Advertisement

ಕೋವಿಡ್ ಸೋಂಕಿತ ವೃದ್ಧನಿಗೆ ಕಿಮ್ಸ್‌ನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

04:35 AM Jun 01, 2020 | Team Udayavani |

ಹುಬ್ಬಳ್ಳಿ: ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ ವೃದ್ಧರೊಬ್ಬರಿಗೆ ಇಲ್ಲಿನ ಕಿಮ್ಸ್‌ ವೈದ್ಯರು ರವಿವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ದಾವಣಗೆರೆ ಮೂಲದ 69 ವಯಸ್ಸಿನ ವೃದ್ಧರೊಬ್ಬರು ಕೋವಿಡ್ ಸೋಂಕಿನಿಂದ 13 ದಿನಗಳ ಹಿಂದೆ ಅಲ್ಲಿನ ಆಸ್ಪತ್ರೆ ದಾಖಲಾಗಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದು, ಕಾಲು ಕಪ್ಪುಗಟ್ಟಿತ್ತು. ಹೀಗಾಗಿ ಅಲ್ಲಿನ ವೈದ್ಯರು ಕಿಮ್ಸ್‌ಗೆ ಶಿಫಾರಸು ಮಾಡಿದ್ದು, ಗುರುವಾರ ಕಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದರು.

Advertisement

ಕಿಮ್ಸ್‌ ವೈದ್ಯರು ಕಾಲಿನ ಪರೀಕ್ಷೆ,  ಸ್ಕ್ಯಾನ್‌ ಮಾಡಿದಾಗ ಗ್ಯಾಂಗ್ರೀನ್‌ ಆಗಿರುವುದು ದೃಢಪಟ್ಟಿತ್ತು. ಕೋವಿಡ್ ಸೋಂಕಿನ ನಡುವೆಯೂ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಡಾ| ಎಸ್‌.ವೈ. ಮುಲ್ಕಿಪಾಟೀಲ, ಡಾ| ಸಂಜಯ, ಡಾ| ರಾಕೇಶ ಪಾಟೀಲ, ಡಾ| ಅಭಿ ಚಂದ್ರನ, ಡಾ| ವಿಕಾಸ ಜೋಶಿ, ಡಾ| ಆಶ್ರಿತಾ ಶೆಟ್ಟಿ, ಸಿಬ್ಬಂದಿಯಾದ ಗಂಗಾಧರ ಹಾಗೂ ಪ್ರವೀಣ ಶಸ್ತ್ರಚಿಕಿತ್ಸೆ ತಂಡದಲ್ಲಿದ್ದರು. ಡಾ| ಎನ್‌.ಐ. ಹೆಬಸೂರು, ಡಾ| ಗುರುಶಾಂತಪ್ಪ, ಡಾ| ಜಿ.ಸಿ. ಪಾಟೀಲ, ಡಾ| ಉಲ್ಲಾಸ ಬಿಸ್ಲೇರಿ, ಡಾ| ರಾಮಲಿಂಗಪ್ಪ ಹಾಗೂ ಡಾ| ಅರುಣಕುಮಾರ ಶಸ್ತ್ರಚಿಕಿತ್ಸಾ ತಂಡಕ್ಕೆ ಮಾರ್ಗದರ್ಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next