Advertisement
“10 ವರ್ಷಗಳಿಂದ ಪಾಲಿಕೆಯ ನೀರನ್ನೇ ಅವಲಂಬಿಸಿಲ್ಲ’ಕದ್ರಿ ಮಲ್ಲಿಕಟ್ಟೆಯ ಲೋಬೋಲೇನ್‌ನ ವೈದ್ಯ ಡಾ| ಶಿವರಾಮ ರೈ ಅವರು 10 ವರ್ಷಗಳ ಹಿಂದೆಯೇ ಮಳೆಕೊಯ್ಲು ವ್ಯವಸ್ಥೆಯನ್ನು ತಮ್ಮ ಮನೆಯಲ್ಲಿ ಅಳವಡಿಸಿದ್ದು, ಹಾಗಾಗಿ ಅವರು ಇವತ್ತಿನವರೆಗೂ ಪಾಲಿಕೆಯ ನೀರನ್ನು ವಲಂಬಿಸಿಲ್ಲ!
Related Articles
Advertisement
“2008ರಲ್ಲಿ ದೇರೆಬೈಲ್‌ನಲ್ಲಿ 8 ಮನೆಗಳ ವಸತಿ ಸಮುಚ್ಚಯ ನಿರ್ಮಿಸಿದ್ದು, ಅಲ್ಲಿ ಕೊರೆದ ಬೋರ್‌ವೆಲ್‌ನಲ್ಲಿ ಕೇವಲ ಮುಕ್ಕಾಲು ಇಂಚು ಮಾತ್ರ ನೀರು ಸಿಕ್ಕಿತ್ತು. ಮನೆಗಳು ಕಡಿಮೆಯಿದ್ದ ಕಾರಣ ಪಾಲಿಕೆ ನೀರು ಸಾಕಾಗುತ್ತಿತ್ತು. ಅದೇವೇಳೆ ಮಳೆಕೊಯ್ಲು ಅಳವಡಿಸಿ ಬೋರ್‌ವೆಲ್ ಅನ್ನು ಕೂಡ ರಿಚಾರ್ಚ್ ಮಾಡಲಾಗಿದೆ. ಇದೀಗ ಬೋರ್‌ವೆಲ್‌ನಲ್ಲಿಯೂ ಯಥೇತ್ಛ ನೀರಿದೆ. ನಾನು 2008ರಿಂದಲೂ ನಿರ್ಮಿಸಿದ ಎಲ್ಲ ವಸತಿ ಸಮುಚ್ಚಯಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿದ್ದೇನೆ. ಹೀಗಾಗಿ, ಮಳೆಕೊಯ್ಲಿನಿಂದ ಆಗುವ ಅನುಕೂಲದ ಬಗ್ಗೆ ಒಬ್ಬ ಬಿಲ್ಡರ್ ಆಗಿ ನನ್ನ ಬಳಿಯೇ ಸಾಕಷ್ಟು ನಿದರ್ಶನಗಳಿದ್ದು, ನಗರದ ಎಲ್ಲ ಮನೆ-ಕಚೇರಿ, ವಿದ್ಯಾಸಂಸ್ಥೆಗಳಲ್ಲಿ ಇದು ಜಾರಿಗೆ ಬರಬೇಕು. ಮಂಗಳೂರಿನಲ್ಲಿ ಶೇ.70ರಷ್ಟು ಟೆರೇಸ್ ಮನೆಗಳಿದ್ದು, ಮಳೆಕೊಯ್ಲು ಅಳವಡಿಕೆಯಾದರೆ ಮನೆ ಬಳಕೆಗೆ ನೀರು ಲಭಿಸುವ ಜತೆಗೆ ಅಂತರ್ಜಲವೂ ವೃದ್ಧಿಯಾಗುತ್ತದೆ. ಸದ್ಯ ಮಳೆಗಾಲ ಶುರುವಾಗಿದ್ದು, ಸುದಿನವು ಸಂದಭೋìಚಿತವಾಗಿ ಈ ಅಭಿಯಾನ ಪ್ರಾರಂಭಿಸಿದ್ದು, ಪತ್ರಿಕೆ ಆಶಯದಂತೆ ಮಂಗಳೂರಿನಲ್ಲಿ ಸಾಧ್ಯವಿರುವ ಎಲ್ಲ ಜಾಗಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳುವತ್ತ ಜನರನ್ನು ಉತ್ತೇಜಿಸಲು, ಮಾರ್ಗದರ್ಶನ ನೀಡಲು ಸಿದ್ಧ’ ಎನ್ನುತ್ತಾರೆ ಕ್ರೆಡೈ ಅಧ್ಯಕ್ಷ ನವೀನ್ ಕಾಡೋಜಾ.