Advertisement

Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ

05:19 AM Jan 09, 2025 | Team Udayavani |

ಹೊಸದಿಲ್ಲಿ: ಕರ್ನಾಟಕದ 4,873 ಗ್ರಾಮಗಳು ಬಯಲು ಶೌಚ ಮುಕ್ತ (ಒಡಿಎಫ್) ಮಾದರಿ ಗ್ರಾಮಗಳಾಗಿದ್ದು, ರಾಜ್ಯದ ಶೇ. 99.3ರಷ್ಟು ಗ್ರಾಮಗಳು ಘನ ತ್ಯಾಜ್ಯ ನಿರ್ವಹಣೆಯಲ್ಲೂ ಯಶಸ್ವಿಯಾಗಿವೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

2024-25ನೇ ಸಾಲಿನಲ್ಲಿ ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು ಸ್ವತ್ಛ ಭಾರತ ಮಿಷನ್‌-ಗ್ರಾಮೀಣ (ಎಸ್‌ಬಿಎಂ-ಜಿ) ಯೋಜನೆ ಅನ್ವಯ ಸಾಧಿಸಿರುವ ಪ್ರಗತಿಯನ್ನು ಸಚಿವರು ಪರಿಶೀಲಿಸಿದ್ದಾರೆ. ಈ ವೇಳೆ ಕರ್ನಾಟಕದಲ್ಲಿನ ತ್ಯಾಜ್ಯ ನಿರ್ವಹಣೆ ಹಾಗೂ ನೈರ್ಮಲ್ಯ ಪ್ರಗತಿ ಕುರಿತು ಶ್ಲಾಘಿಸಿದ್ದಾರೆ. ಜತೆಗೆ 2025ರ ಮಾರ್ಚ್‌ ವೇಳೆಗೆ 26,484 ಗ್ರಾಮಗಳನ್ನು ಬಯಲು ಶೌಚ ಮುಕ್ತ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಕರ್ನಾಟಕ ಹೊಂದಿದೆ ಇದು ಶ್ಲಾಘನಾರ್ಹ ಎಂದಿದ್ದಾರೆ.

ತ್ಯಾಜ್ಯ ಸಾಗಣೆ ವಾಹನಗಳ ಪ್ರಮಾಣ ಹೆಚ್ಚಳ, ಪ್ಲಾಸ್ಟಿಕ್‌ ನಿರ್ವಹಣೆ, ಶೌಚಾಲಯಗಳ ನಿರ್ಮಾಣದಂಥ ಅಗತ್ಯ ಕ್ರಮಗಳನ್ನು ಹೆಚ್ಚಿಸುವಂತೆಯೂ ಸಲಹೆ ನೀಡಿದ್ದಾರೆ. ಜತೆಗೆ ಸ್ವತ್ಛ ಭಾರತ್‌ ಮಿಷನ್‌ ಗುರಿಗಳ ಸಾಧನೆಗೆ ಸಮಗ್ರ ಮಾರ್ಗದರ್ಶನವನ್ನೂ ಒದಗಿಸಿದ್ದಾರೆಂದು ಸಚಿವಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next