Advertisement

ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ವಿಜಯ ಕುಮಾರ್‌ ಶೆಟ್ಟಿ

05:56 PM Dec 04, 2019 | Team Udayavani |

ಮುಂಬಯಿ, ಡಿ. 3: ಪ್ರಕೃತಿಯ ಮುನಿಸು, ಹವಾಮಾನ ವೈಪರೀತ್ಯದಿಂದಾಗಿ ಹಠಾತ್‌ ಸುರಿದ ಧಾರಾಕಾರ ಮಳೆಯಿಂದ ಮೈದಾನದಲ್ಲಿ ನೀರು ತುಂಬಿದ್ದರಿಂದ ಕಳೆದ ನವೆಂಬರ್‌ 8 ರಿಂದ ನ. 10 ರವರೆಗೆ ಮೂರುದಿನಗಳ ಕಾಲ ನಡೆಯಬೇಕಿದ್ದ ಬೊಂಬಾಯಿಡ್‌ ತುಳುನಾಡ್‌ ವಿಶ್ವ ಮಟ್ಟದ ತುಳು ಸಮ್ಮೇಳನವನ್ನು ರದ್ದುಗೊಳಿಸುವುದು ಅನಿವಾರ್ಯವಾಯಿತು.

Advertisement

ಕೊನೆಯ ಕ್ಷಣದಲ್ಲಾದ ತೊಂದರೆಗೆ ಕ್ಷಮೆ ಯಾಚಿಸುತ್ತಿದ್ದೇವೆ. ಮತ್ತೆ ಜನವರಿ 18 ಮತ್ತು 19 ರಂದು ಬೊಂಬಾಯಿಡ್‌ ತುಳುನಾಡು ವಿಶ್ವಮಟ್ಟದ ತುಳು ಸಮ್ಮೇಳನವನ್ನು ದ್ವಿದಿನಗಳಲ್ಲಿ ಕಾಂದಿವಲಿ ಪಶ್ಚಿಮದ ಸಪ್ತಾಹ ಕ್ರೀಡಾಂಗಣದಲ್ಲಿ ಮತ್ತೆ ಅದೇ ಸಂಭ್ರಮದೊಂದಿಗೆ ನಡೆಸಲಾ ಗುವುದು ಎಂದು ಸಮ್ಮೇಳನದ ರೂವಾರಿ, ಕಲಾಜಗತ್ತು ಮುಂಬಯಿ ಸಂಸ್ಥೆಯ ಅಧ್ಯಕ್ಷ ಡಾ|ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ತಿಳಿಸಿದರು. ಡಿ. 2 ರಂದು ಸಂಜೆ ಸಾಂತಾಕ್ರೂಜ್‌ ಪೂರ್ವದ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಪೂರ್ವ ಸಿದ್ಧತಾ ಸಭೆ, ಸಮ್ಮೇಳನಕ್ಕೆ ಮುಹೂರ್ತ, ದೀಪಯಜ್ಞ ವಿಶೇಷ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೊಂಬಾಯಿಡ್‌ ತುಳುನಾಡ್‌ ಸಮ್ಮೇಳನವನ್ನು ಎರಡು ದಿನಗಳಿಗೆ ಸೀಮಿತಗೊಳಿಸಿ ಮತ್ತೆ ನಡೆಸಲಾಗುವುದು.

ಸಾಕುಇನ್ನೂ ಬೇಡವೇ ಬೇಡ ಎಂದು ದೃಢ ನಿರ್ಧಾರ ಮಾಡುವಾಗ ಮುಂಬಯಿಯ ಎಲ್ಲಾ ಜಾತೀಯ, ಕನ್ನಡಪರ ಸಂಘಟನೆಗಳ ಗಣ್ಯರು ಚಿಂತೆ ಮಾಡಬೇಡಿ, ಇದಕ್ಕಿಂತ ಅದ್ದೂರಿಯಾಗಿ ಸಮ್ಮೇಳನವನ್ನು ಮಾಡೋಣ, ಭಯಪಡುವ ಅಗತ್ಯವಿಲ್ಲ. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ. ನಾವೆಲ್ಲರೂ ಒಂದಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಮನೋಸ್ಥೈರ್ಯ ತುಂಬಿದ್ದಾರೆ. ನೀವೆಲ್ಲರೂ ನನ್ನ ಮೇಲಿಟ್ಟಿರುವ ಪ್ರೀತಿ, ಅಭಿಮಾನ, ಗೌರವಕ್ಕೆ ಋಣಿಯಾಗಿದ್ದೇನೆ. ಕಳೆದ ಘಟನೆಯಿಂದ ತೊಂದರೆ ಅನುಭವಿಸಿದ ಊರಪರವೂರ ಎಲ್ಲರಲ್ಲೂ ನಾನು ಕ್ಷಮೆಯಾಚಿಸುತ್ತೇನೆ. ಇದೀಗ ತುಳು ಸಮ್ಮೇಳನವು ಮತ್ತೆ ನಡೆಯಲಿರುವುದು ಸಂತೋಷದ ವಿಷಯ. ಸಮ್ಮೇಳನದ ಅದ್ಭುತ ಯಶಸ್ಸಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ. ತುಳುವರು ಎಲ್ಲರೂ ಸಮ್ಮೇಳನದಲ್ಲಿಪಾಲ್ಗೊಳ್ಳೋಣ ಎಂದು ನುಡಿದು ಸಮ್ಮೇಳನದ ಮಾಹಿತಿಯನ್ನು ನೀಡಿದರು.

ಇದೇ ಶುಭಾವಸರದಲ್ಲಿ ಜನವರಿಯ ಸಮ್ಮೇಳನಕ್ಕೆ ಶ್ರೀ ಪೇಜಾವರ ಮಠದ ಶಿಲಾಮಯಮಂದಿರದ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕ ವಿದ್ವಾನ್‌ ಹರಿ ಭಟ್‌ ಪುತ್ತಿಗೆ ದೀಪಹಚ್ಚಿ ಪೂಜೆಯೊಂದಿಗೆ ಮುಹೂರ್ತ ನೆರವೇರಿಸಿ, ಸಕಲ ವಿಘ್ನಗಳು ದೂರವಾಗಿ ಈ ಸಮ್ಮೇಳನ ಯಶಸ್ಸುಕಂಡು ಜಾಗತಿಕವಾಗಿ ಸ್ಮರಿಸುವ ವಿಶ್ವ ತುಳು ಸಮ್ಮೇಳನವಾಗಿ ಮೆರೆಯುವಂತಾಗಲಿ ಎಂದು ಅನುಗ್ರಹಿಸಿದರು.

ಕಲಾ ಜಗತ್ತು ಇದರ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಗೌ| ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ, ಜತೆ ಕಾರ್ಯದರ್ಶಿ ಲತೇಶ್‌ ಪೂಜಾರಿ, ಕೋಶಾಧಿಕಾರಿ ಜಗದೀಶ್‌ ರಾವ್‌, ಜತೆ ಕೋಶಾಧಿಕಾರಿಗಳಾದ ಪೃಥ್ವಿರಾಜ್‌ ಮುಂಡ್ಕೂರು, ಅಶೋಕ್‌ ಶೆಟ್ಟಿ ಪಣಗಲ್‌, ಬೊಂಬಾಯಿಡ್‌ ತುಳುನಾಡು ವಿಶ್ವ ತುಳುಹಬ್ಬ ಸಮಿತಿಯ ಸಂಚಾಲಕ ಶ್ಯಾಮ್‌ ಎನ್‌. ಶೆಟ್ಟಿ, ಕಾರ್ಯದರ್ಶಿ ಗಳಾದ ಪ್ರೇಮನಾಥ ಶೆಟ್ಟಿ ಕೊಂಡಳ್ಳಿ, ಪ್ರೇಮನಾಥ ಕೋಟ್ಯಾನ್‌, ರಜಿತ್‌ ಸುವರ್ಣ, ಸಾಹಿತ್ಯ ಸಮಿತಿಯ ಲತಾ ಸಂತೋಷ್‌ ಶೆಟ್ಟಿ, ಜಯಕರ ಡಿ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಗಾಯತ್ರಿ ಪರಿವಾರ ದಹಿಸರ್‌ ಬಳಗವು ಕುಮಾರಿ ಶೆಟ್ಟಿ ಅವರ ಮುಂದಾಳುತ್ವದಲ್ಲಿ ದೀಪಯಜ್ಞ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿ ಸಮ್ಮೇಳನದ ಸಫಲತೆ ಹೊಂದಲಿ ಎಂದು ಹಾರೈಸಿದರು.

Advertisement

 

ಚಿತ್ರ ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next