ ಸೂಕ್ತ ಸಜಾj ಹಾಗೂ ಇತರೆ ಸಾಧನಗಳನ್ನು ಬಳಸುವುದು ಅಗತ್ಯ.
ಕಿಟಕಿಗಳ ಅಗಲ ಹೆಚ್ಚಾದಷ್ಟೂ ಮಳೆ ಒಳನುಸುಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ, ಎತ್ತರ ಅಂದರೆ ಲಿಂಟಲ್ ಮಟ್ಟದಿಂದ ಫ್ಲೋರಿಂಗ್ ಮಟ್ಟ ಇಲ್ಲವೇ ಸಿಲ್ ಅಂದರೆ ಸುಮಾರು ಎರಡೂವರೆ ಅಡಿ ಎತ್ತರದಿಂದ ಸೂರಿನ ಮಟ್ಟದವರೆಗೂ ಕಿಟಕಿಗಳಿದ್ದರೆ, ಮಳೆ ಒಳನುಸುಳಲು ಹೆಚ್ಚು ಆಸ್ಪದ ಇರುತ್ತದೆ. ಇಂಥ ವಿನ್ಯಾಸ ನಮ್ಮ ಮನೆಗೆ ಇದ್ದಾಗ ನಾವು ಮಳೆ ಬೀಳುವ ದಿಕ್ಕು ಹಾಗೂ ಅವುಗಳ ಕೋನ ನೋಡಿಕೊಂಡು ಸಜಾj ಹಾಗೂ ಕಿಟಕಿಗಳ ಅಕ್ಕ ಪಕ್ಕ ನೀಡುವ ಫೀನ್ – ಹಲಗೆಗಳನ್ನು ವಿನ್ಯಾಸ ಮಾಡಬೇಕಾಗುತ್ತದೆ. ಮಳೆ ಸಾಮಾನ್ಯವಾಗಿ ಮೇಲಿನಿಂದಲೇ ಹೆಚ್ಚು ಬೀಳುವುದರಿಂದ, ಕಿಟಕಿಗಳಿಗೆ ಸಜಾjಗಳನ್ನು ಅಡ್ಡವಾಗಿ ಲಿಂಟಲ್ ಮಟ್ಟದಲ್ಲಿ ಹಾಕಬೇಕಾಗುತ್ತದೆ. ಆದರೆ ನಿಮ್ಮ ಮನೆಯ ಕಿಟಕಿಗೆ ಜೋರು ಗಾಳಿಯ ಜೊತೆಗೆ, ಮಳೆಯೂ ಒಂದು ಕೋನದಿಂದ ಬೀಳುತ್ತದೆ ಎಂದು ಲೆಕ್ಕಾಚಾರ ಹೇಳಿದರೆ, ಆಗ ನೀವು ಅನಿವಾರ್ಯವಾಗಿ ಫಿನ್ ಮಾದರಿಯ ನಿಲುವು ಸಜಾjಗಳನ್ನು ಅಕ್ಕ ಪಕ್ಕದಲ್ಲಿ ಅಳವಡಿಸಿ, ರಕ್ಷಣೆ ಪಡೆದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಲ್ಲಿರುವ ಕಿಟಕಿಗಳಿಗೆ ಮುಂಗಾರಿನ ಅವಧಿಯಲ್ಲಿ ಮಳೆನೀರು ಒಂದು ಕೋನದಿಂದ ಬೀಳುವುದರಿಂದ. ಕಿಟಕಿಗಳ ಅಕ್ಕಪಕ್ಕದಲ್ಲಿ ನಿಲುವು ಫಿನ್ ಅಥವಾ ಸಜಾjಗಳನ್ನು ವಿನ್ಯಾಸ ಮಾಡುವುದು ಉತ್ತಮ. ಮಾಮೂಲಿ ಸಜಾjಗಳನ್ನು ಯಥಾಪ್ರಕಾರ ಕಿಟಕಿಗಳ ಮೇಲೆ ವಿನ್ಯಾಸ ಮಾಡಿದ ನಂತರ ಅಕ್ಕಪಕ್ಕದಿಂದ ಬೀಳುವ ಮಳೆಯನ್ನೂ ಪರಿಗಣಿಸಿ ವಿನ್ಯಾಸ ಮಾಡುವುದು ಅಗತ್ಯ. ಹಿಂಗಾರಿನ ಅವಧಿಯಲ್ಲಿ, ಮಳೆ ಸಾಮಾನ್ಯವಾಗಿ ಉತ್ತರ ಹಾಗೂ ಪೂರ್ವದಿಂದ ಬೀಳುತ್ತದೆ. ಹಾಗಾಗಿ, ಈ ದಿಕ್ಕಿನಲ್ಲಿರುವ ಕಿಟಕಿ ಬಾಗಿಲುಗಳಿಗೆ ಸೂಕ್ತ ಸಜಾjಗಳನ್ನು ಅಡ್ಡಡ್ಡಲಾಗಿ ಫೀನ್‌ಗಳನ್ನು ಅಕ್ಕಪಕ್ಕದಲ್ಲೂ ವಿನ್ಯಾಸ ಮಾಡುವುದು ಸೂಕ್ತ.
Related Articles
ಮನೆಯನ್ನು ಅಲಂಕರಿಸಲು ಬಳಸಬಹುದಾದ ಬಹು ಉಪಯೋಗಿ ಸ್ಥಳ ಎಂದರೆ ಅದು ಕಿಟಕಿ ಹಾಗೂ ಬಾಗಿಲೇ ಆಗಿರುತ್ತದೆ. ಕಿಟಕಿ ಬಾಗಿಲುಗಳನ್ನು ಸುಂದರಗೊಳಿಸಲು ಅವಕ್ಕೆ ಅಳವಡಿಸಬಹುದಾದ ಸಜಾjಗಳನ್ನು ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸಿ, ಮನೆಯ ಅಂದವನ್ನೂ ಹೆಚ್ಚಿಸಬಹುದು. ಮಾಮೂಲಿ ಚಪ್ಪಟೆ ಸಜಾjಗಳಿಂದ ಹಿಡಿದು ಸ್ಲೋಪಿಂಗ್ – ಇಳಿಜಾರು, ಆರ್ಚ್- ಕಮಾನು, ಕಾರ್ಬೆಲ್ -ಮೆಟ್ಟಿಲು ಮೆಟ್ಟಿಲಾಗಿ ಹೀಗೆ, ಮುಂತಾದ ವಿನ್ಯಾಸಗಳ ಮಾದರಿಯ ಪಟ್ಟಿ ದೊಡ್ಡದೇ ಇದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ, ( ಸೂರ್ಯನ ನೇರ ಕಿರಣಗಳಿಂದ ತೊಂದರೆ ಅಲ್ಲ ಅಂದರೆ) ಗಾಜಿನ ಸಜಾjಗಳೂ ಜನಪ್ರಿಯವಾಗಿವೆ. ಟಫನ್x – ಗಟ್ಟಿಗೊಳಿಸಿದ ಗಾಜು ಸುಲಭದಲ್ಲಿ ಒಡೆಯದ ಕಾರಣ ಎಲ್ಲೆಲ್ಲಿ ಬೆಳಕು ಕಡಿಮೆ ಆಗಬಾರದು. ಆದರೆ, ಮಳೆಯ ಭರಾಟೆ ತಗ್ಗಬೇಕು ಎಂದಿರುತ್ತದೋ ಅಲ್ಲೆಲ್ಲ ಗಾಜಿನ ಸಜಾjಗಳನ್ನು ಧಾರಾಳವಾಗಿ ಬಳಸಬಹುದು.
Advertisement
ಸಜಾj ವಿನ್ಯಾಸದಲ್ಲಿ ಎಚ್ಚರಮುಖ್ಯವಾಗಿ, ಮಳೆ ನೀರಿಗೆ ತಡೆಯೊಡ್ಡಿದ ನಂತರ ಅದು ಸರಾಗವಾಗಿ ಹರಿದುಹೋಗುವಂತೆ ಸೂಕ್ತ ಇಳಿಜಾರು ನೀಡುವುದು ಅತ್ಯಗತ್ಯ. ಸಾಮಾನ್ಯವಾಗಿ, ಮೂರು ಅಡಿ ಸಜಾjಗೆ ಒಂದು ಇಂಚಿನಷ್ಟು ಇಳಿಜಾರು ನೀಡಿದರೆ ಸಾಕಷ್ಟು ಆಗುತ್ತದೆ. ದೊಡ್ಡ ಸಜಾjಗಳಾದರೆ 1:60 ಲೆಕ್ಕದಲ್ಲಿ ಇಳಿಜಾರು ನೀಡಬೇಕಾಗುತ್ತದೆ. (ಐದು ಅಡಿಗೆ ಒಂದು ಇಂಚು ಇಳಿಜಾರು) ಸಜಾjಗಳು ತೀರಾ ಉದ್ದ, ಅಂದರೆ ಐದು ಅಡಿ ಉದ್ದದ ಕಿಟಕಿ ಇದ್ದರೆ, ಎರಡೂ ಕಡೆಗೂ ಇಳಿಜಾರನ್ನು ನೀಡಬಹುದು. ಸಾಮಾನ್ಯವಾಗಿ ಮಳೆ ನೀರು ಕಿಟಕಿಗಳ ಮುಂದೆ ಬೀಳುವಂತೆ ಇಳಿಜಾರನ್ನು ನೀಡಬಾರದು. ಹಾಗೇನಾದರೂ ನೀಡಿ, ಮಳೆ ನೀರು ಕಿಟಕಿಯ ಮುಂದೆಯೇ ಬಿದ್ದರೆ, ಗಾಳಿ ಜೊರಾಗಿ ಬೀಸಿದಾಗ ನೀರೆಲ್ಲ ಇರಚಲಾಗಿ ನಮ್ಮ ಮನೆಯನ್ನೇ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಯಾವುದೇ ಸಂದಿಯಲ್ಲಿ ನೀರು ಒಳ ನುಸುಳುವ ಸಾಧ್ಯತೆ ಇರುತ್ತದೆ. ಆದುದರಿಂದ ಸಜಾj ಹಾಗೂ ಗೋಡೆ ಸೇರುವ ಕಡೆ ಕಡ್ಡಾಯವಾಗಿ ನೀರು ನಿರೋಧಕ ರಾಸಾಯನಿಕ ಬಳಸಿ “ಕೊಳವು’ ಅನ್ನು ಮಾಡಬೇಕು. ( ಸಜಾj ಗೋಡೆ ಸೇರುವ ಕಡೆಯಲ್ಲಿ ಹೆಚ್ಚುವರಿ ಸಿಮೆಂಟ್ ಗಾರೆ ಹಾಕಿ ಅರ್ಧ ಚಂದ್ರಾಕೃತಿಯಲ್ಲಿ ತಿರುಗಿಸುವುದು ) ಹಾಗೆಯೇ ಮಳೆ ನೀರು ಸರಾಗಿವಾಗಿ ಹರಿದುಹೋಗಲು ನೀಡುವ ಇಳಿಜಾರಿಗೂ ವಾಟರ್ ಪೂ›ಫ್ ಮಿಶ್ರಣವನ್ನು ಬೆರೆಸಲು ಮರೆಯಬಾರದು. ಸಜಾj ವಿನ್ಯಾಸಗಳು
ಕೆಲವೊಮ್ಮೆ ಗಾಳಿಗೆಂದು ದೊಡ್ಡದಾದ ಕಿಟಕಿಗಳನ್ನು ಇಟ್ಟಬಳಿಕ ಬೆಳಕು ಹೆಚ್ಚಾಯಿತು ಇಲ್ಲವೇ ಮಳೆಯಿಂದ ರಕ್ಷಣೆ ಪಡೆಯುವುದು ಅನಿವಾರ್ಯ ಎಂದಾದರೆ, ಮರದ ಇಲ್ಲವೇ ಉಕ್ಕಿನ ಸಣ್ಣ ಪಟ್ಟಿಗಳನ್ನು ಅಲಂಕಾರಿಕ ಎನ್ನುವ ರೀತಿಯಲ್ಲಿ ಕೆಳಗೆ ಇಳಿಬಿಡಬಹುದು. ಈ ಹಿಂದೆ ದೊಡ್ಡ ಬಂಗಲೆಗಳ ಕಿಟಕಿಗಳ ಮುಂದಿನ ಸಜಾjಗಳಿಗೆ ಈ ಮಾದರಿಯ ವಿನ್ಯಾಸ ಮಾಡುವುದು ಜನಪ್ರಿಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅದೇ ರೀತಿಯ ಮತ್ತೆ ಬಳಕೆY ಬಂದಿದೆ. ಅದೀಗ ತುಸುಮಟ್ಟಿಗೆ ಜನಪ್ರಿಯವೂ ಆಗಿದೆ. ಹೆಚ್ಚಿನ ಮಾಹಿತಿಗೆ :98441 32826 – ಆರ್ಕಿಟೆಕ್ಟ್ ಕೆ ಜಯರಾಮ್