ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುತಡೆಗಟ್ಟಲು ಜಿಲ್ಲಾಡಳಿತ ಘೋಷಣೆ ಮಾಡಿದ್ದವಿಶೇಷ ಲಾಕ್‌ಡೌನ್‌ಗೆ ನಗರ ಸೇರಿ ಜಿಲ್ಲಾದ್ಯಂತಜನರಿಂದ ಮೊದಲ ದಿನ ಉತ್ತಮ ಸ್ಪಂದನೆ ದೊರೆತಿದೆ. ಪೊಲೀಸ್ ಬಂದೋಬಸ್ತ್ನೊಂದಿಗೆ ಅನಗತ್ಯವಾಹನ ಸಂಚಾರಕ್ಕೆ ನಿರ್ಬಂಧವಿಧಿಸಲಾಗಿತ್ತು.
ಕೊರೊನಾ ಸೋಂಕು ನಿಯಂತ್ರಿಸಲು ಅನೇಕರೀತಿಯಕಠಿಣಕ್ರಮಕೈಗೊಂಡರೂ ಜಿಲ್ಲೆಯಲ್ಲಿ ಜನಸಾಮಾಜಿಕ ಅಂತರ ಮರೆತು ವ್ಯವಹರಿಸುತ್ತಿದ್ದರು.ಇದರಿಂದ ಕೊರೊನಾ ಸೋಂಕು ಪ್ರಕರಣಗಳುಹೆಚ್ಚಾಗಿ ಕಂಡು ಬರುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಮೇ 23 ತನಕ ಅಗತ್ಯವಸ್ತುಗಳು ಖರೀದಿಗೂ ಅವಕಾಶವಿಲ್ಲದಂತೆ ಲಾಕ್‌ಡೌನ್ ಘೋಷಣೆ ಮಾಡಿದೆ. ಇದರಿಂದ ಜನ,ವಾಹನ ಸಂಚಾರ ಇಲ್ಲದೇ ಪ್ರಮುಖ ಬೀದಿಗಳುಬಿಕೋ ಎನ್ನುತ್ತಿದ್ದವು.
ಪೊಲೀಸರ ಸರ್ಪಗಾವಲು: ಜಿಲ್ಲಾಡಳಿತ ವಿಶೇಷಲಾಕ್‌ಡೌನ್ ಜಾರಿಗೊಳಿಸಿ, ಬಿಗಿ ಪೊಲೀಸ್‌ಬಂದೋಬಸ್ತ್ ಕೂಡ ಮಾಡಿತ್ತು. ಜಿಲ್ಲೆಯ ಆಂಧ್ರಗಡಿ ಸೇರಿ ಮತ್ತಿತರರ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ಅನಗತ್ಯ ವಾಹನ ಸಂಚಾರಕ್ಕೆನಿರ್ಬಂಧಹಾಕಲಾಗಿತು.
ವಿನಾಃ ನಾಕಾರಣ ಮನೆಯಿಂದ ಹೊರಬಂದ ನಾಗರಿಕರಿಗೆ ಪೊಲೀಸರು ಲಾಠಿ ರುಚಿಯನ್ನು ತೋರಿಸಿದರು. ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಚಿಕ್ಕಬಳ್ಳಾಪುರ ಡಿ ವೈ ಎಸ್ಪಿ ರವಿಶಂಕರ್, ಚಿಂತಾಮಣಿ ಡಿವೈಎಸಿ ³ ಲಕ್ಷ್ಮಯ್ಯ, ಪೊಲೀಸ‍್ ಗಸ್ತು ನಡೆಸಿ ಲಾಕ್‌ಡೌನ್ ಯಶಸ್ವಿಗೊಳಿಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.
ಬ್ಯಾರಿಕೇಡ್‌ಗಳ ನಿರ್ಮಾಣ: ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರಗಳಿಗೆ ಪ್ರವೇಶ ಮಾಡುವ ನಾಲ್ಕು ದಿಕ್ಕಿನಲ್ಲಿಬ್ಯಾರಿಕೇಡ್ ನಿರ್ಮಿಸಿ ಪೊಲೀಸರು ವಾಹನಗಳಓಡಾಟ ನಿರ್ಬಂಧಿಸಿದ್ದಾರೆ. ಸರ್ಕಾರಿ ರೇಷ್ಮೆಗೂಡುಮಾರುಕಟ್ಟೆಗೆ ಬರುವ ಬೆಳೆಗಾರರು, ಆಸ್ಪತ್ರೆಗೆ ತೆರಳುವವರಿಗೆ ಹೊರತುಪಡಿಸಿ, ಬೇರೆ ಯಾರಿಗೂ ಜಿಲ್ಲೆಯೊಳಗೆ ಪ್ರವೇಶ ಕಲ್ಪಿಸಿಲ್ಲ