Advertisement
ವಿಶೇಷ ಅಂದರೆ ನಗರ ಪ್ರದೇಶದಿಂದ ಹಿಡಿದು ಗ್ರಾಮ ಪಂಚಾಯತ್‌ವರೆಗೆ ಇದೀಗ ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಜನಪ್ರತಿನಿಧಿಗಳು ಕೂಡ ಒಬ್ಬೊಬ್ಬರಾಗಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾ ಗುತ್ತಿರುವುದು ಉತ್ತಮ ಬೆಳವಣಿಗೆ. ಆ ಮೂಲಕ, ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೂ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡು ಜಲ ಸಂರಕ್ಷಣೆಯತ್ತ ಕೈಜೋಡಿಸಿ ಎನ್ನುವ ಸಂದೇಶವನ್ನು ಕೂಡ ರವಾನಿಸುತ್ತಿದ್ದಾರೆ.
Related Articles
Advertisement
ಹೇಳಿದಂತೆ ಮಾಡಿ ತೋರಿಸಿದ ಶಾಸಕರುಉದಯವಾಣಿಯಲ್ಲಿ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಪ್ರಾರಂಭವಾದ ಸಂದರ್ಭ ತಾವು ಕೂಡ ಮನೆಯಲ್ಲಿ ಅಳವಡಿಸಿಕೊಂಡು ಕ್ಷೇತ್ರದ ಜನರನ್ನು ಅದರತ್ತ ಪ್ರೇರೇಪಿಸುವುದಾಗಿ ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದ್ದರು. ಅಲ್ಲದೆ, “ಉದಯವಾಣಿ’ಯು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜೂ. 19ರಂದು ಹಮ್ಮಿಕೊಂಡಿದ್ದ ಮಳೆಕೊಯ್ಲು ಮಾಹಿತಿ ಕಾರ್ಯಾಗಾರದಲ್ಲಿಯೂ ಇದನ್ನೆಲ್ಲ ಉಲ್ಲೇಖೀಸಿ, ಮೊದಲು ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ಸೇರಿದಂತೆ ಜಲ ಸಂರಕ್ಷಣೆಗೆ ಪೂರಕ ಕ್ರಮ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕೆಂದು ಹೇಳಿದ್ದರು. ಅದರಂತೆ ಇದೀಗ ಅವರು ತಮ್ಮ ಮನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಪಂಚಾಯತ್ ಅಧ್ಯಕ್ಷರ ಮನೆಗೂ ಮಳೆಕೊಯ್ಲು
ಮನೆಯಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ ಬಜಪೆ ಗ್ರಾ.ಪಂ. ಅಧ್ಯಕ್ಷೆ ರೋಸಿ ಮಥಾಯಸ್ ಅವರು ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ಮೂಲಕ, ಇಡೀ ಗ್ರಾಮಸ್ಥರನ್ನು ಮಳೆಕೊಯ್ಲು ಅಳವಡಿಕೆಯತ್ತ ಪ್ರೇರೇಪಿಸಲು ಮುಂದಾಗಿದ್ದಾರೆ.
ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತನಾಗಿ ಸಹೋದರನೊಂದಿಗೆ ಸೇರಿಕೊಂಡು ನಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದೇವೆ. ಜನಪ್ರತಿನಿಧಿಯಾಗಿ ನಾನು ನೀರುಳಿತಾಯಕ್ಕೆ ಮುಂದಾದರೆ ಜನರೂ ಅದನ್ನು ಅನುಕರಣೆ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಬೇಸಗೆಯಲ್ಲಿ ಮನೆಗೆ ನೀರು ಬಂದಿಲ್ಲ ಎಂದು ಆತಂಕಗೊಳ್ಳುವ ಬದಲು ನಗರದ ಜನರು ಈ ಮಳೆಗಾಲದಲ್ಲಿ ಮಳೆಕೊಯ್ಲು ವ್ಯವಸ್ಥೆ ಮನೆಗಳಲ್ಲಿ ಅಳವಡಿಸಬೇಕೆಂಬುದು ನನ್ನ ಮನವಿ.
– ಡಿ. ವೇದವ್ಯಾಸ ಕಾಮತ್,ಶಾಸಕರು ಉದಯವಾಣಿ’ಯೇ ನನಗೆ ಪ್ರೇರಣೆ
ನೀರಿಗಾಗಿ ಜನ ಸಂಕಷ್ಟ ಪಡುವುದನ್ನು ನಾಲ್ಕು ವರ್ಷಗಳಿಂದ ಹತ್ತಿರದಿಂದ ಗಮನಿಸುತ್ತಿದ್ದೇನೆ. “ಉದಯವಾಣಿ’ಯಲ್ಲಿ ಪ್ರಕಟವಾಗುತ್ತಿರುವ ಮಳೆಕೊಯ್ಲು ಅಭಿಯಾನ ನೋಡಿದ ಬಳಿಕ ನಾನೂ ಅದನ್ನು ಅಳವಡಿಸಿಕೊಳ್ಳಬೇಕು; ಆ ಮೂಲಕ ಗ್ರಾಮದ ಜನರನ್ನೂ ಪ್ರೇರೇಪಿಸಬೇಕೆಂದು ಅನ್ನಿಸಿತ್ತು. ಅದರಂತೆ ಈಗ ನಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದೇನೆ. ಹೀಗಾಗಿ, ಬಜಪೆ ಗ್ರಾಮದ ಎಲ್ಲ ನಿವಾಸಿಗಳು ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡು ಮಾದರಿಯಾಗಬೇಕೆಂದು ನನ್ನ ನಿರೀಕ್ಷೆ.
- ರೋಸಿ ಮಥಾಯಸ್, ಬಜಪೆ ಗ್ರಾ.ಪಂ. ಅಧ್ಯಕ್ಷೆ ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ
ಪತ್ರಿಕೆ ಕಾರ್ಯ ಶ್ಲಾಘನೀಯ
ಈ ಸಲ ನೀರಿನ ಅಭಾವದಿಂದ ಜನರು ಎಚ್ಚೆತ್ತುಕೊಂಡಿದ್ದಾರೆ. ಈ ಮಳೆ ಕೊಯ್ಲು ಅಭಿಯಾನ ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಗಿದೆ. ಉದಯವಾಣಿಯ ಈ ಕಾರ್ಯ ಶ್ಲಾಘನೀಯ.
- ಅನುರಾಧಾ ರಾಜೀವ್, ಸುರತ್ಕಲ್ ಉದಯವಾಣಿಯಿಂದ ಉತ್ತಮ ಅಭಿಯಾನ
ನೀರನ್ನು ಜೋಪಾನವಾಗಿ ಬಳಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಅದನ್ನು ನೆನಪಿಸುತ್ತಿರುವ ಉದಯವಾಣಿಯ ಕಾರ್ಯ ಶ್ಲಾಘನೀಯ.
- ಶಾಹಿಲ್, ಸಂತ ಅಲೋಶಿಯಸ್ ಕಾಲೇಜು ಪತ್ರಿಕೆಯ ಕಾರ್ಯ ಶ್ಲಾಘನೀಯ
ಸದ್ಯ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ನೀರನ್ನು ಮಳೆ ನೀರಿನಂತೆ ಖರ್ಚು ಮಾಡಬೇಕಾದ ಆವಶ್ಯಕತೆ ಇದೆ. ಇದನ್ನು ಜನರಿಗೆ ಮನವರಿಕೆ ಮಾಡುತ್ತಿರುವ ಉದಯವಾಣಿ ಪತ್ರಿಕೆಯ ಕಾರ್ಯ ಶ್ಲಾಘನೀಯ.
- ಹರ್ಷಿತ್ ಗೌಡ, ಮಂಗಳೂರು ಜನಸ್ನೇಹಿ ಕಾರ್ಯಕ್ರಮ
ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಉದಯವಾಣಿಯ ಜನಸ್ನೇಹಿ ಕಾರ್ಯಕ್ರಮಗಳಲ್ಲಿ ಒಂದು. ಬೇಸಗೆ ಕಾಲದಲ್ಲಿ ಟ್ಯಾಂಕರ್‌ಗಳ ಓಡಾಟ ಹೆಚ್ಚಾಗುತ್ತಿದೆ. ನೀರಿನ ಅಭಾವ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಮಳೆಕೊಯ್ಲು, ಇಂಗು ಗುಂಡಿ, ಜಲಮರುಪೂರಣಗಳ ಬಗ್ಗೆ ಪತ್ರಿಕೆ ಜನರಿಗೆ ಅರಿವು ಮೂಡಿಸುತ್ತಿರುವುದು ಉತ್ತಮ ವಿಚಾರ.
– ಪಿ. ಕೃಷ್ಣಪ್ಪ, ಪರಿಸರವಾದಿ, ಕೆ.ಎಚ್.ಬಿ. ಕಾಲನಿ