Advertisement

ವಿಜಯಮಲ್ಯ ಹೊಂದಿರುವ ಶೇರುಗಳಿಗೆ ಮಾನ್ಯತೆ ಇಲ್ಲ

06:25 AM Oct 26, 2018 | Team Udayavani |

ಬೆಂಗಳೂರು: ಯುಆರ್‌ಬಿಬಿಎಲ್‌ ಸಂಸ್ಥೆಯಲ್ಲಿ ವಿಜಯಮಲ್ಯ ಹೊಂದಿರುವ 4152272 ಶೇರುಗಳನ್ನು ಇದೇ ಅ.30ರಂದು ಇ-ಹರಾಜು ಮೂಲಕ ಮಾರಾಟ ಮಾಡಲಾಗುವುದು ಎಂದು ಸಾಲ ವಸೂಲಾತಿ ನ್ಯಾಯಾಧೀಕರಣ ಪ್ರಕಟಿಸಿದ್ದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಗಳು ಈ ಶೇರುಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಶೇರುಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದೆ.

Advertisement

ರಾಷ್ಟ್ರದ ವಿವಿಧ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ. ಸಾಲ ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದಲ್ಲದೆ, ಕೋಟ್ಯಂತರ ರೂ. ತೆರಿಗೆ ವಂಚನೆ ಆರೋಪದ ಮೇಲೆ ಈಗಾಗಲೇ ಮಲ್ಯ ಅವರಿಗೆ ಸೇರಿದ ಯುಆರ್‌ಬಿಬಿಎಲ್‌ ಸಂಸ್ಥೆಯ 4152272  ಶೇರುಗಳನ್ನು ಜಪ್ತಿ ಮಾಡಲಾಗಿದೆ. ಹೀಗಾಗಿ ಈ ಶೇರುಗಳು ಆದಾಯ ತೆರಿಗೆ ಕಾಯ್ದೆ 281 ಸೆಕ್ಷನ್‌ ಪ್ರಕಾರ ಮಾನ್ಯತೆ ಹೊಂದಿರುವುದಿಲ್ಲ. ಒಂದು ವೇಳೆ ಯಾರಾದರೂ ಶೇರುಗಳನ್ನು ಖರೀದಿ ಮಾಡಿದರೆ ಇದಕ್ಕೆ ಖರೀದಿದಾರರೇ ಹೊಣೆಗಾರರಾಗಿರುತ್ತಾರೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next