Advertisement
ವೈದ್ಯ ವೃತ್ತಿಯಿಂದ ರಾಜಕಾರಣಕ್ಕೆ ಬಂದಿರುವ ಶಾಸಕ ಡಾ.ಹೆಚ್.ಡಿ.ರಂಗನಾಥ್ ವೃತ್ತಿ ಪ್ರಾಮುಖ್ಯತೆಯನ್ನು ಮರೆಯದೇ ನಿರಂತರವಾಗಿ ಸಮಸ್ಯೆಗೆ ಗುರಿಯಾದವರಿಗೆ ಸ್ವಯಂ ನೆರವಾಗುತ್ತಿದ್ದಾರೆ.
Related Articles
Advertisement
ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಇದೇ ತಿಂಗಳು 25 ರಂದು ಮಲೇಷಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ರಗ್ಬಿ ಗೆ ಭವ್ಯ ಆಯ್ಕೆಯಾಗಿದ್ದರು ಈ ಹಿನ್ನಲೆಯಲ್ಲಿ ಆರೋಗ್ಯ ತಪಾಸಣೆಗೆಂದು ಹೋಗಿದ್ದಾಗ, ಓಡಲು ಸಾಧ್ಯವಾಗಲಿಲ್ಲ, ಕಾಲು ನೋವು ತೀವ್ರವಾಗಿತ್ತು, ವೈದ್ಯರು ಎಂಆರ್‌ಐ ಸ್ಕ್ಯಾನ್ ಮಾಡಿಸುವಂತೆ ಭವ್ಯಗೆ ತಿಳಿಸಿದ್ದರು. ಎಂ.ಆರ್.ಐ ಸ್ಕ್ಯಾನ್ ಮಾಡಿಸಿದಾಗ ಮಂಡಿ ಮೂಳೆಗೆ ಬಲವಾದ ಪೆಟು ಬಿದ್ದಿರುವುದು ತಿಳಿಯಿತು.
ಶಾಸಕ ಡಾ.ಹೆಚ್.ರಂಗನಾಥ್ ಬೋರಿಂಗ್ ಆಸ್ಪತ್ರೆಯಲ್ಲಿ ಬೇರೋಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿರುವ ವಿಚಾರ ತಿಳಿದ ಭವ್ಯ, ಆಸ್ಪತ್ರೆಗೆ ಹೋಗಿ ಶಾಸಕರಿಗೆ ರಿಪೋರ್ಟ್ ತೋರಿಸಿದರು, ರಿಪೋರ್ಟ್ ಪರಿಶೀಲಿಸಿ ಅ. 21 ರಂದು ಸಂಜಯ್‌ಗಾಂಧಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಬನ್ನಿ ಎಂದು ಸೂಚಿಸಿದರು. ಅದರಂತೆ ಭವ್ಯ ಇಂದು ಆಸ್ಪತ್ರೆಗೆ ದಾಖಲಾದರು. ಶಾಸಕರು ಅವರ ಸಹೋದ್ಯೋಗಿ ವೈದ್ಯರ ಜತೆ ಸೇರಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.
ಸದಾ ಬಡವರ ಪರವಾಗಿ ಕೆಲಸ ಮಾಡುತ್ತಿರುವ, ಶಾಸಕ ಡಾ.ಹೆಚ್.ಡಿ.ರಂಗನಾಥ್ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆರೆ ಪಾತ್ರರಾಗಿದ್ದಾರೆ, ಶಾಸಕರಾದ ಮೇಲೆ ವೈದ್ಯ ವೃತ್ತಿಯನ್ನು ಬಿಡದೇ ಸ್ವಂತ ಖರ್ಚಿನಲ್ಲಿ ಈವರೆಗೂ ನಾಲ್ಕು ಜನರಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅವರ ಕುಟುಂಬಕ್ಕೆ ಆಗುತ್ತಿದ್ದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ಅವರಿಗೆ ನೆರವಾಗಿದ್ದಾರೆ.
“ನನ್ನ ಮಂಡಿ ನೋವಿಗೆ ಸ್ಪಂಧಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ಡಾ.ರಂಗನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ತುಂಬಾ ಒಳ್ಳೆಯವರು. ಬೇಗ ಮಂಡಿ ವಾಸಿ ಮಾಡಿಕೊಂಡು ಮುಂದಿನ ದಿನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಗ್ಬಿ ಆಡುತ್ತೇನೆ” ಎಂದು ಶಸ್ತ್ರಚಿಕಿತ್ಸೆ ಒಳಗಾದ ಕ್ರೀಡಾಪಟು ಆರ್.ಭವ್ಯ ಹೇಳಿದ್ದಾರೆ.
“ಓರ್ವ ಅಂತಾರಾಷ್ಟ್ರೀಯ ಕ್ರೀಡಾ ಪಟುವಿಗೆ ನೆರವಾದ ಸಂತಸ ಒಂದು ಕಡೆ, ನನ್ನ ಕರ್ತವ್ಯ ಮಾಡುತ್ತಿದ್ದೇನೆ. ನನ್ನ ವೈದ್ಯ ವೃತ್ತಿಯಿಂದ ಇಂತಹ ನೂರಾರು ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಶಸ್ತ್ರಚಿಕಿತ್ಸೆಗೆ ಸಹಕರಿಸಿ, ನನ್ನ ವೈದ್ಯ ಸಹೋದ್ಯೋಗಿಗಳಿಗೆ ನನ್ನ ಕೃತಜ್ಞನೆಗಳು” ಎಂದು ಶಾಸಕ ಡಾ.ಹೆಚ್.ಡಿ.ರಂಗನಾಥ್ ಪ್ರತಿಕ್ರಿಯೆ ನೀಡಿದ್ದಾರೆ.