Advertisement

ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

03:45 AM Mar 12, 2017 | Harsha Rao |

ಬಾಲಸೋರ್‌ : ಒಡಿಶಾ ಕರಾವಳಿ ಪ್ರದೇಶದಿಂದ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ಶನಿವಾರ ನಡೆದಿದೆ. 300 ಕೆಜಿ ಅಣ್ವಸ್ತ್ರ ಸಿಡಿತಲೆಗಳನ್ನು  ಹೊತ್ತು ಸಾಗಬಲ್ಲ ಸಾಮಥ್ಯವನ್ನು ಈ ಕ್ಷಿಪಣಿ ಹೊಂದಿದೆ. ಬಾಲಕೋರ್‌ನಲ್ಲಿರುವ ಇಂಟೆಗ್ರೇಟೆಡ್‌ ಟೆಸ್ಟ್‌ ರೇಂಜ್‌ ವಾಹಕದಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.  ಎರಡು ಹಂತದ ಕ್ಷಿಪಣಿ ಇದಾಗಿದ್ದು ಈಗಾಗಲೇ ಸೇನೆ ಮತ್ತು ನೌಕಾ ಪಡೆಗೆ ಇದನ್ನು ಸೇರಿಸಿದ್ದು ವಾಯುಪಡೆಗೆ ಇದನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದೂ  ಅಧಿಕಾರಿಗಳು ತಿಳಿಸಿದ್ದಾರೆ. ನೌಕಾಪಡೆಗೆ ಮೊದಲ ಹಂತದಲ್ಲಿ ಇದನ್ನು ಸೇರ್ಪಡೆ ಮಾಡುವ   ಪ್ರಕ್ರಿಯೆ ಕಳೆದ 2005 ರಲ್ಲೇ ನಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next