Advertisement

ಆಲ್ದೂರು ಯುವಕನಿಂದ ಅಮೆರಿಕದಲ್ಲಿ ಯಶಸ್ವಿ ಉಪಗ್ರಹ ಉಡಾವಣೆ

05:17 PM Apr 04, 2022 | Team Udayavani |

ಆಲ್ದೂರು : ತನ್ನದೇ ಸ್ವಂತ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾರಂಭಿಸಿ ಉಪಗ್ರಹವನ್ನು ತಯಾರಿಸಿ ಅಮೆರಿಕದ ಸ್ಪೆಸೆಕ್ಸ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ದೇಶವೇ ಹೆಮ್ಮೆಪಡುವಂತ ಸಾಧನೆಯನ್ನು ಆಲ್ದೂರಿನ ಯುವಕ ಅವೇಜ್‌ ಅಹಮದ್‌ ಮಾಡಿದ್ದಾರೆ. ಆಲ್ದೂರು ಜನತೆ ತಮ್ಮ ಊರಿನ ಯುವಕನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಅವೇಜ್‌ ಅಹಮದ್‌ ಅವರ ಸಂಶೋಧನೆಯ ಉಪಗ್ರಹ ಬೇರೆ ಎಲ್ಲಾ ಉಪಗ್ರಹಗಳಿಗಿಂತ ಶೇ.50ಹೆಚ್ಚು ಡೇಟಾವನ್ನು ಬಿಡುಗಡೆಗೊಳಿಸುತ್ತದೆ. ಈ ಉಪಗ್ರಹ ಭೂಮಿಯ ಚಲನವಲನದ
ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.

ಇಸ್ರೋದಿಂದಲೇ ತಮ್ಮ ಪ್ರಥಮ ಉಪಗ್ರಹ ಆನಂದ್‌ ಅನ್ನು ಉಡಾವಣೆ ಮಾಡುವ ಮಹತ್ವಕಾಂಕ್ಷೆ ಅವೇಜ್‌ ಅವರದಾಗಿತ್ತು. ಆದರೆ ಇಸ್ರೋದಲ್ಲಿ ಉಡಾವಣೆಗೆ ಡೇಟ್‌ ಸಿಗದ ಕಾರಣ ತಮ್ಮದೇ ನಿರ್ಮಾಣದ ಮತ್ತೂಂದು ಉಪಗ್ರಹ ಶಕುಂತಲಾವನ್ನು ಅಮೆರಿಕಾದ ಸ್ಪೇಸೆಕ್ಸ್ ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.

ಶೀಘ್ರದಲ್ಲೇ ಇಸ್ರೋದಿಂದ ತಮ್ಮ ಮೊದಲ ನಿರ್ಮಾಣದ ಉಪಗ್ರಹವನ್ನು ಉಡಾವಣೆ ಮಾಡುವ ಕನಸು ಶೀಘ್ರದಲ್ಲೇ ನನಸಾಗಲಿದೆ.
ಅವೇಜ್‌ ಅಹಮದ್‌ ಆಲ್ದೂರಿನ ರಾಯಲ್‌ ಮೆಡಿಕಲ್ಸ್‌ ಮಾಲೀಕ ನದೀಮ್‌ ಅಹಮದ್‌ ಅವರ ಪುತ್ರ. ಆಲ್ದೂರಿನ ರೋಸ್‌ ಬಡ್‌, ಅಕ್ಷರ ಪಬ್ಲಿಕ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಹಂತದ ಶಿಕ್ಷಣ
ಪಡೆದು ಪ್ರೌಡಶಿಕ್ಷಣವನ್ನು ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಮುಗಿಸಿದರು. ಸಿಇಟಿಯಲ್ಲಿ 477ನೇ ರ್‍ಯಾಂಕ್‌ ಪಡೆದು ಆರ್‌.ವಿ. ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಜೆಇಇ ಪರೀಕ್ಷೆಯಲ್ಲಿ 2000 ರ್‍ಯಾಂಕ್‌ ಪಡೆದು ಭಾರತದ ನಂ.1 ನಿಟ್‌ ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಭಾರತದ ನಂ.1 ಖಾಸಗಿ ಕಾಲೇಜು ಬಿಟ್ಸ್‌-ಪಿಲಾನಿ(ಬಿರ್ಲಾ ಇನ್ಸ್‌ಟಿಟ್ಯೂಟ್‌
ಆಫ್‌ಟೆಕ್ನಾಲಜಿ ಆ್ಯಂಡ್‌ ಸೈನ್ಸ್‌) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಮುಂದುವರಿಸಿದರು.

ಇದನ್ನೂ ಓದಿ : ಹೊಸಪೇಟೆ-ಗುತ್ತಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ : ಕೇಂದ್ರ ಸಚಿವರಿಗೆ ಮನವಿ ಸಲ್ಲಿಕೆ

Advertisement

ಎಂಎಸ್ಸಿ ಮ್ಯಾಥಮೆಟಿಕ್ಸ್‌ ಡಿಗ್ರಿ ಪಡೆದು ಹೊರಬಂದ ಪಿಕ್ಸೆಲ್‌ ಎಂಬ ತನ್ನದೇ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾರಂಭಿಸಿದ್ದಾರೆ.

ಬಾಲ್ಯದಿಂದಲೂ ಬ್ಯಾಹ್ಯಾಕಾಶದ ಬಗ್ಗೆ ಕುತೂಹಲ, ಆಸಕ್ತಿ ಬೆಳೆಸಿಕೊಂಡಿದ್ದು ಎಲನ್‌ ಮಾಸ್ಕ್ನ ಎರೋಸ್ಪೇಸ್‌ ಕಂಪೆನಿ “ಸ್ಪೆಸೆಕ್ಸ್‌’ ನಿಂದ ಪ್ರಭಾವಿತರಾದ ಅವೇಜ್‌ ಭಾರತದಲ್ಲಿಯೂ ಇದೇ
ರೀತಿಯ ಕಂಪೆನಿ ಪ್ರಾರಂಭಿಸಬೇಕೆಂಬ ಹೆಬ್ಬಯಕೆ ಇಟ್ಟಿಕೊಂಡು ಇಂದು ತನ್ನದೇ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾಂರಭಿಸುವ ಮೂಲಕ ತಮ್ಮ ಕನಸಿಗೆ ರೆಕ್ಕೆ ಕಟ್ಟಿದ್ದಾರೆ. ತಾವು ನಿರ್ಮಿಸಿದ ಖಾಸಗಿ ಉಪಗ್ರಹವನ್ನು ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.

ನನ್ನ ಮಗ ತಯಾರಿಸಿದ ಪ್ರಥಮ ಖಾಸಗಿ ಉಪಗ್ರಹ ಆನಂದ್‌ ಅನ್ನು ಇಸ್ರೋದಿಂದಲೇ ಉಡಾವಣೆ ಮಾಡಬೇಕಿತ್ತು. ಆದರೆ ಉಡಾವಣೆಗೆ ಡೇಟ್‌ ದೊರೆತಿಲ್ಲ. ಖ್ಯಾತ ಉದ್ಯಮಿಯೊಬ್ಬರ ಪ್ರಾಯೋಜಕತ್ವದಲ್ಲಿ ಶಕುಂತಲಾ ಹೆಸರಿನ ಮತ್ತೂಂದು ಉಪಗ್ರಹವನ್ನು ತಯಾರಿಸಿದ್ದು ಅಮೆರಿಕಾದ ಸ್ಪೆಸೆಕ್ಸ್‌ ನಿಂದ ಅದನ್ನು ಶನಿವಾರ ಅಮೆರಿಕದ ಸ್ಪೆಸೆಕ್ಸ್‌ನಿಂದ ಉಡಾವಣೆ ಮಾಡಿದ್ದು ಯಶಸ್ವಿಯಾಗಿದೆ. ಉಪಗ್ರಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಾಧನೆಗೆ ದೇಶವೇ ಅವನನ್ನು ಕೊಂಡಾಡುತ್ತಿದೆ. ನಮ್ಮ ದೇಶದ ಪ್ರತಿಭೆಗಳಿಗೆ ನಮ್ಮ ದೇಶದಲ್ಲೇ ಪ್ರೋತ್ಸಾಹ ದೊರೆತು ದೇಶದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಬೇಕು.

– ನದೀಮ್‌ ಅಹಮದ್‌, ಅವೇಜ್‌ ಅಹಮದ್‌ ತಂದೆ

Advertisement

Udayavani is now on Telegram. Click here to join our channel and stay updated with the latest news.

Next