Advertisement

ಅಮೃತ ಮಹೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ಹರೀಶ್‌ ಜಿ. ಅಮೀನ್‌

04:27 PM Aug 30, 2021 | Team Udayavani |

ಮುಂಬಯಿ, ಆ. 29: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಪ್ರಾಯೋಜಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಅಮೃತ ಮಹೋತ್ಸವ ಆಚರಣೆ ಸಿದ್ಧತೆಯಲ್ಲಿದೆ. ಮಂಡಳಿ 75 ವರ್ಷ ಪೂರೈಸಿದ್ದು, ಅಮೃತ ಮಹೋತ್ಸವದ ಆಚರಣೆಯನ್ನು ಸೆಪ್ಟಂಬರ್‌ 5ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ಎಲ್ಲರ ಸಹಕಾರದೊಂದಿಗೆ ಆಚರಿಸಲಿದೆ ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಹೇಳಿದರು.

Advertisement

ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಆ. 23ರಂದು ನಡೆದ ಗುರುನಾರಾಯಣ ಯಕ್ಷಗಾನ ಮಂಡಳಿ ಅಮೃತ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅಮೃತ ಮಹೋತ್ಸವದ ಬಗ್ಗೆ ವಿವರಣೆ ನೀಡಿ, ಸಂಭ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಈ ಸಂದರ್ಭ ಉಪಸ್ಥಿತರಿದ್ದ ಬಿಲ್ಲವರು ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ್‌ ಆರ್‌. ಪೂಜಾರಿ ಅವರು ಮಾತನಾಡಿ, ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಲಾವಿದರು ಹಾಗೂ ನಗರದ ಅನೇಕ ಗಣ್ಯರು ಮತ್ತು ಕಲಾಪೋಷಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಕಲಾವಿದರನ್ನು ಹಾಗೂ ಕಲಾ ಪೋಷಕರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ರಸ್ತುತ ಮಂಡಳಿಯ ಕಲಾವಿದರಿಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು. ದಿ| ಜಯ ಸಿ. ಸುವರ್ಣ ಅವರ ಸವಿನೆನಪಿಗಾಗಿ ಅವರ ಮಕ್ಕಳು ದೇವಿಯ ರಜತ ಕಿರೀಟವನ್ನು ಮಂಡಲಿಗೆ ಅರ್ಪಿಸಿದ್ದಾರೆ.

ಮುಂಬಯಿ ಕಲಾಭಿಮಾನಿಗಳು ಮಹಾನಗರದಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಕಲಾ ಅಭಿಮಾನಿಗಳು ಹಾಗೂ ತುಳು-ಕನ್ನಡಿಗರು ಅಮೃತ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಸಾಂಸ್ಕೃತಿಕ ಉಪ ಸಮಿತಿಯ ಗೌರವ ಕಾರ್ಯದರ್ಶಿ ಅಶೋಕ್‌ ಕುಕ್ಯಾನ್‌ ಅವರು ಮಾತನಾಡಿ, ಮಂಡಳಿ ಅಮೃತಮಹೋತ್ಸವವು 2020ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿತ್ತು. ಬಿಲ್ಲವರ ಅಸೋಸಿಯೇಶನ್‌ನ ಸಂಪೂರ್ಣ ಸಹಕಾರದೊಂದಿಗೆ ಗುರುನಾರಾಯಣ ಯಕ್ಷಗಾನ ಮಂಡಳಿ ಅಮೃತಮಹೋತ್ಸವ ಸಿದ್ಧತೆಯನ್ನು ಮಾಡುತ್ತಿದ್ದು, ಎಲ್ಲ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು, ಸ್ಥಾಪಕ ಅಧ್ಯಕ್ಷರುಗಳು, ಬ್ಯಾಂಕ್‌ನ ಅಧಿಕಾರಿಗಳು, ನಗರದ ಗಣ್ಯರು, ಕಲಾಪೋಷಕರು, ಕಲಾವಿದರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Advertisement

ಸಮ್ಮಾನ ಸಮಾರಂಭವಲ್ಲದೆ, ಪೌರಾಣಿಕ ಯಕ್ಷಗಾನ, ಯಕ್ಷಗಾನ ತಾಳಮದ್ದಳೆಯೊಂದಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್‌ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಮಾರಂಭ ನಡೆಯಲಿದೆ ಎಂದು ನುಡಿದು ಎಲ್ಲರ ಸಹಕಾರವನ್ನು ಬಯಿಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಅವರು ಸ್ವಾಗತಿಸಿ ಗುರುನಾರಾಯಣ ಯಕ್ಷಗಾನ ಮಂಡಳಿಯ ಬಗ್ಗೆ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರಾದ ವರದ ಉಳಾÉಲ್‌, ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಶ್ರೀನಿವಾಸ ಆರ್‌. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಜಯಂತಿ ವಿ. ಉಳ್ಳಾಲ್ , ಜತೆ ಕಾರ್ಯದರ್ಶಿಗಳಾದ ಹರೀಶ್‌ ಜಿ. ಸಾಲ್ಯಾನ್‌, ಕೇಶವ ಕೋಟ್ಯಾನ್‌, ಜತೆ ಕೋಶಾಧಿಕಾರಿ ಮೋಹನ್‌ ಡಿ. ಪೂಜಾರಿ, ಸದಾಶಿವ ಕರ್ಕೇರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಧರ್ಮಪಾಲ್‌ ಅಂಚನ್‌, ಜಗನ್ನಾಥ್‌ ಅಮೀನ್‌, ನೀಲೇಶ್‌ ಪೂಜಾರಿ ಪಲಿಮಾರ್‌, ಹರೀಶ್‌ ಜಿ. ಪೂಜಾರಿ, ಸಮಾಜ ಸೇವಕ ಪ್ರಕಾಶ್‌ ಮೂಡಬಿದ್ರೆ ಮೊದಲಾದವರು ಉಪಸ್ಥಿತರಿದ್ದರು.

ಅಮೃತ ಮಹೋತ್ಸವದ ಸಂಭ್ರಮ ಕರ್ನಾಟಕ ಜಾನಪದ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಲಿಯನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಅನೇಕ ಏಳು ಬೀಳುಗಳನ್ನು ಕಂಡ ಈ ಮಂಡಳಿಯು ದಿವಂಗತ ಜಯ ಸಿ. ಸುವರ್ಣ ಅವರ ಸಲಹೆ ಮಾರ್ಗದರ್ಶನದಲ್ಲಿ ಕಲಾಭಿಮಾನಿಗಳ ಪ್ರೋತ್ಸಾಹದಿಂದ ಬೆಳೆದುಬಂದಿದೆ. ಮಂಡಳಿಯು ಇದೀಗ ಅಮೃತ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿದೆ ಎನ್ನಲು ಸಂತೋಷವಾಗುತ್ತದೆ.
ಸಂಭ್ರಮದ ಯಶಸ್ಸಿಗೆ ಎಲ್ಲರು ಸಹಕರಿಸಿ.
-ನಿತ್ಯಾನಂದ ಡಿ. ಕೋಟ್ಯಾನ್‌ , ಮಾಜಿ
ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next